IND vs ENG: ಸಿರಾಜ್ ಬೌಲಿಂಗ್ ದಾಳಿಗೆ ಇಂಗ್ಲೆಂಡ್ ಧೂಳೀಪಟ: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಮೊದಲ ಇನ್ನಿಂಗ್ಸ್ನಲ್ಲಿ ಕೇವಲ 224 ರನ್ಗಳಿಗೆ ಆಲೌಟ್ ಆಯಿತು. ಕರುಣ್ ನಾಯರ್ ಅರ್ಧಶತಕ ಸಿಡಿಸಿದ್ದು ಭಾರತದ ಮೊತ್ತಕ್ಕೆ ಆಸರೆಯಾಯಿತು. ಉಳಿದ ಬ್ಯಾಟರ್ಗಳು ಸಾಥ್ ನೀಡಲಾಗಿಲ್ಲ.
ಬೌಲಿಂಗ್ ವಿಭಾಗದಲ್ಲಿ ಭಾರತ ತಂಡದ ಆಟಗಾರರು ಬಿಗಿಯಾದ ದಾಳಿ ನಡೆಸಿದರು. ಇಂಗ್ಲೆಂಡ್ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 247 ರನ್ಗಳಿಗೆ ಆಲೌಟ್ ಆಗಿ, 23 ರನ್ಗಳ ಮುನ್ನಡೆ ಪಡೆದಿತು.
ಇನ್ನೆಡೆ, ಎರಡನೇ ಇನ್ನಿಂಗ್ಸ್ನಲ್ಲಿ ಟೀಮ್ ಇಂಡಿಯಾ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಜೈಸ್ವಾಲ್ ಶತಕ ಸಿಡಿಸಿದರೆ, ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಅರ್ಧಶತಕ ಗಳಿಸಿ ತಂಡವನ್ನು 396 ರನ್ಗಳಿಗೆ ಮುನ್ನಡೆಸಿದರು.
374 ರನ್ ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೊನೆಯವರೆಗೂ ಹೋರಾಟ ಮುಂದುವರಿಸಿದರೂ, ಭಾರತದ ಬೌಲರ್ಗಳು ನಿರ್ಣಾಯಕ ಕ್ಷಣದಲ್ಲಿ ವಿಕೆಟ್ಗಳನ್ನು ಕಬಳಿಸಿದರು. ಅಂತಿಮವಾಗಿ ಇಂಗ್ಲೆಂಡ್ 367 ರನ್ಗೆ ಆಲೌಟ್ ಆಯಿತು.
ಸಿರಾಜ್ ಮತ್ತು ಪ್ರಸಿದ್ಧ್ ಮಾರಕ ರಿವರ್ಸ್ ಸ್ವಿಂಗ್ ಮತ್ತು ಬೌನ್ಸ್ ಮೂಲಕ ಇಂಗ್ಲೆಂಡ್ ಬ್ಯಾಟರ್ಗಳನ್ನು ಕಾಡಲಾರಂಭಿಸಿದರು. ಪ್ರಸಿದ್ಧ್ ಸತತ ಎರಡು ಓವರ್ಗಳಲ್ಲಿ ಜಾಕೋಬ್ ಬೆಥೆಲ್ ಮತ್ತು ನಂತರ ರೂಟ್ ಅವರನ್ನು ಔಟ್ ಮಾಡಿದರು.
ಇದ್ದಕ್ಕಿದ್ದಂತೆ ಇಂಗ್ಲೆಂಡ್ನ ಸ್ಕೋರ್ 332/4 ರಿಂದ 337/6 ಕ್ಕೆ ಏರಿತು. ಆದಾಗ್ಯೂ, ಮಳೆಯಿಂದಾಗಿ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು. ಆದರೆ ಐದನೇ ದಿನದಾಟ ಆರಂಭವಾದ ಕೂಡಲೇ ಮ್ಯಾಜಿಕ್ ಟೀಂ ಇಂಡಿಯಾ ವೇಗಿಗಳು ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಸರಣಿಯನ್ನು ಡ್ರಾದಲ್ಲಿ ಕೊನೆಗೊಳಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






