ಎಗ್ ರೈಸ್, ಆಮ್ಲೆಟ್ ಪ್ರಿಯರೇ ಹುಷಾರ್: ಕೊಳೆತ ಮೊಟ್ಟೆ ಹಾಕಿ ನಿಮ್ಮ ಆರೋಗ್ಯ ಹದಗೆಡಿಸ್ತಾರೆ ಎಚ್ಚರ!

ನವೆಂಬರ್ 2, 2024 - 21:02
 0  11
ಎಗ್ ರೈಸ್, ಆಮ್ಲೆಟ್ ಪ್ರಿಯರೇ ಹುಷಾರ್: ಕೊಳೆತ ಮೊಟ್ಟೆ ಹಾಕಿ ನಿಮ್ಮ ಆರೋಗ್ಯ ಹದಗೆಡಿಸ್ತಾರೆ ಎಚ್ಚರ!

ಹೆಚ್ಚಿನ ಜನರು ಎಗ್ ರೈಸ್ ಮತ್ತು ಆಮ್ಲೆಟ್​ಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತಾರೆ. ಆರೋಗ್ಯಕ್ಕೂ ಕೂಡಾ ಮೊಟ್ಟೆಗಳು ಉತ್ತಮವಾಗಿದ್ದರಿಂದ ಹೆಚ್ಚಿನ ಜನರು ಇವುಗಳನ್ನು ಸೇವಿಸುತ್ತಾರೆ. ಆದರೆ, ನೀವು ತಿನ್ನುವ ಎಗ್ ರೈಸ್, ಆಮ್ಲೆಟ್ ಎಷ್ಟು ಸುರಕ್ಷಿತ ಎಂದು ಕೇಳಿದರೆ ಬೆಚ್ಚಿಬೀಳುವ ಸರದಿ ನಿಮ್ಮದಾಗಲಿದೆ. ಕೊಪ್ಪಳ ನಗರದಲ್ಲಿ ಕೆಲ ಬೀದಿಬದಿ ಹೋಟೆಲ್​ನವರು ಎಗ್ ರೈಸ್, ಆಮ್ಲೆಟ್ ಮಾಡಲು ಕೊಳೆತಿರುವ, ಒಡೆದಿರುವ ಮೊಟ್ಟೆಗಳನ್ನು ಬಳಕೆ ಮಾಡುತ್ತಿದ್ದಾರೆ.

ಕೊಪ್ಪಳ ನಗರದಲ್ಲಿ ಜಿಲಾನಿ ಎಂಬ ವ್ಯಕ್ತಿಯೋರ್ವ, ಬೈಕ್ ಮೇಲೆ ಮೊಟ್ಟೆಗಳನ್ನು ತಗೆದುಕೊಂಡು ಹೋಗುತ್ತಿದ್ದ. ಆತನ ಮೇಲೆ ಅನುಮಾನಗೊಂಡಿದ್ದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು, ಆತ ತಗೆದುಕೊಂಡು ಹೋಗುತ್ತಿದ್ದ ಮೊಟ್ಟೆಗಳನ್ನು ಪರಿಶೀಲಿಸಿದ್ದಾರೆ. ಅವು ಕೊಳೆತ ಮೊಟ್ಟೆಗಳಾಗಿದ್ದವು. ಹೀಗಾಗಿ ಅಧಿಕಾರಿಗಳು ಕೊಳೆತ ಮೊಟ್ಟೆಗಳನ್ನು ಎಲ್ಲಿಗೆ ತಗೆದುಕೊಂಡು ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಆತ, ಎಗ್ ರೈಸ್ ಹಾಗೂ ಆಮ್ಲೆಟ್ ಅಂಗಡಿಗಳಿಗೆ ಮಾರಾಟ ಮಾಡಲು ತಗೆದುಕೊಂಡು ಹೋಗುತ್ತಿರುವುದಾಗಿ ಹೇಳಿದ್ದಾನೆ.

ಅಧಿಕಾರಿಗಳ ದಾಳಿ ವೇಳೆ ನೂರಾರು ಕೊಳೆತ ಮೊಟ್ಟೆಗಳನ್ನು ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಕೊಳೆತ ಮೊಟ್ಟೆಗಳನ್ನು ಹಾಕಿ ಹೋಟೆಲ್​ನವರು ಎಗ್ ರೈಸ್, ಆಮ್ಲೆಟ್ ಮಾಡಿ ಗ್ರಾಹಕರಿಗೆ ನೀಡುತ್ತಿದ್ದಾರೆ. ಇದರಿಂದ ಟೈಫಾಯಿಡ್ ಸೇರಿದಂತೆ ಕೆಲ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow