IPL ಅಭಿಮಾನಿಗಳಿಗೆ ಗುಡ್‌ ನ್ಯೂಸ್: ನಮ್ಮ ಮೆಟ್ರೊ ಸಂಚಾರ ಅವಧಿ ವಿಸ್ತರಿಸಿದ BMRCL..!

ಎಪ್ರಿಲ್ 1, 2025 - 21:01
 0  9
IPL ಅಭಿಮಾನಿಗಳಿಗೆ ಗುಡ್‌ ನ್ಯೂಸ್: ನಮ್ಮ ಮೆಟ್ರೊ ಸಂಚಾರ ಅವಧಿ ವಿಸ್ತರಿಸಿದ BMRCL..!

ಬೆಂಗಳೂರು: ನಾಳೆ ಬೆಂಗಳೂರಿನಲ್ಲಿ ಐಪಿಎಲ್ ಸೀಸನ್ 18ರ ಮೊದಲ ಮ್ಯಾಚ್ ನಡೆಯಲಿದ್ದು, ಆರ್‌ಸಿಬಿ-ಜಿಟಿ ಮುಖಾಮುಖಿಯಾಗಲಿದೆ. ಈ ಹಿನ್ನೆಲೆ ಬೆಂಗಳೂರಿನಲ್ಲಿ ನಡೆಯುವ ಎಲ್ಲಾ ಐಪಿಎಲ್ ಪಂದ್ಯಾವಳಿಗಳಿಗೆ ಮೆಟ್ರೋ ಸೇವೆ ವಿಸ್ತರಿಸಲಾಗಿದೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.

ಬೆಂಗಳೂರಿನಲ್ಲಿ ಒಟ್ಟು 7 ಮ್ಯಾಚ್‌ಗಳು ನಡೆಯಲಿವೆ. 7 ಪಂದ್ಯಗಳು ನಡೆಯುವ ದಿನ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗಿದೆ. ಮೆಟ್ರೋ ರೈಲು ಸೇವೆಯನ್ನು ರಾತ್ರಿ 12:30ರವರೆಗೂ ವಿಸ್ತರಿಸಿದೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ಚಲ್ಲಘಟ್ಟ, ಮಾದಾವರ, ರೇಷ್ಮೆ ಸಂಸ್ಥೆ ಮತ್ತು ವೈಟ್‌ಫೀಲ್ಡ್ ಮಾರ್ಗಗಳಲ್ಲಿ ಮಧ್ಯ ರಾತ್ರಿ 12:30ರವರೆಗೂ ಮೆಟ್ರೋ ಸಂಚರಿಸಲಿದೆ. ಮೆಜೆಸ್ಟಿಕ್‌ನಿಂದ ಕೊನೆಯ ರೈಲು ನಾಲ್ಕು ಟರ್ಮಿನಲ್‌ಗಳಿಗೂ ಮಧ್ಯರಾತ್ರಿ 1:15ಕ್ಕೆ ಹೊರಡಲಿದೆ. ಏ.8, ಏ.10, ಏ.18, ಏ.24, ಮೇ 3, 13 ಮತ್ತು 17ರಂದು ಬೆಂಗಳೂರಿನಲ್ಲಿ ಐಪಿಎಲ್ ಮ್ಯಾಚ್ ನಡೆಯಲಿವೆ. ನಾಳೆ (ಏ.2) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಮತ್ತು ಜಿಟಿ ತಂಡದ ನಡುವೆ ಮೊದಲ ಪಂದ್ಯ ನಡೆಯಲಿದೆ. 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow