IPL 2025: IPL ನಿಂದ 2 ವರ್ಷ ಬ್ಯಾನ್ ಆದ ವಿದೇಶಿ ಆಟಗಾರ!

ಮಾರ್ಚ್ 11, 2025 - 09:03
 0  17
IPL 2025: IPL ನಿಂದ 2 ವರ್ಷ ಬ್ಯಾನ್ ಆದ ವಿದೇಶಿ ಆಟಗಾರ!

ವಿದೇಶಿ ಆಟಗಾರರೊಬ್ಬರು IPL ನಿಂದ 2 ವರ್ಷ ಬ್ಯಾನ್ ಆಗಿದ್ದಾರೆ. 

IPLಗೆ ಆಯ್ಕೆಯಾದ ಆಟಗಾರರು ಟೂರ್ನಿ ಆಡುವುದು ಕಡ್ಡಾಯ. ಅಂದರೆ ಯಾವುದೇ ನಿರ್ದಿಷ್ಟ ಕಾರಣಗಳಿಲ್ಲದೆ ಐಪಿಎಲ್​ನಿಂದ ಹಿಂದೆ ಸರಿಯುವಂತಿಲ್ಲ. ಒಂದು ವೇಳೆ ವಿನಾಕಾರಣ ಟೂರ್ನಿಗೆ ಅಲಭ್ಯರಾದರೆ ಅವರ ಮೇಲೆ 2 ವರ್ಷಗಳ ನಿಷೇಧ ಹೇರಲಾಗುತ್ತದೆ. ಅದರಂತೆ ಇದೀಗ ಹ್ಯಾರಿ ಬ್ರೂಕ್ ಬ್ಯಾನ್​ಗೆ ಒಳಗಾಗಿದ್ದಾರೆ.

ಅಂತರರಾಷ್ಟ್ರೀಯ ಕ್ರಿಕೆಟ್​ಗಾಗಿ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳುವ ಸಲುವಾಗಿ ಬ್ರೂಕ್ ಈ ಬಾರಿಯ ಐಪಿಎಲ್​ಗೆ ಅಲಭ್ಯರಾಗುವುದಾಗಿ ತಿಳಿಸಿದ್ದಾರೆ. ಹ್ಯಾರಿ ಬ್ರೂಕ್ ಅವರ ಈ ನಿರ್ಧಾರವೇ ಇದೀಗ ಅವರಿಗೆ ಮುಳುವಾಗಲಿದೆ. ಏಕೆಂದರೆ ಇಂಡಿಯನ್ ಪ್ರೀಮಿಯರ್ ಲೀಗ್​ನ ಹೊಸ ನಿಯಮದ ಪ್ರಕಾರ, ಐಪಿಎಲ್​ ಮೆಗಾ ಹರಾಜಿನ ಮೂಲಕ ಆಯ್ಕೆಯಾದ ಆಟಗಾರರು ಟೂರ್ನಿಯಿಂದ ಹಿಂದೆ ಸರಿದರೆ ಅಂತಹ ಆಟಗಾರರ ಮೇಲೆ 2 ವರ್ಷಗಳ ನಿಷೇಧ ಹೇರಲಾಗುತ್ತದೆ.

ಇಂತಹದೊಂದು ನಿಯಮ ಜಾರಿಗೊಳಿಸಲು ಮುಖ್ಯ ಕಾರಣ, ಕೆಲ ಆಟಗಾರರು ಆಯ್ಕೆಯಾದರೂ ಐಪಿಎಲ್ ಆರಂಭದ ವೇಳೆ ಹಿಂದೆ ಸರಿಯುತ್ತಿರುವುದು. ವಿದೇಶಿ ಆಟಗಾರರ ಇಂತಹ ನಡೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಬಿಸಿಸಿಐ ಹೊಸ ನಿಯಮವನ್ನು ಪರಿಚಯಿಸಿದೆ.

ಅದರಂತೆ ಈ ಬಾರಿಯ ಐಪಿಎಲ್​ನ ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದ ಹ್ಯಾರಿ ಬ್ರೂಕ್ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಬರೋಬ್ಬರಿ 6.25 ಕೋಟಿ ರೂ.ಗೆ ಖದೀಸಿತ್ತು. ಇದೀಗ ಟೂರ್ನಿ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಬ್ರೂಕ್ ಐಪಿಎಲ್​ನಿಂದ ಹಿಂದೆ ಸರಿದಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow