KN Rajanna: ಕೆಎನ್ ರಾಜಣ್ಣ ರಾಜೀನಾಮೆ ಅಲ್ಲ, ಸಂಪುಟದಿಂದಲೇ ವಜಾ..!

ಆಗಸ್ಟ್ 11, 2025 - 18:01
 0  14
KN Rajanna: ಕೆಎನ್ ರಾಜಣ್ಣ ರಾಜೀನಾಮೆ ಅಲ್ಲ, ಸಂಪುಟದಿಂದಲೇ ವಜಾ..!

ಬೆಂಗಳೂರು: ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ದಿಢೀರ್ ರಾಜೀನಾಮೆ ವಿಚಾರ ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜೀನಾಮೆಗೆ ಕಾರಣಗಳೇನು ಎಂಬ ಕುತೂಹಲದ ನಡುವೆಯೇ, ಅವರು ಸ್ವಯಂ ರಾಜೀನಾಮೆ ನೀಡಿಲ್ಲ, ಬದಲಾಗಿ ಸಂಪುಟದಿಂದಲೇ ವಜಾಗೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿ ಹೊರಬಿದ್ದಿದೆ.

ರಾಜ್ಯಪಾಲರ ಕಚೇರಿಯಿಂದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಳುಹಿಸಲಾದ ಪತ್ರದಲ್ಲಿ “Removal” ಎಂಬ ಶಬ್ದ ಬಳಸಲಾಗಿದ್ದು, ಇದು ನೇರ ವಜಾ ಕ್ರಮಕ್ಕೆ ದೃಢವಾಗಿದೆ. ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ರಾಜಣ್ಣ ಅವರು ಹೈಕಮಾಂಡ್ ಸೂಚನೆ ಮೇರೆಗೆ ಸಿಎಂ ಸಿದ್ದರಾಮಯ್ಯಗೆ ರಾಜೀನಾಮೆ ಪತ್ರ ನೀಡಿ, ಗೌರವಯುತವಾಗಿ ಸಂಪುಟದಿಂದ ಹೊರ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಮುಖ್ಯಮಂತ್ರಿಗಳೇ ರಾಜಣ್ಣ ಅವರನ್ನು ವಜಾ ಮಾಡಿದ್ದಾರೆ.

 ರಾಜಣ್ಣ ವಜಾ ಆಗಿರೋದು, ಭಾರೀ ದೊಡ್ಡ ಅಪಮಾನ ಆದಂತೆ ಆಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ರಾಜೀನಾಮೆ ಪ್ರಸಂಗಗಳು ನಡೆದಿದ್ದವು. ಆದರೆ ಮಂತ್ರಿ ಸ್ಥಾನದಿಂದ ವಾಜಾ ಮಾಡಿದ ಘಟನೆಗಳು ನಡೆದಿರಲಿಲ್ಲ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow