IPL 2025 KKR vs DC: ರಿಂಕು ಸಿಂಗ್ ಕಪಾಳಕ್ಕೆ ಬಾರಿಸಿದ ಕುಲ್ದೀಪ್ ಯಾದವ್..! ಯಾಕೆ ಗೊತ್ತಾ..?

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ 48ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡ ಸೋಲನುಭವಿಸಿದೆ. ಈ ಸೋಲಿಗೆ ಪ್ರಮುಖ ಕಾರಣ ರಿವ್ಯೂ ತೆಗೆದುಕೊಳ್ಳದಿರುವುದು ಎಂದರೆ ತಪ್ಪಾಗಲಾರದು. ಏಕೆಂದರೆ ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಅಕ್ಷರ್ ಪಟೇಲ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 113 ರನ್ಗಳಿಗೆ 4 ವಿಕೆಟ್ ಕಳೆದುಕೊಂಡಿತ್ತು.
ಈ ಹಂತದಲ್ಲಿ ಕಣಕ್ಕಿಳಿದ ರಿಂಕು ಸಿಂಗ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಆದರೆ ಇದೇ ರಿಂಕು ಸಿಂಗ್ ಕೇವಲ 13 ರನ್ಗಳಿಸಿದಾಗ ಪೆವಿಲಿಯನ್ ಸೇರಬೇಕಿತ್ತು. ಅಕ್ಷರ್ ಪಟೇಲ್ ಎಸೆದ 14ನೇ ಓವರ್ನ ನಾಲ್ಕನೇ ಎಸೆತವನ್ನು ಲೆಗ್ ಸೈಡ್ನತ್ತ ಬಾರಿಸಲು ರಿಂಕು ಸಿಂಗ್ ಪ್ರಯತ್ನಿಸಿದರು.ಈ ಗುರಿಯನ್ನು ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್ಗಳಲ್ಲಿ 190 ರನ್ಗಳಿಸಿ 14 ರನ್ಗಳಿಂದ ಸೋಲೊಪ್ಪಿಕೊಂಢಿದೆ.
ಈ ಪಂದ್ಯದ ಸಮಾರೋಪ ಸಮಾರಂಭದ ಉಭಯ ತಂಡಗಳ ಆಟಗಾರರು ಜೊತೆಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ಕೆಕೆಆರ್ ತಂಡದ ರಿಂಕು ಸಿಂಗ್ ಅವರಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕುಲ್ದೀಪ್ ಯಾದವ್ ಕಪಾಳ ಮೋಕ್ಷ ಮಾಡಿದ್ದಾರೆ. ಇಬ್ಬರು ಟೀಮ್ ಇಂಡಿಯಾ ಆಟಗಾರರಾಗಿರುವ ಕಾರಣ ತುಂಬಾ ಆತ್ಮೀಯತೆ ಇದೆ.
ಹೀಗಾಗಿ ರಿಂಕು ಸಿಂಗ್ ಅವರನ್ನು ನೋಡುತ್ತಿದ್ದಂತೆ ಕುಲ್ದೀಪ್ ಯಾದವ್ ಮುಖಕ್ಕೆ ಹೊಡೆದಿದ್ದಾರೆ. ಈ ವೇಳೆ ರಿಂಕು ತುಸು ಕೋಪಗೊಂಡಂತೆ ಕಂಡು ಬಂದರು. ರಿಂಕುವಿನ ಸಿಟ್ಟು ನೋಡುತ್ತಿದ್ದಂತೆ ಕುಲ್ದೀಪ್ ಮತ್ತೊಮ್ಮೆ ಕಪಾಳಕ್ಕೆ ಬಾರಿಸಿದರು. ಇದೀಗ ಆಟಗಾರರ ನಡುವಣ ಈ ಆತ್ಮೀಯ ಕ್ಷಣಗಳ ವಿಡಿಯೋ ವೈರಲ್ ಆಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






