IPL ಮೆಗಾ ಆಕ್ಷನ್ ಗೆ ದಿನಗಣೆಗೆ: ಕನ್ನಡಿಗನ ಮೇಲೆ ಬಿತ್ತು MI ಕಣ್ಣು, ಮುಂಬೈ ಪಾಲಾಗ್ತಾರಾ ರಾಹುಲ್!

ಹೀಗಾಗಲೇ ಐಪಿಎಲ್ನ ರಿಟೈನ್ಶನ್ನ ಟೆನ್ಶನ್ ಮುಗಿದಿದೆ. ಅಳೆದು ತೂಗಿ, ಲೆಕ್ಕಾಚಾರ ಹಾಕಿ ಬೇಕಾದ ಆಟಗಾರರನ್ನ ಉಳಿಸಿಕೊಂಡಿರುವ ಫ್ರಾಂಚೈಸಿಗಳು, ಈಗ ಮೆಗಾ ಹರಾಜಿನಲ್ಲಿ ಯಾರಿಗೆ ಮಣೆ ಹಾಕಬೇಕು.? ಅನ್ನೋ ಸ್ಟ್ರಾಟರ್ಜಿಯಲ್ಲಿ ಬ್ಯೂಸಿಯಾಗಿವೆ. ತಂಡಕ್ಕೆ ಫಿಟ್ ಆಗುವಂತ ಆಟಗಾರರ ಲಿಸ್ಟ್ ಮಾಡಿಕೊಳ್ಳುತ್ತಿರುವ ಫ್ರಾಂಚೈಸಿಗಳು, ಮೆಗಾ ಹರಾಜಿನಲ್ಲಿ ಹಣದ ಹೊಳೆ ಹರಿಸಲು ಪ್ಲಾನ್ ರೂಪಿಸುತ್ತಿವೆ. ಚಾಂಪಿಯನ್ ಟೀಮ್ ಮುಂಬೈ ಇಂಡಿಯನ್ಸ್ ಕೂಡ ಇದ್ರಿಂದ ಹೊರತಾಗಿಲ್ಲ
ಸ್ಟಾರ್ ಆಟಗಾರರ ದಂಡನ್ನೇ ಉಳಿಸಿಕೊಂಡಿರುವ ಮುಂಬೈ, ಹರಾಜಿನಲ್ಲಿ ಕೆ.ಎಲ್.ರಾಹುಲ್ನ ಖರೀದಿಸುತ್ತಾ ಎಂಬ ಪ್ರಶ್ನೆ ನಿಮ್ಮನ್ನ ಕಾಡಬಹುದು. ಆದ್ರೆ, ಇದಕ್ಕೆ ಪ್ರಮುಖ ಕಾರಣ ಒಂದಿದೆ. ಒಂದೇ ಕಲ್ಲಲ್ಲಿ 2 ಹಕ್ಕಿ ಹೊಡೆಯುವುದು ಮುಂಬೈ ಪ್ಲಾನ್,! ರಿಟೈನ್ಶನ್ನಲ್ಲಿ ಇಶಾನ್ ಕಿಶನ್ನ ಕೈಬಿಟ್ಟಿರುವ ಮುಂಬೈ, ವಿಕೆಟ್ ಕೀಪರ್ ಆ್ಯಂಡ್ ಓಪನರ್ ಬ್ಯಾಟರ್ನ ಹುಡುಕಾಟದಲ್ಲಿದೆ. ಹೀಗಾಗಿ ವಿಕೆಟ್ ಕೀಪಿಂಗ್ ಜೊತೆಗೆ ಆರಂಭಿಕನಾಗಿ ಅಬ್ಬರಿಸಬಲ್ಲ ಕೆ.ಎಲ್ ರಾಹುಲ್ ತಂಡಕ್ಕೆ ಕರೆತರುವ ಲೆಕ್ಕಾಚಾರ ಹಾಕಿದೆ.
ಮುಂಬೈ ಇಂಡಿಯನ್ಸ್ ಕೋರ್ ಟೀಮ್ ಬಗ್ಗೆ ಹೆಚ್ಚು ಒಲವು ಹೊಂದಿದೆ. ಹೀಗಾಗಿ ಇಶಾನ್ ಕಿಶನ್ರನ್ನ ರೈಟ್ ಟು ಮ್ಯಾಚ್ ಕಾರ್ಡ್ ಅಡಿ ಖರೀದಿಸೋದು ಫಸ್ಟ್ ಅಜೆಂಡಾವಾಗಿದೆ. ಆದ್ರೆ, ಈ ಕಿಶನ್, ಮೆಗಾ ಹರಾಜಿನಲ್ಲಿ ಬಿಗ್ ಅಮೌಂಟ್ಗೆ ಸೇಲ್ ಆಗೋ ಚಾನ್ಸ್ ಹೆಚ್ಚಿದೆ. ಮುಂಬೈ ಪರ್ಸ್ನಲ್ಲಿ ಕೇವಲ 45 ಕೋಟಿ ಮಾತ್ರ ಉಳಿದಿದೆ. ಹೀಗಾಗಿ ಇಶಾನ್ ಖರೀದಿಗೆ ಕನಿಷ್ಠ 15ರಿಂದ 16 ಕೋಟಿ ಹಣ ಬೇಕಾಗುತ್ತೆ. ಹೀಗಾಗಿ ಮೆಗಾ ಹರಾಜಿನಲ್ಲಿ ಕಿಶನ್ ಕೈಗೆಟುಕದಿದ್ರೆ, ಆಗ ಕೆ.ಎಲ್ ರಾಹುಲ್ ಟಾರ್ಗೆಟ್ ಮಾಡುವುದು ಮುಂಬೈ ಇಂಡಿಯನ್ಸ್ ಲೆಕ್ಕಾಚಾರವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






