ದೇಹದಲ್ಲಿರುವ ಪ್ರತಿಯೊಂದು ಭಾಗವು ಒಂದಕ್ಕೊಂದು ಸಂಪರ್ಕ ಇರುತ್ತದೆ. ಇದರಿಂದ ದೇಹದ ಒಂದು ಭಾಗದಲ್ಲಿ ಆಗುವ ಬದಲಾವಣೆ ಸೂಚನೆಯನ್ನು ಇನ್ನೊಂದು ಭಾಗ ಹೇಳುತ್ತದೆ. ಈ ಹೃದಯಾಘಾತ ಎನ್ನುವುದು ಚಿಕ್ಕವರಿಂದ ಹಿಡಿದು ದೊಡ್ಡವರೆಗೂ ಇತ್ತೀಚೆಗೆ ಕಾಡುತ್ತಿರುವ ಬಹು ದೊಡ್ಡ ಸಮಸ್ಯೆಯಾಗಿದೆ.
ಹೃದಯಾಘಾತದ ಪ್ರಮುಖ ಲಕ್ಷಣವೆಂದರೆ ಅದು ಎದೆನೋವು ಮತ್ತು ಅಹಿತಕರ. ಈ ವೇಳೆ ಒತ್ತಡ, ಬಿಗಿಯಾಗುವುದು, ಭಾರವಾಗುವಂತಹ ಅನುಭವ ಆಗುವುದು. ಎಡಭಾಗದಲ್ಲಿ ಅಥವಾ ಎದೆಯ ಮಧ್ಯ ಭಾಗದಲ್ಲಿ ನೋವು ಕಾಣಿಸಬಹುದು.
- ಒಂದು ಅಥವಾ ಎರಡೂ ಕೈಗಳಲ್ಲಿ ನೋವು ಅಥವಾ ಅಹಿತಕರ ವೆಂದು ಅನಿಸುತ್ತಿದ್ದರೆ ಆಗ ಇದು ಹೃದಯಾ ಘಾತದ ಲಕ್ಷಣವಾಗಿದೆ. ನೋವು ಎದೆಯಿಂದ ಎಡದ ಕೈಗೆ ಬರುವುದು. ಕೆಲವೊಂದು ಸಂದ ರ್ಭದಲ್ಲಿ ಇದು ಎರಡು ಭುಜ ಮತ್ತು ಬೆನ್ನಿಗೆ ಕೂಡ ವ್ಯಾಪಿಸ ಬಹುದು.
- ಕೆಲವೊಮ್ಮೆ ಕೈಗಳ ತೋಳುಗಳಲ್ಲಿ ಭುಜದ ಭಾಗದಲ್ಲಿ ವಿಪರೀತ ನೋವು ಕಾಣಿಸಿಕೊಳ್ಳುವುದು ಹೃದಯಾಘಾತದ ಪ್ರಮುಖ ಲಕ್ಷಣ ಗಳಲ್ಲಿ ಒಂದು ಎಂದು ವೈದ್ಯರು ಕೂಡ ಹೇಳುತ್ತಾರೆ.
- ಅದರಲ್ಲೂ ಕೈಗಳ ತೋಳುಗಳಲ್ಲಿ ಕಂಡು ಬರುವ ನೋವು ನಿಧಾನಕ್ಕೆ, ದೇಹದ ಇತರ ಭಾಗಕ್ಕೆ ಹರಡುತ್ತಿದ್ದರೆ, ನೆಗ್ಲೆಕ್ಟ್ ಮಾಡ ಬಾರದು. ಈ ಸಂದರ್ಭ ದಲ್ಲಿ ಕೂಡಲೇ ವೈದ್ಯರ ಬಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡರೆ ಬಹಳ ಒಳ್ಳೆಯದು.
ಗಂಟಲು ಮತ್ತು ದವಡೆ ನೋವು
ಕೆಲವರಲ್ಲಿ ಗಂಟಲು ಮತ್ತು ದವಡೆಯ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಅದರಲ್ಲೂ ನಡೆಯುವಾಗ ಮತ್ತು ವ್ಯಾಯಾಮ ಮಾಡುವ ವೇಳೆ ಈ ನೋವು ಕಂಡುಬರಬಹುದು. ಇದು ಹಲ್ಲು ನೋವು ಅಥವಾ ಕುತ್ತಿಗೆಯಲ್ಲಿ ಒತ್ತಡ ಬಿದ್ದಂತೆ ಆಗಬಹುದು.
ಹೊಟ್ಟೆ ನೋವು
ಹೊಟ್ಟೆಯ ಮೇಲಿನ ಭಾಗದಲ್ಲಿನ ನೋವು ಹೃದಯಾಘಾತದ ಲಕ್ಷಣವಾಗಿರಬಹುದು. ಇದು ನೋವು, ಬಿಗಿಯಾವುದು ಅಥವಾ ಒತ್ತಡವು ಕಾಣಿಸಿಕೊಳ್ಳಬಹುದು. ಇದರ ಜತೆಗೆ ವಾಂತಿ ಕೂಡ ಆಗಬಹುದು.
ನೋವಿಲ್ಲದೆ ಇರುವುದು!
- ಶೇ.೧೦ರಷ್ಟು ಹೃದಯಾಘಾತವು ತುಂಬಾ ಲಘುವಾಗಿರುವುದು ಮತ್ತು ಯಾವುದೇ ನೋವು ಕಾಣಿಸದೆ ಇರಬಹುದು. ಇದನ್ನು ಮೌನ ಹೃದಯಾಘಾತ ಎಂದು ಕರೆಯಹುದು ಮತ್ತು ಇದು ಮಧುಮೇಹಿಗಳಲ್ಲಿ, ವಯಸ್ಸಾದವರಲ್ಲಿ ಮತ್ತು ನರರೋಗ ಇರುವವರಲ್ಲಿ ಕಂಡುರಬಹುದು.
- ಹೃದಯಾಘಾತದ ಲಕ್ಷಣಗಳನ್ನು ತಿಳಿದುಕೊಳ್ಳುವುದು ಅತೀ ಅಗತ್ಯ. ಆದರೆ ಇದು ಒಬ್ಬೊಬ್ಬರಲ್ಲಿ ಒಂದೊಂದು ರೀತಿಯಾಗಿ ಇರಬಹುದು. ಎಲ್ಲರಲ್ಲೂ ಒಂದೇ ರೀತಿಯಾಗಿ ಇರಬೇಕು ಎಂದೇನಿಲ್ಲ.
- ಈ ಲಕ್ಷಣಗಳ ಜತೆಗೆ ಅತಿಯಾಗಿ ಬೆವರುವುದು, ನಿಶ್ಯಕ್ತಿ ಮತ್ತು ಆತಂಕವು ಉಂಟಾದರೆ ಆಗ ಇದು ತೀವ್ರ ರೀತಿಯ ಹೃದಯಾಘಾತದ ಲಕ್ಷವೆನ್ನಬಹುದು. ಆಗ ತಕ್ಷಣವೇ ವೈದ್ಯಕೀಯ ನೆರವು ಪಡೆಯುವುದು ಅಗತ್ಯ.