Gold Smuggling Case: ಚಿನ್ನ ಮಾರಾಟಕ್ಕೆಂದು ದುಬೈನಲ್ಲಿ ಕಂಪನಿ ತೆರೆದಿದ್ದ ನಟಿ ರನ್ಯಾ ರಾವ್..!

ಮಾರ್ಚ್ 17, 2025 - 22:00
 0  8
Gold Smuggling Case: ಚಿನ್ನ ಮಾರಾಟಕ್ಕೆಂದು ದುಬೈನಲ್ಲಿ ಕಂಪನಿ ತೆರೆದಿದ್ದ ನಟಿ ರನ್ಯಾ ರಾವ್..!

ಬೆಂಗಳೂರು: ದುಬೈನಿಂದ ಕೋಟಿ, ಕೋಟಿ ಬೆಲೆ ಬಾಳುವ ಚಿನ್ನ ಕಳ್ಳ ಸಾಗಾಟದ ಆರೋಪದಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ನಟಿ ರನ್ಯಾ ರಾವ್ ಅವರನ್ನು ಬಂಧಿಸಲಾಗಿದೆ. ಸದ್ಯ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿದ್ದಾರೆ. ತನಿಖಾಧಿಕಾರಿಗಳಿಂದ ಸ್ಫೋಟಕ ಅಂಶಗಳು ಬಯಲಾಗ್ತಿವೆ. ನಟಿ ರನ್ಯಾ ರಾವ್ ಮತ್ತು ತರುಣ್​ ದುಬೈನಲ್ಲಿ ವೈರಾ ಡೈಮಂಡ್ಸ್ ಟ್ರೇಡಿಂಗ್ ಎಂಬ ಹೆಸರಿನ ಕಂಪನಿಯನ್ನು ತೆರೆದಿದ್ದರು. ಸಿಬಿಐ ಕೂಡ ಈ ಪ್ರಕರಣದ ತನಿಖೆಯನ್ನು ನಡೆಸುತ್ತಿದೆ.

ಹೌದು ನಟಿ ರನ್ಯಾ ರಾವ್​ ಮತ್ತು ತರುಣ್​ ಚಿನ್ನ ಆಮದು ಮತ್ತು ರಫ್ತಿಗಾಗಿ 2023ರಲ್ಲಿ ವೈರಾ ಡೈಮಂಡ್ಸ್ ಟ್ರೇಡಿಂಗ್ ಎಂಬ ಹೆಸರಿನಲ್ಲಿ ಕಂಪನಿ ತೆರೆದಿದ್ದರು.

ಈ ಕಂಪನಿ ಮೂಲಕ ಅಕ್ರಮವಾಗಿ ಗಳಿಸಿದ ಹಣವನ್ನು ಸಕ್ರಮಗೊಳಿಸಿಕೊಳ್ಳುತ್ತಿದ್ದರು. ಚಿನ್ನ ಖರೀದಿ ಮಾಡಿ ವಿದೇಶಿ ಕರೆನ್ಸಿಯಲ್ಲಿ ಹಣ ಪಾವತಿಸಲಾಗುತ್ತಿತ್ತು. ಈ ಮಾಹಿತಿ ಪಡೆದು ಇಡಿ, ವೈರಾ ಡೈಮಂಡ್ಸ್ ಟ್ರೇಡಿಂಗ್ ಕಂಪನಿ ವಹಿವಾಟು ಪರಿಶೀಲನೆ ನಡೆಸುತ್ತಿದೆ. ತರುಣ್ ರಾಜು ವ್ಯವಹಾರದ ಮೇಲೂ ಇಡಿ ಅಧಿಕಾರಿಗಳ ಕಣ್ಣು ಇಟ್ಟಿದ್ದಾರೆ. ತರುಣ್ ರಾಜು ಬ್ಯಾಂಕ್ ಮಾಹಿತಿಯನ್ನು ಇಡಿ ಅಧಿಕಾರಿಗಳು ಜಾಲಾಡುತ್ತಿದ್ದಾರೆ.

ಡಿಆರ್​ಐ ತನಿಖೆ ವೇಳೆ ಹವಾಲದ ಮೂಲಕ ವ್ಯವಹಾರ ಎಂದು ತಿಳಿದಿತ್ತು. ಇದರ ಆಧಾರದ ಮೇಲೆ ಇಡಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಇಡಿ ಕೂಡ ನಟಿ ರನ್ಯಾ ರಾವ್​ ಮತ್ತು ತರುಣ್​ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow