ಬೈಕ್’ಗೆ ಡಿಕ್ಕಿ ಹೊಡೆದ ಟ್ರಕ್: ತಂದೆ, 4 ಮಕ್ಕಳು ಸೇರಿ ಐವರು ಸಾವು!

ಜುಲೈ 3, 2025 - 21:17
ಜುಲೈ 3, 2025 - 18:25
 0  20
ಬೈಕ್’ಗೆ ಡಿಕ್ಕಿ ಹೊಡೆದ ಟ್ರಕ್: ತಂದೆ, 4 ಮಕ್ಕಳು ಸೇರಿ ಐವರು ಸಾವು!

ಲಕ್ನೋ:- ಉತ್ತರ ಪ್ರದೇಶದ ಬುಲಂದ್ ಶಹರ್ ರಸ್ತೆಯ ಮಿನಿಲ್ಯಾಂಡ್ ಶಾಲೆ ಬಳಿ ರಾಂಗ್ ರೂಟ್‌ಲ್ಲಿ ವೇಗವಾಗಿ ಬಂದ ಟ್ರಕ್‌ವೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ 4 ಮಕ್ಕಳು ಸೇರಿ ಐವರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜರುಗಿದೆ. 

ಡ್ಯಾನಿಶ್, ಅವರ ಇಬ್ಬರು ಮಕ್ಕಳು ಹಾಗೂ ಸಹೋದರನ ಮಕ್ಕಳು ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಸ್ನೇಹಿತನ ತೋಟದಲ್ಲಿರುವ ಈಜುಕೊಳದಿಂದ ಬೈಕ್‌ನಲ್ಲಿ ಹಿಂದಿರುಗುವಾಗ ಈ ಘಟನೆ ಸಂಭವಿಸಿದೆ. ಟ್ರಕ್ ಡಿಕ್ಕಿಯಾದ ರಭಸಕ್ಕೆ ಬೈಕ್ ಸಂಪೂರ್ಣವಾಗಿ ಜಖಂಗೊಂಡಿದ್ದು, ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ಬಳಿಕ ಟ್ರಕ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow