Nandagokula: 'ನಂದಗೋಕುಲ' ಸೀರಿಯಲ್‌ʼನಲ್ಲಿ ಹೊಸ ಟ್ವಿಸ್ಟ್: ವಲ್ಲಭ-ಅಮೂಲ್ಯ ವಿವಾಹ

ಅಕ್ಟೋಬರ್ 13, 2025 - 19:59
 0  9
Nandagokula: 'ನಂದಗೋಕುಲ' ಸೀರಿಯಲ್‌ʼನಲ್ಲಿ ಹೊಸ ಟ್ವಿಸ್ಟ್: ವಲ್ಲಭ-ಅಮೂಲ್ಯ ವಿವಾಹ

‘ಕಲರ್ಸ್ ಕನ್ನಡ’ ವಾಹಿನಿ ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನಮಿಡಿಯುವ ಕತೆಗಳ ಮೂಲಕ ಜನಪ್ರಿಯವಾಗಿದೆ. 'ನಂದಗೋಕುಲ' ಧಾರಾವಾಹಿ ಅಂತಹ ಜನ ಮೆಚ್ಚಿದ ಧಾರಾವಾಹಿ ಅಂದ್ರೆ ಅದರಲ್ಲಿ ಎರಡು ಮಾತಿಲ್ಲ. ಇಂತಹ 'ನಂದ ಗೋಕುಲ’ ಧಾರಾವಾಹಿಯಲ್ಲಿ ಇದೀಗ ಮೇಜರ್‌ ಟ್ವಿಸ್ಟ್‌ ಸಿಗುತ್ತಿದ್ದು, ಪ್ರೇಕ್ಷಕರ ಮನ ಗೆಲ್ಲುತ್ತಿದೆ.

ನಂದಕುಮಾರ್ ಒಬ್ಬ ಕಟ್ಟುನಿಟ್ಟಾದ ನಡವಳಿಕೆಯ ಆತ್ಮವಿಶ್ವಾಸದಿಂದ ಕೂಡಿದ ವ್ಯಕ್ತಿ, 'ಗಿರಿಜಾ ಸ್ಟೋರ್ಸ್' ಎಂಬ ದಿನಸಿ ಅಂಗಡಿ ನಡೆಸುವ ನಂದನಿಗೆ ತನ್ನ ಕುಟುಂಬವೆಂದರೆ ಪ್ರಾಣ. ಆದರೆ ಎದುರುಮನೆಯಲ್ಲೇ ಇರುವ ಸೂರ್ಯಕಾಂತ್ ಮತ್ತು ಚಂದ್ರಕಾಂತ್ ಕುಟುಂಬವೆಂದರೆ ನಂದಕುಮಾರ್‌ಗೆ ಕೆಂಡದಂಥ ಕೋಪ, ವೈಷಮ್ಯ.

ಅಂದಹಾಗೆ ಅವರು ಬೇರೆ ಯಾರು ಅಲ್ಲ, ತನ್ನ ಹೆಂಡತಿ ಗಿರಿಜಾಳ ಸಹೋದರರೇ. ಈ ದ್ವೇಷಕ್ಕೆ ಕಾರಣ ನಂದಕುಮಾರ್ ಹಾಗೂ ಗಿರಿಜಾ 25 ವರ್ಷಗಳ ಹಿಂದೆ ಓಡಿಹೋಗಿ ಮದುವೆಯಾಗಿದ್ದು, ಈ ಎರಡೂ ಕುಟುಂಬಗಳ ನಡುವೆ ಅಂದಿನಿಂದಲೂ ಆಕ್ರೋಶ.

ಇನ್ನೂ ಹಾವು ಹಾಗೂ ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದ ವಲ್ಲಭ ಹಾಗೂ ಅಮೂಲ್ಯ ಈಗ ಪತಿ-ಪತ್ನಿ ಆಗುವ ಹಂತ ತಲುಪಿದ್ದಾರೆ. ಇಬ್ಬರೂ ವಿವಾಹ ಆಗುವ ದಿನ ಸಮೀಪಿಸಿಯೇ ಬಿಟ್ಟಿದೆ. ಪ್ರೇಕ್ಷಕರಿಗೆ ಈ ವಿಚಾರ ಖುಷಿ ಕೊಟ್ಟಿದೆ. ‘ನಂದ ಗೋಕುಲ’ ಧಾರಾವಾಹಿಯಲ್ಲೇ ಇದು ದೊಡ್ಡ ತಿರುವಾಗಿದೆ.

