Kanrna Serial: ಇಂದು ರಾತ್ರಿ 8 ಗಂಟೆಗೆ “ಕರ್ಣ” ಸೀರಿಯಲ್ ಲಾಂಚ್! ಕೊನೆಗೂ ಗೆದ್ದ ಭವ್ಯಾ ಗೌಡ

ನಟ ಕಿರಣ್ ರಾಜ್ ಅಭಿನಯದ 'ಕರ್ಣ' ಸೀರಿಯಲ್ ಬಹಳ ನಿರೀಕ್ಷೆ ಮೂಡಿಸಿತ್ತು. ''ಕರ್ಣ ಅಂದರೆ ಅವಮಾನಗಳನ್ನೆಲ್ಲ ಸಹಿಸಿ ನಗು ಹಂಚೋನು, ಅಡೆತಡೆಗಳನ್ನೆಲ್ಲ ದಾಟಿ ಜೀವ ರಕ್ಷಕ ಆಗೋನು. ಕೇಡು ಬಯಸುವ ಜನರ ಮಧ್ಯೆ ಹೊಸ ಭರವಸೆಯಾಗಿ ಬರ್ತಿದ್ದಾನೆ ಕರ್ಣʼʼ ಎಂಬ ಮಾರ್ಮಿಕ ಸಾಲುಗಳ ಪ್ರೋಮೊವನ್ನು ಝೀ ಕನ್ನಡ ವಾಹಿನಿ ಬಿಡುಗಡೆ ಮಾಡಿದೆ.
ಝೀ ಕನ್ನಡ ವಾಹಿನಿಯಲ್ಲಿ ಈ ಧಾರಾವಾಹಿ ಜೂನ್ 16ರಂದು ರಾತ್ರಿ 8 ಗಂಟೆಗೆ ಪ್ರಸಾರ ಕಾಣಬೇಕಿತ್ತು. ಆದರೆ ʼಕರ್ಣʼ ಧಾರಾವಾಹಿಯ ಪ್ರಸಾರವನ್ನು ಕೊನೇ ಕ್ಷಣದಲ್ಲಿ ಏಕಾಏಕಿ ರದ್ದು ಮಾಡಲಾಗಿತ್ತು. ಈ ಧಾರಾವಾಹಿ ಸದ್ಯಕ್ಕೆ ಟೆಲಿಕಾಸ್ಟ್ ಆಗುವುದಿಲ್ಲ, ಆದರೆ ಮುಂದೆ ರಾತ್ರಿ 8 ಗಂಟೆಗೆ ಪ್ರಸಾರ ಆಗುವುದು ಖಚಿತ ಎಂಬ ಮಾಹಿತಿಯನ್ನು ವಾಹಿನಿ ನೀಡಿತ್ತು. ಆದಷ್ಟು ಬೇಗ ಪುನಃ ನಿಮ್ಮ ಮುಂದೆ ಬರುತ್ತೇವೆ ಎಂದು ಹೇಳಿತ್ತು. ಹೇಳಿದಂತೆ ಸರಿಯಾಗಿ ಈಗ ಧಾರಾವಾಹಿಯ ಪ್ರಸಾರದ ದಿನವನ್ನು ಝೀ ವಾಹಿನಿ ಖುಷಿಯಿಂದ ಘೋಷಿಸಿದೆ.
ಸೋಮ-ಶುಕ್ರ ಪ್ರತಿ ರಾತ್ರಿ 8 ಗಂಟೆಗೆ ಕರ್ಣ ಸೀರಿಯಲ್ ಪ್ರಸಾರವಾಗಲಿದೆ. ಈ ಬಗ್ಗೆ ಖುದ್ದು ಜೀ ಕನ್ನಡ ತನ್ನ ಅಫೀಷಿಯಲ್ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ದಿಢೀರ್ ಅಂತ ಕರ್ಣ ಡೇಟ್ ಮುಂದೂಡಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಟ ಕಿರಣ್ ರಾಜ್ ಅವರು ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದರು. ಕರ್ಣನಾಗಿ ನಿಮ್ಮ ಮನೆಗೆ ಬರಬೇಕಿತ್ತು.
ಆದರೆ ಕೆಲ ಕಾರಣಗಳಿಂದ ಅದು ಆಗಲಿಲ್ಲ. ಹೀಗಾಗಿ ಎಲ್ಲ ವೀಕ್ಷಕರ ಬಳಿ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದರು ಕಿರಣ್ ರಾಜ್. ಅದೇ ರೀತಿ ನಿತ್ಯಾ ಪಾತ್ರ ಮಾಡ್ತಿರೋ ನಮ್ರತಾ ಗೌಡ ಅವರು ಕೂಡ ಕ್ಷಮೆ ಕೇಳಿದ್ದರು. ಆದಷ್ಟು ಬೇಗ ನಿಮ್ಮ ಮುಂದೆ ಬಂದೇ ಬರ್ತಿವಿ ಅಂತ ಕೂಡ ಭರವಸೆ ಕೊಟ್ಟಿದ್ದರು. ಇಂದಿನಿಂದ ಝೀ ಕನ್ನಡದಲ್ಲಿ ರಾತ್ರಿ 8.00 ಗಂಟೆಗೆ ಕರ್ಣ ಸೀರಿಯಲ್ ಪ್ರಸಾರವಾಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






