LPG Cylinder Price: ವಾಣಿಜ್ಯ ಬಳಕೆಯ LPG ಸಿಲಿಂಡರ್ ದರದಲ್ಲಿ ಇಳಿಕೆ..!

ಜುಲೈ 1, 2025 - 10:53
 0  12
LPG Cylinder Price: ವಾಣಿಜ್ಯ ಬಳಕೆಯ LPG ಸಿಲಿಂಡರ್ ದರದಲ್ಲಿ ಇಳಿಕೆ..!

ಬೆಂಗಳೂರು: ಇಂದು ಜುಲೈ ಮೊದಲ ದಿನವಾಗಿದ್ದು, ತೈಲ ಕಂಪನಿಗಳು LPG ಸಿಲಿಂಡರ್ಗಳ ಹೊಸ ದರಗಳನ್ನು ಬಿಡುಗಡೆ ಮಾಡಿವೆ. ಬಾರಿ19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯನ್ನು 58.50 ರೂ.ಗಳಷ್ಟು ಕಡಿಮೆಯಾಗಿದ್ದು, ಇಂದಿನಿಂದಲೇ ಜಾರಿಗೆ ಬರಲಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಹೊಸ ಚಿಲ್ಲರೆ ಬೆಲೆ ಈಗ 1,665 ರೂ. ಗಳಾಗಿದ್ದು,

 ಈಗಾಗಲೇ ಹೆಚ್ಚುತ್ತಿರುವ ಇನ್ಪುಟ್ ವೆಚ್ಚಗಳೊಂದಿಗೆ ಹೋರಾಡುತ್ತಿರುವ ರೆಸ್ಟೋರೆಂಟ್ಗಳು, ಹೋಟೆಲ್ಗಳು ಮತ್ತು ಅಡುಗೆ ತಯಾರಿಕರು ನಿಟ್ಟುಸಿರು ಬಿಡುವಂತಾಗಿದೆ. 14.2 ಕೆಜಿ ದೇಶೀಯ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಏಪ್ರಿಲ್ನಲ್ಲಿ 41 ರೂ.ಗಳಷ್ಟು ಬೆಲೆ ಕಡಿಮೆ ಮಾಡಲಾಯಿತು. ನಂತರ ಮೇ ತಿಂಗಳಲ್ಲಿ 14.50 ರೂ. ಮತ್ತು ಜೂನ್ನಲ್ಲಿ 24 ರೂ.ಗಳಷ್ಟು ಇಳಿಕೆ ಮಾಡಲಾಗಿತ್ತು.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow