Kantara 1 Movie: ಲಂಡನ್‌ʼನಲ್ಲಿ "ಕಾಂತಾರ 1" ಚಿತ್ರ ನೋಡಲಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್!

ಸೆಪ್ಟೆಂಬರ್ 29, 2025 - 19:59
 0  15
Kantara 1 Movie: ಲಂಡನ್‌ʼನಲ್ಲಿ "ಕಾಂತಾರ 1" ಚಿತ್ರ ನೋಡಲಿದ್ದಾರೆ ಅಶ್ವಿನಿ ಪುನೀತ್ ರಾಜ್‌ಕುಮಾರ್!

ಅಕ್ಟೋಬರ್​ 2 ರಂದು ಅಂದರೆ ವಿಜಯ ದಶಮಿಯಂದು ಡಿವೈನ್​ ಸ್ಟಾರ್​ ರಿಷಬ್​ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್​ ಯುವರಾಣಿಯಾಗಿ ಮಿಂಚಿರುವ ಕಾಂತಾರ ಚಾಪ್ಟರ್​ -1 ಸಿನಿಮಾ ಬಿಡುಗಡೆಯಾಗಲಿದೆ. ಮೊನ್ನೆಯಷ್ಟೇ ‘ಇದೇ ನಮ್ಮ ಮೂಲಗ, ಇಲ್ಲೇ ಅದೊಂದು ದೊಡ್ಡ ದಂತಕತೆ’ ಎನ್ನುತ್ತ ಕಾಂತಾರ ಪ್ರೀಕ್ವೇಲ್​ನ ಟ್ರೈಲರ್​ ರಿಲೀಸ್ ಆಗಿದೆ.

ರಿಷಬ್ ಶೆಟ್ಟಿ ಮತ್ತೊಮ್ಮೆ ರೋಮಾಂಚನಕಾರಿ ದೃಶ್ಯಕಾವ್ಯದೊಳಗೆ ನಮ್ಮನ್ನ ಕರೆದೊಯ್ದಿದ್ದಾರೆ. ಚಿತ್ರದ ಟ್ರೈಲರ್​ ಅದ್ಭುತವಾಗಿ ಮೂಡಿಬಂದಿದ್ದು, ಧರ್ಮ ಕಾಪಾಡಲು ಬಂದಿರುವ  ಗಣಗಳು ಸುತ್ತ ಹಾಗೂ ಸಿಕ್ಕಿರುವ ಕಾರ್ಣಿಕ ಕಲ್ಲಿನ ಹಿಂದಿರುವ ಸ್ಟೋರಿ ಏನು ಅನ್ನೋ ಕುತೂಹಲ ಹೆಚ್ಚಾಗಿದೆ.

ಇನ್ನೂ ಕಾಂತಾರ ಚಾಪ್ಟರ್ ಒನ್ ಚಿತ್ರವನ್ನ ಪುನೀತ್ ಪತ್ನಿ ಅಶ್ವಿನಿ ಪುನೀತ್ ರಾಜ್‌ಕುಮಾರ್ ಒಂದು ದಿನ ಮೊದಲೇ ನೋಡುತ್ತಿದ್ದಾರೆ. ಯುಕೆ ಅಲ್ಲಿ ನಡೆಯೋ ಪ್ರೀಮಿಯರ್ ಶೋಗೆ ಇವರನ್ನ ಇನ್ವೈಟ್ ಕೂಡ ಮಾಡಲಾಗಿದೆ. ಇಲ್ಲಿಯ ನಡೆಯುತ್ತಿರೋ ಪ್ರೀಮಿಯರ್ ಶೋಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಕೂಡ ಹೋಗುತ್ತಿದ್ದಾರೆ. ಈ ಒಂದು ವಿಷಯವನ್ನ ಕಾಂತಾರ ಚಾಪ್ಟರ್ ಒನ್ ಚಿತ್ರವನ್ನ ಯುಕೆ ಅಲ್ಲಿ ವಿತರಿಸ್ತಿರೋ Laughing Water Entertainment ಈ ಒಂದು ವಿಷಯವನ್ನ ಅಧಿಕೃತವಾದ ತಮ್ಮ ಪೇಜ್ ಅಲ್ಲಿಯೇ ಹೇಳಿಕೊಂಡಿದೆ.

ಕಾಂತಾರ ಚಾಪ್ಟರ್ ಒನ್ ಚಿತ್ರದ ಪ್ರೀಮಿಯರ್ ಹಲವು ಕಡೆ ಇದೆ. ಆದರೆ, ಯುಕೆ ಅಲ್ಲಿ ಈ ಚಿತ್ರದ ಪ್ರೀಮಿಯರ್ ಸಂಜೆ 7 ಗಂಟೆಗೆ ಇದೆ. ಈ ಒಂದು ಪ್ರೀಮಿಯರ್‌ಗೆ ಅಶ್ವಿನಿ ಪುನೀತ್ ರಾಜ್‌ಕುಮಾರ್ ಹೋಗುತ್ತಿದ್ದಾರೆ. ಇಲ್ಲಿಯೇ ಕಾಂತಾರ ಒನ್ ಚಿತ್ರವನ್ನ ನೋಡುತ್ತಿದ್ದಾರೆ.ಇನ್ನುಳಿದಂತೆ ಅಕ್ಟೋಬರ್-2 ರಂದು ಈ ಚಿತ್ರ ಬಹು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow