ಬೆಂಗಳೂರಿಗರೇ ಎಚ್ಚರ.. ಕಳ್ಳ ಬರ್ತಾನೇ ಕಾರು ಪಾರ್ಟ್ಸ್ ಕದ್ದು, ಎಸ್ಕೇಪ್ ಆಗ್ತಾನೆ!

ಆಗಸ್ಟ್ 6, 2025 - 11:12
 0  13
ಬೆಂಗಳೂರಿಗರೇ ಎಚ್ಚರ.. ಕಳ್ಳ ಬರ್ತಾನೇ ಕಾರು ಪಾರ್ಟ್ಸ್ ಕದ್ದು, ಎಸ್ಕೇಪ್ ಆಗ್ತಾನೆ!

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಕಾರು ಕಳ್ಳತನ ಆಗೋದು ಕಾಮನ್‌ ಆಗಿದೆ. ಆದ್ರೆ ಇಲ್ಲೊಬ್ಬ ಕಳ್ಳ ಮಾಡೋ ಕೆಲಸಕ್ಕೆ ಪೊಲೀಸರೇ ಶಾಕ ಆಗಿದ್ದಾರೆ. ಹೌದು ಜಯನಗರದ ನಿವಾಸವೊಂದರಲ್ಲಿ ಸ್ಪೇರ್ ಪಾರ್ಟ್ಸ್ಕಳ್ಳರ ಹಾವಳಿ ಹೆಚ್ಚಾಗಿದೆ. ವಸತಿ ಪ್ರದೇಶಗಳನ್ನೇ ಗುರಿಯಾಗಿರಿಸಿಕೊಂಡು ಕಳವು ಮಾಡುತ್ತಿರುವುದು ಕಂಡು ಬಂದಿದೆ.

ಮೊದಲು ಫೇಕ್ನಂಬರ್ಪ್ಲೇಟ್ಅಳವಡಿಸಿ ಬಳಿಕ ತನ್ನ ಕಳ್ಳತನವನ್ನು ಶುರುಮಾಡುವ ಖದೀಮರು ಬೆಳಗಿನ ಜಾವದಲ್ಲಿ ಕಳ್ಳತನಕ್ಕಿಳಿಯುತ್ತಿದ್ದಾರೆ. ಕೈಗೆ ಸಿಕ್ಕ ಕಾರುಗಳು ವೀಲ್‌, ಮಿರರ್‌, ಮುಂತಾದವುಗಳನ್ನು ಎಗರಿಸುತ್ತಿದ್ದಾರೆ. . 

ಈತ ಜಯನಗರದ ನಿವಾಸವೊಂದರ ಎದುರು ನಿಲ್ಲಿಸಿದ್ದ ಕಾರಿನಲ್ಲಿ ತನ್ನ ಕೈಚಳಕ ತೋರಿಸಿರುವುದು ಸಿಸಿಟಿವಿ ಕೆಮೆರಾದಲ್ಲಿ ಪತ್ತೆಯಾಗಿದೆ. ಜಯನಗರ ಪೊಲೀಸ್ಠಾಣೆಯಲ್ಲಿ ಕುರಿತು ದೂರು ದಾಖಲಿಸಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow