IPL 2025.. ಸತತ ಗೆಲುವು: ಆರ್ಸಿಬಿ ಸಕ್ಸಸ್ ಹಿಂದೆ ಇರುವ ಜೋಡೆತ್ತು ಯಾರು ಗೊತ್ತಾ!?

2025ರ ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಅತ್ಯದ್ಭುತ ಪ್ರದರ್ಶನ ನೀಡುತ್ತಿದೆ.
ಟೇಬಲ್ ಟಾಪರ್ ಆಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಇನ್ನೇನು ಪ್ಲೇ ಆಫ್ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದೆ. ಕಳೆದ ಸೀಸನ್ಗಳಿಗಿಂತ ಭಿನ್ನವಾಗಿ ಕಾಣ್ತಿರೋ ಆರ್ಸಿಬಿ ಕಪ್ ಗೆಲ್ಲೋ ಹಾಟ್ ಫೇವರಿಟ್ ಅನಿಸಿದೆ. ಆರ್ಸಿಬಿಯ ಈ ಸಕ್ಸಸ್ಗೆ ಕಾರಣ ಏನು ಗೊತ್ತಾ.? ತಿಳಿಸುತ್ತೇವೆ ಕೇಳಿ.
ಕೊಹ್ಲಿ ಇಲ್ಲದ ಆರ್ಸಿಬಿ ಗೆಲುವು ಅಸಾಧ್ಯ ಅನ್ನೋ ಮಾತೂ ಇದೆ. ಇದಕ್ಕೆ ತಕ್ಕಂತೆ ಕೊಹ್ಲಿ ಪರ್ಫಾಮ್ ಮಾಡಿದ್ದಾರೆ. ಪ್ರತಿ ಸೀಸನ್ನಲ್ಲೂ ಕೊಹ್ಲಿಗೆ ಒಬ್ಬರು ಸಾಥ್ ಕೊಡ್ತಾರೆ. ಕೊಹ್ಲಿ ಆ್ಯಂಡ್ ಕ್ರಿಸ್ ಗೇಲ್, ಕೊಹ್ಲಿ ಆ್ಯಂಡ್ ಎಬಿಡಿ.. ಕೊಹ್ಲಿ ಆ್ಯಂಡ್ ಫಾಫ್.. ಕೊಹ್ಲಿ ಆ್ಯಂಡ್ ಮ್ಯಾಕ್ಸ್ವೆಲ್.. ಹೀಗೆ ಜೋಡೆತ್ತುಗಳ ಪರಿಪಾಠ ಆರ್ಸಿಬಿಯಲ್ಲಿ ನಡೆದುಕೊಂಡು ಬಂದಿದೆ. ಈ ಸಲ ಆರ್ಸಿಬಿಗೆ ಒಬ್ಬರಲ್ಲ.. ಇಬ್ಬರು ಜೊತೆಗಾರರು ಸಿಕ್ಕಿದ್ದಾರೆ. ಈ ನಯಾ ಜೊತೆಗಾರರು ಆರ್ಸಿಬಿ ಗೆಲುವಿನ ಹಿಂದಿನ ಸೂತ್ರಧಾರಿಗಳಾಗಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಜಯದ ಓಟಕ್ಕೆ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್, ದೇವ್ದತ್ ಪಡಿಕ್ಕಲ್ ಜುಗಲ್ಬಂದಿ ಮುಖ್ಯ ಕಾರಣವಾಗಿದೆ. ಈ ತ್ರಿವಳಿ ಆಟಗಾರರ ಜೊತೆಯಾಟವೇ ಆರ್ಸಿಬಿಗೆ ಶ್ರೀರಕ್ಷೆಯಾಗಿದೆ. ಜೋಡೆತ್ತುಗಳ ಜೊತೆಯಾಟಗಳು ಆರ್ಸಿಬಿ ತಂಡವನ್ನು ಗೆಲುವಿನ ದಡ ಸೇರಿಸ್ತಿವೆ.
ಆರ್ಸಿಬಿ ಪರ ಅದ್ಭುತ ಜೊತೆಯಾಟಗಳನ್ನು ಆಡ್ತಿರುವ ಕೊಹ್ಲಿ, ಪಡಿಕ್ಕಲ್ 7 ಇನ್ನಿಂಗ್ಸ್ಗಳಿಂದ 71.50 ಬ್ಯಾಟಿಂಗ್ ಅವರೇಜ್ನಲ್ಲಿ 429 ರನ್ ಸಿಡಿಸಿದ್ದಾರೆ. ಕೊಹ್ಲಿ – ಫಿಲ್ ಸಾಲ್ಟ್ 9 ಇನ್ನಿಂಗ್ಸ್ಗಳಿಂದ 41.77ರ ಬ್ಯಾಟಿಂಗ್ ಅವರೇಜ್ನಲ್ಲಿ 376 ರನ್ ಕೊಳ್ಳೆ ಹೊಡೆದಿದ್ದಾರೆ. ಈ ಎರಡು ಜೊತೆಯಾಟಗಳು ಪ್ರಸಕ್ತ ಐಪಿಎಲ್ನ ಗರಿಷ್ಠ ರನ್ ಜೊತೆಯಾಟದಲ್ಲಿ 2 ಹಾಗೂ 3ನೇ ಸ್ಥಾನದಲ್ಲಿದೆ.
ಆರ್ಸಿಬಿ ಪರ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಸಾಲಿಡ್ ಸ್ಟಾರ್ಟ್ ನೀಡ್ತಿದ್ದಾರೆ. ಪವರ್ ಪ್ಲೇನಲ್ಲಿ ಅಬ್ಬರಿಸ್ತಿರುವ ಈ ಜೋಡಿ, ಉತ್ತಮ ಅಡಿಪಾಯ ಹಾಕ್ತಿದೆ. ಮಿಡಲ್ ಓವರ್ಗಳಲ್ಲಿ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಗೆಲುವಿನತ್ತ ಕೊಡೊಯ್ಯುತ್ತಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






