IPL 2025: ಮ್ಯಾಕ್ಸ್ವೆಲ್ ಟೂರ್ನಿಯಿಂದ ಔಟ್! ಪಂಜಾಬ್ ಕಿಂಗ್ಸ್ ಸೇರಿದ ಸ್ಫೋಟಕ ಬ್ಯಾಟರ್

ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಪಾಕಿಸ್ತಾನದ ಮೇಲೆ ಮೂರು ಬಾರಿ ದಾಳಿ ಮಾಡಲಾಗಿದೆ. ಆ ದೇಶದಲ್ಲಿ ಪ್ರತಿಷ್ಠಿತವೆಂದು ಪರಿಗಣಿಸಲಾದ ಪಾಕಿಸ್ತಾನ ಸೂಪರ್ ಲೀಗ್ ಇತ್ತೀಚೆಗೆ ಮತ್ತೊಂದು ಆಘಾತವನ್ನು ಅನುಭವಿಸಿದೆ. ಪೇಶಾವರ್ ಝಲ್ಮಿ ತಂಡದ ಭಾಗವಾಗಿರುವ ಈ ಆಸ್ಟ್ರೇಲಿಯಾದ ಡ್ಯಾಶಿಂಗ್ ಬ್ಯಾಟ್ಸ್ಮನ್ ಪಿಎಸ್ಎಲ್ ಟೂರ್ನಮೆಂಟ್ನಿಂದ ಹೊರಬಂದು ಐಪಿಎಲ್ಗೆ ಕಾಲಿಡಲಿದ್ದಾರೆ.
ಹೌದು ಪೇಶಾವರ್ ಝಲ್ಮಿ ಪರ ಕಾಣಿಸಿಕೊಂಡಿದ್ದ ಮಿಚೆಲ್ ಓವನ್ ಇದೀಗ ಪಂಜಾಬ್ ಕಿಂಗ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಪಂಜಾಬ್ ಕಿಂಗ್ಸ್ ತಂಡದ ಆಲ್ರೌಂಡರ್ ಗ್ಲೆನ್ ಮ್ಯಾಕ್ಸ್ವೆಲ್ ಗಾಯಗೊಂಡು ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಇದೀಗ ಅವರ ಬದಲಿಗೆ ಮಿಚೆಲ್ ಓವನ್ ಅವರನ್ನು ಬದಲಿಯಾಗಿ ಪಂಜಾಬ್ ಕಿಂಗ್ಸ್ ಆಯ್ಕೆ ಮಾಡಿಕೊಂಡಿದೆ.
ಅಂದಹಾಗೆ ಮಿಚೆಲ್ ಓವನ್ ಸ್ಫೋಟಕ ಬ್ಯಾಟಿಂಗ್ಗೆ ಹೆಸರುವಾಸಿ. ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ನಲ್ಲಿ ಅತೀ ವೇಗದ ಸೆಂಚುರಿ ಸಿಡಿಸಿದ ದಾಖಲೆ ಮಿಚೆಲ್ ಓವನ್ ಹೆಸರಿನಲ್ಲಿದೆ. ಕಳೆದ ಬಾರಿ ಬಿಬಿಎಎಲ್ನಲ್ಲಿ ಮಿಚೆಲ್ ಓವನ್ ಕೇವಲ 39 ಎಸೆತಗಳಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದರು.
ಇದರ ಜೊತೆಗೆ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ 40 ಕ್ಕಿಂತ ಕಡಿಮೆ ಎಸೆತಗಳಲ್ಲಿ ಶತಕ ಬಾರಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ದಾಖಲೆ ಕೂಡ ಮಿಚೆಲ್ ಓವನ್ ಹೆಸರಿನಲ್ಲಿದೆ. 23 ವರ್ಷದ ಮಿಚೆಲ್ 39 ಎಸೆತಗಳಲ್ಲಿ ಶತಕ ಪೂರೈಸಿ ಈ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ಬಿಬಿಎಲ್ ಫೈನಲ್ ಪಂದ್ಯದಲ್ಲಿ ಅತೀ ವೇಗದ ಅರ್ಧಶತಕ ಬಾರಿಸಿದ ದಾಖಲೆಯನ್ನು ಸಹ ಮಿಚೆಲ್ ಓವನ್ ಬರೆದಿದ್ದಾರೆ. ಸಿಡ್ನಿ ಥಂಡರ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಮಿಚೆಲ್ ಕೇವಲ 16 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ಈ ದಾಖಲೆ ನಿರ್ಮಿಸಿದ್ದರು. ಇದೀಗ ಬಿಗ್ ಬ್ಯಾಷ್ ಲೀಗ್ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ಯುವ ಬ್ಯಾಟರ್ನನ್ನು ಪಂಜಾಬ್ ಕಿಂಗ್ಸ್ ತಂಡವು ಗ್ಲೆನ್ ಮ್ಯಾಕ್ಸ್ವೆಲ್ ಅವರ ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ.
ನಿಮ್ಮ ಪ್ರತಿಕ್ರಿಯೆ ಏನು?






