IPL ಆಡಲು ಬಂದ ಮುಂಬೈ ಇಂಡಿಯನ್ಸ್ ಸ್ಟಾರ್ʼಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ನೋಟಿಸ್!

ಪಿಎಸ್ಎಲ್ ಡ್ರಾಫ್ಟ್‌ನಲ್ಲಿ ಆಯ್ಕೆಯಾದ ಕಾರ್ಬಿನ್ ಬಾಷ್ ಮುಂಬೈ ಇಂಡಿಯನ್ಸ್ ಪರ ಆಡಲು ಒಪ್ಪಂದಕ್ಕೆ ಸಹಿ ಹಾಕಿದ ನಂತರ ವಿವಾದ ಭುಗಿಲೆದ್ದಿದೆ. ಪಿಸಿಬಿ ಅವರ ವಿರುದ್ಧ ಕಾನೂನು ನೋಟಿಸ್ ಜಾರಿ ಮಾಡಿ ವಿವರಣೆ ಕೇಳಿದೆ. ಐಪಿಎಲ್ ಮತ್ತು ಪಿಎಸ್ಎಲ್ ಲೀಗ್‌ಗಳು ಏಕಕಾಲದಲ್ಲಿ ನಡೆಯುತ್ತಿರುವುದರಿಂದ ಈ ಸ್ಪರ್ಧೆ ತೀವ್ರಗೊಳ್ಳುತ್ತಿದೆ. ಪಿಸಿಬಿಯ ಸೂಚನೆಯೊಂದಿಗೆ, ವಿದೇಶಿ ಆಟಗಾರರ ಭವಿಷ್ಯದ ಬಗ್ಗೆ ಹಲವು ಅನುಮಾನಗಳು ಉದ್ಭವಿಸುತ್ತಿವೆ.
ಹೌದು ಚಾಂಪಿಯನ್ಸ್ ಟ್ರೋಫಿ ಆಡಲು ಪಾಕಿಸ್ತಾನಕ್ಕೆ ತೆರಳಲು ಭಾರತ ನಿರಾಕರಿಸಿದ್ದಕ್ಕೆ ಪ್ರತೀಕಾರ ತೀರಿಸಲೋ ಎಂಬಂತೆ ಇದೀಗ ಐಪಿಎಲ್ ನಡೆಯುವ ಸಮಯದಲ್ಲೇ ಪಿಎಸ್ ಎಲ್ ಅನ್ನು ನಡೆಸಲು ನಿರ್ಧರಿಸಿದ್ದು ಇದಕ್ಕೆ ಸಾಕ್ಷಿ. ಏತನ್ಮಧ್ಯೆ ಐಪಿಎಲ್ ನಲ್ಲಿ ಭಾಗವಹಿಸುವ ಸಲುವಾಗಿ ಪಿಎಸ್ಎಲ್ ನಲ್ಲಿ ಭಾಗವಹಿಸದ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ವಿರುದ್ಧ ಇದೀಗ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಲೀಗಲ್ ನೋಟಿಸ್ ಕಳಿಸಿದೆ.
ಮುಂಬೈ ಇಂಡಿಯನ್ಸ್ ತಂಡದ ಕಾರ್ಬಿನ್ ಬಾಶ್ ಅವರೇ ಇದೀಗ ಇಕ್ಕಟ್ಟಿನಲ್ಲಿ ಸಿಲುಕಿರುವ ಕ್ರಿಕೆಟಿಗ. ಅವರು ಪಿಎಲ್ ಎಲ್ ಹರಾಜು ಪ್ರಕ್ರಿಯೆಗೆ ನೋಂದಣಿ ಮಾಡಿಕೊಂಡಿದ್ದರು. ಜನವರಿ 13ರಂದು ನಡೆದ ಹರಾಜು ಪ್ರಕ್ರಿಯೆಯಲ್ಲಿ ಪೇಶಾವರ್ ಝಲ್ಮಿ ಫ್ರಾಂಚೈಸಿಯು ಡೈಮಂಡ್ ಕೆಟಗರಿಯಲ್ಲಿ ಖರೀದಿಸಿತ್ತು. ಇದೀಗ ಭಾರತದ ಪ್ರಮುಖ ಫ್ರಾಂಚೈಸಿಯಾಗಿರುವ ಮುಂಬೈ ಇಂಡಿಯನ್ಸ್ ಗಾಯಾಳು ಲಿಝಾರ್ಡ್ ವಿಲಿಯಮ್ಸ್ ಬದಲಿಗೆ ಸಾಗರೋತ್ತರ ಆಟಗಾರನ ಕೋಟಾದಲ್ಲಿ ಬಾಶ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಿದೆ.
ಹೀಗಾಗಿ ಬಾಶ್ ಅವರು ಪಿಎಸ್ಎಲ್ ತೊರೆದು ಐಪಿಎಲ್ ಗೆ ತೆರಳಲು ನಿರ್ಧರಿಸಿದ್ದಾರೆ. ಇದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಕಣ್ಣು ಕೆಂಪಾಗಿಸಿದೆ.ಪಿಎಸ್ಎಲ್ ಗುತ್ತಿಗೆ ಮುರಿದದ್ದಕ್ಕಾಗಿ ಬಾಶ್ ಅವರಿಗೆ ನೋಟಿಸ್ ಕಳಿಸಿದೆ. ಗುತ್ತಿಗೆ ನಿಮಮಗಳನ್ನು ಮುರಿದು ಪಿಎಸ್ಎಲ್ ನಿಂದ ಹಿಂಸರಿದಿರುವುದಕ್ಕೆ ಸಕಾರಣವನ್ನು ಕೇಳಿದೆ. ಇದಕ್ಕೆ ಇನ್ನೂ ಬಾಶ್ ಅವರು ಉತ್ತರಿಸಬೇಕಿದೆ.
ನಿಮ್ಮ ಪ್ರತಿಕ್ರಿಯೆ ಏನು?