ಅಮೂಲ್ಯ ಹಾಗೂ ಸಿದ್ದು ಪರಸ್ಪರ ಪ್ರೀಸಿಸುತ್ತಿದ್ದರು. ಕಾಲೇಜಿನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿತ್ತು. ಸಿದ್ದು ತುಂಬಾನೇ ಕೆಟ್ಟವನು. ಆದರೆ, ಇದನ್ನು ಅವನು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಬದಲಿಗೆ ಆಕೆಯಿಂದ ದುಡ್ಡನ್ನು ಹೊಡೆಯಲು ಪ್ಲ್ಯಾನ್ ರೂಪಿಸಿದ್ದ. ಈ ಸಮಯಕ್ಕೆ ಸರಿಯಾಗಿ ಅಮೂಲ್ಯಾಗೆ ಬೇರೆ ಮದುವೆ ಫಿಕ್ಸ್ ಮಾಡಲಾಯಿತು. ಈ ಸಮಯಕ್ಕೆ ಸರಿಯಾಗಿ ಎಂಟ್ರಿ ಕೊಟ್ಟ ಸಿದ್ದು, ಚಿನ್ನ-ಹಣದ ಸಮೇತ ಅಮೂಲ್ಯಾನ ಓಡಿಸಿಕೊಂಡು ಹೋದ.

ಅಮೂಲ್ಯನ ಓಡಿಸಿಕೊಂಡು ಹೋದ ಸಿದ್ದು, ಆಕೆಯಿಂದ ಹಣ ಹಾಗೂ ಚಿನ್ನ ಲೂಟಿ ಮಾಡಿ ತನ್ನ ನಿಜವಾದ ಮುಖ ತೋರಿಸಿಯೇ ಬಿಟ್ಟ. ಇತ್ತ, ಅಮೂಲ್ಯ ಮನೆಯಲ್ಲಿ ಮದುವೆ ನಿಂತಿದ್ದಕ್ಕೆ ದೊಡ್ಡ ರಂಪಾಟವೇ ಆಗಿ ಹೋಗಿತ್ತು. ಆಕೆಯನ್ನು ವಿವಾಹ ಆಗಲು ಬಂದವರು ಬೈದುಕೊಳ್ಳುತ್ತಾ ಅಲ್ಲಿಂದ ತೆರಳಿದರು. ಈಗ ಅಮೂಲ್ಯಾಗೆ ಬೇರೆ ದಾರಿ ಕಾಣದೆ ಆತ್ಮಹತ್ಯೆಗೆ ನಿರ್ಧರಿಸಿದ್ದಾಳೆ.

ದೊಡ್ಡ ಬೆಟ್ಟದ ಮೇಲೆ ನಿಂತು ಆತ್ಮಹತ್ಯೆ ಮಾಡಿಕೊಳ್ಳುವವಳಿದ್ದಳು. ಆ ಸಮಯಕ್ಕೆ ಸರಿಯಾಗಿ ಚಿನ್ನು (ಕವಿತಾ ಗೌಡ) ಎಂಟ್ರಿ ಆಗಿದೆ. ಆಕೆ ಬಂದು ಅಮೂಲ್ಯಾನ ಕಾಪಾಡಿದ್ದಾಳೆ. ಇತ್ತ, ಮನೆಯಲ್ಲಿ ನಂದನ ಪತ್ನಿ ಅಮೂಲ್ಯಾ ಬಗ್ಗೆ ಚಿಂತಿಸಿ ಬೇಸರ ಮಾಡಿಕೊಂಡಿದ್ದಾಳೆ. ವಲ್ಲಭನ ಬಳಿ ಮದುವೆ ಆಗುವಂತೆ ಸೂಚಿಸಿದ್ದಾಳೆ. ಹಿಂದೂ-ಮುಂದು ನೋಡದೆ ಆತ ವಿವಾಹಕ್ಕೆ ರೆಡಿ ಆಗಿದ್ದಾನೆ. ಇದರಿಂದ ಹೊಸ ತಿರುವುದು ಎದುರಾಗುವ ಸೂಚನೆ ಸಿಕ್ಕಿದೆ.

ಕಲರ್ಸ್ ಕನ್ನಡದಲ್ಲಿ ‘ನಂದ ಗೋಕುಲ’ ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ಧಾರಾವಾಹಿ ಒಳ್ಳೆಯ ಟಿಆರ್​ಪಿ ಪಡೆದುಕೊಳ್ಳುತ್ತಿದೆ. ಈಗ ಮದುವೆ ಕಾರಣಕ್ಕೆ ಧಾರಾವಾಹಿ ಮತ್ತಷ್ಟು ಉತ್ತಮ ಟಿಆರ್​ಪಿ ಪಡೆದುಕೊಳ್ಳುವ ಸಾಧ್ಯತೆ ಇದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow