Heart Attack: ಹೃದಯಾಘಾತಕ್ಕೆ ಹಾಸನದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಬಲಿ..!

ಹಾಸನ: ರಾಜ್ಯದಲ್ಲಿ ಹೃದಯಾಘಾತದಿಂದ ಯುವ ಜನರು ಸಾವನ್ನಪ್ಪುತ್ತಿರುವುದು ಮುಂದುವರಿದಿದೆ. ಹೃದಯಾಘಾತಕ್ಕೆ ಗ್ರಾಮ ಪಂಚಾಯ್ತಿ ಮಾಜಿ ಸದಸ್ಯ ಬಲಿಯಾಗಿರುವ ಘಟನೆ ಆಲೂರು ತಾಲ್ಲೂಕಿನ ಕಲ್ಲಾರೆ ಗ್ರಾಮದಲ್ಲಿ ನಡೆದಿದೆ. ಸಂತೋಷ್, 40 ವರ್ಷ, ಮೃತ ವ್ಯಕ್ತಿಯಾಗಿದ್ದು, ಮಲಗಿದ್ದಾಗಲೇ ಬೆಳಗ್ಗಿನ ಜಾವ 5 ಗಂಟೆಯಲ್ಲಿ ಹೃದಯಾಘಾತ ಸಂಭವಿಸಿ ಮೃತಪಟ್ಟಿದ್ದಾರೆ. ಗ್ರಾಮ ಪಂಚಾಯ್ತಿ ಸದಸ್ಯರಾಗಿದ್ದ ಸಂತೋಷ್ ಸಮಾಜ ಸೇವಕರಾಗಿದ್ದರು. ಸದ್ಯ ಹೃದಯಾಘಾತಕ್ಕೆ ಬಲಿಯಾದವರ ಸಂಖ್ಯೆ 30 ಕ್ಕೆ ಏರಿಕೆಯಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






