ಗವಿಸಿದ್ದಪ್ಪ ಪ್ರಕರಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್: ಕೊ*ಲೆ ಹಿಂದೆ ‘ಅವಳ’ ಹೆಜ್ಜೆ?

ಕೊಪ್ಪಳ ಜಿಲ್ಲೆಯಲ್ಲಿ ಆ.3ರಂದು ನಡೆದಿದೆ ಭೀಕರ ಕೊಲೆ ಪ್ರಕರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. 27 ವರ್ಷದ ಯುವಕ ಗವಿಸಿದ್ದಪ್ಪನನ್ನು ನಡುರಸ್ತೆಯಲ್ಲಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದ ಪ್ರಕರಣದ ಹಿಂದೆ ಟ್ರಯಾಂಗಲ್ ಲವ್ ಸ್ಟೋರಿ ಎನ್ನುವ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಒಂದು ದಿನದೊಳಗೇ ಒಬ್ಬ ಆರೋಪಿಯು ಪೊಲೀಸ್ ಠಾಣೆಗೆ ಶರಣಾಗಿದ್ದು, ಇದೀಗ ಕೊಲೆಗೆ ಸಹಾಯ ಮಾಡಿದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆಳವಾಗಿ ಮುಂದುವರೆಸಿದ್ದು, ಈ ಮಧ್ಯೆ ಈ ಪ್ರಕರಣಕ್ಕೆ ರಾಜಕೀಯ ಕಲೆಯೂ ಸೇರುವ ಲಕ್ಷಣಗಳು ಕಂಡುಬರುತ್ತಿವೆ.
ಹತ್ಯೆಯಾದ ಗವಿಸಿದ್ದಪ್ಪ ವಾಲ್ಮೀಕಿ ಸಮುದಾಯದ ಯುವಕನಾಗಿದ್ದರಿಂದ, ಈ ಕೊಲೆ ಘಟನೆಗೆ ಸಮುದಾಯ ಗಂಭೀರವಾಗಿ ಪ್ರತಿಕ್ರಿಯೆ ನೀಡುತ್ತಿದೆ. ಈ ಹತ್ಯೆಯನ್ನು ಖಂಡಿಸಿ ಸಮುದಾಯದ ಮುಖಂಡರು ದೊಡ್ಡ ಮಟ್ಟದ ಹೋರಾಟ ನಡೆಸುವ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ.
ಕೊಲೆಯ ಬಳಿಕ ಗವಿಸಿದ್ದಪ್ಪನ ಮನೆಗೆ ಮಾಜಿ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಗವಿಸಿದ್ದಪ್ಪನ ತಾಯಿ ರಾಮುಲು ಅವರ ಕಾಲಿಗೆ ಬಿದ್ದು ಗೋಳಾಡಿದ್ರು, ಸಹೋದರಿಯರು ಸಹ ನ್ಯಾಯಕ್ಕಾಗಿ ಕಣ್ಣೀರಿಟ್ಟರು.
ಶ್ರೀರಾಮುಲು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಈ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಹಂತಕ ಪಿಎಫ್ಐ ಸಂಘಟನೆಯ ಸದಸ್ಯನಾಗಿದ್ದನೆಂದು ಗಂಭೀರ ಆರೋಪ ಮಾಡಿದ್ದಾರೆ. ಗವಿಸಿದ್ದಪ್ಪನ ತಂದೆ ಮಾತಿನಲ್ಲಿ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ತಮ್ಮ ಮಗನ ಸಾವಿಗೆ ಕಾರಣಳಾದ ಯುವತಿಯ ವಿರುದ್ಧವೂ ದೂರು ನೀಡಲು ತೀರ್ಮಾನಿಸಿರುವುದಾಗಿ ತಿಳಿಸಿದ್ದಾರೆ.
ಗವಿಸಿದ್ದಪ್ಪ ತನ್ನ ಮಾಜಿ ಪ್ರೇಯಸಿ ಮುಸ್ಲಿಂ ಯುವತಿಗೆ ಟಾರ್ಚರ್ ಕೊಡುತ್ತಿದ್ದನಂತೆ. ಈ ಕಾರಣದಿಂದ ಕೊಲೆಯಾಗಿದೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ಅವರು ಹೇಳಿದ್ದಾರೆ. ಗವಿಸಿದ್ದಪ್ಪನ ಕೊಲೆಗೆ ಮುಸ್ಲಿಂ ಯುವತಿ ಕಾರಣ ಎಂದು ಗವಿಸಿದ್ದಪ್ಪನ ತಂದೆ ಹೇಳಿದ್ದಾರೆ.
ನಾನು ಅವಳ ವಿರುದ್ಧವೂ ದೂರು ಕೊಡುತ್ತೇನೆ. ಮುಸ್ಲಿಂ ಯುವತಿಗೆ ನನ್ನ ಮಗ ಟಾರ್ಚರ್ ಕೊಟ್ಟಿಲ್ಲ. ಎಸ್ಪಿ ಸುಳ್ಳು ಹೇಳತ್ತಿದ್ದಾರೆ. ಮುಸ್ಲಿಂ ಯುವತಿ ಹಾಗೂ ಗವಿಸಿದ್ದಪ್ಪ ಪ್ರೀತಿ ಮಾಡುವ ವಿಚಾರ ಎರಡೂ ಮನೆಯವರಿಗೆ ಗೊತ್ತಿತ್ತು. ಅವಳೇ ನಮ್ಮ ಮಗನಿಗೆ ಕರೆ ಮಾಡಿ ಕಿರಿಕಿರಿ ಮಾಡುತ್ತಿದ್ದಳು. ಕೊಲೆಗೆ ಸಾಧಿಕ್ ಹಾಗೂ ಮುಸ್ಲಿಂ ಯುವತಿ ಇಬ್ಬರು ಕಾರಣ ಎಂದಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮ ಪ್ರತಿಕ್ರಿಯೆ ಏನು?






