Alcohol Sales: ರಾಜ್ಯದಲ್ಲಿ ಮದ್ಯ ಮಾರಾಟದಲ್ಲಿ ಭಾರೀ ಕುಸಿತ; ಕಾರಣವೇನು ಗೊತ್ತಾ..?
ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮದ್ಯದ ಬೆಲೆಗಳನ್ನು ಪದೇಪದೇ ಹೆಚ್ಚಿಸಿರುವುದು ರಾಜ್ಯದ ಮದ್ಯ ವ್ಯಾಪಾರದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅಬಕಾರಿ ಇಲಾಖೆಯ ಅರ್ಧವಾರ್ಷಿಕ ಅಂಕಿ-ಅಂಶಗಳ ಪ್ರಕಾರ, 2025ರ ಮೊದಲ ಆರು ತಿಂಗಳಲ್ಲಿ ಮದ್ಯದ ಮಾರಾಟದಲ್ಲಿ ಸ್ಪಷ್ಟ ಕುಸಿತ ಕಂಡುಬಂದಿದೆ.
ಸರ್ಕಾರದ ಸುಂಕ ಮತ್ತು ಬೆಲೆ ನೀತಿಯಿಂದಾಗಿ, ಒಂದು ಕಡೆ ಗ್ರಾಹಕರ ವೆಚ್ಚದ ಹೊರೆ ಹೆಚ್ಚಾಗಿದ್ದರೆ, ಇನ್ನೊಂದೆಡೆ ಮದ್ಯ ಮಾರಾಟಗಾರರ ಆದಾಯ ಕುಸಿಯುತ್ತಿದೆ. ಈ ಪರಿಸ್ಥಿತಿ ಮದ್ಯ ವ್ಯವಹಾರದಲ್ಲಿ ವ್ಯಾಪಕ ಅಸ್ಥಿರತೆಯುಂಟುಮಾಡುತ್ತಿದೆ.
ಐಎಂಎಲ್ ಮಾರಾಟದಲ್ಲಿ ನಿರಂತರ ಕುಸಿತ
ಐಎಂಎಲ್ (Indian Made Foreign Liquor) ಮಾರಾಟದ ಅಂಕಿಅಂಶಗಳನ್ನು ನೋಡಿದರೆ, ಮೂರು ವರ್ಷಗಳ ಕಾಲತಂಡದಲ್ಲಿ ಸತತ ಇಳಿಕೆ ಕಾಣಬಹುದಾಗಿದೆ:
-
2023 (ಏಪ್ರಿಲ್ – ಸೆಪ್ಟೆಂಬರ್): 352.53 ಲಕ್ಷ ಬಾಕ್ಸ್‌ಗಳು
-
2024 (ಏಪ್ರಿಲ್ – ಸೆಪ್ಟೆಂಬರ್): 345.76 ಲಕ್ಷ ಬಾಕ್ಸ್‌ಗಳು
-
2025 (ಏಪ್ರಿಲ್ – ಸೆಪ್ಟೆಂಬರ್): 342.93 ಲಕ್ಷ ಬಾಕ್ಸ್‌ಗಳು
ಇದು ಕಳೆದ ವರ್ಷದ ಹೋಲಿಕೆಯಲ್ಲಿ 2.83 ಲಕ್ಷ ಬಾಕ್ಸ್‌ಗಳ ಇಳಿಕೆ, ಅಂದರೆ ಸೊಂಕು-ಬೆಲೆ ನೀತಿಯ ಪರಿಣಾಮವನ್ನು ಸ್ಪಷ್ಟವಾಗಿ ತೋರಿಸುತ್ತಿದೆ.
ಬಿಯರ್ ಮಾರಾಟದಲ್ಲಿ ಶೇಕಡಾವಾರು ಭಾರೀ ಇಳಿಕೆ
ಬಿಯರ್ ಮಾರಾಟದಲ್ಲಿ ಇಳಿಕೆ ಇನ್ನೂ ಹೆಚ್ಚು ಗಂಭೀರವಾಗಿದೆ:
-
2024ರ (ಏಪ್ರಿಲ್ – ಸೆಪ್ಟೆಂಬರ್): 242 ಲಕ್ಷ ಬಾಕ್ಸ್‌ಗಳು
-
2025ರ (ಏಪ್ರಿಲ್ – ಸೆಪ್ಟೆಂಬರ್): 195.27 ಲಕ್ಷ ಬಾಕ್ಸ್‌ಗಳು
ಇದು 47.46 ಲಕ್ಷ ಬಾಕ್ಸ್‌ಗಳ ಇಳಿಕೆ, ಅಂದರೆ ಶೇಕಡಾ 19.55% ರಷ್ಟು ಕುಸಿತವಾಗಿದೆ. ಇದು ಮದ್ಯ ಮಾರಾಟದ ಬಹುದೊಡ್ಡ ಹಿನ್ನಡೆಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.
ಪ್ರತಿ ತಿಂಗಳಿನಲ್ಲೂ ಬಿಯರ್ ಮಾರಾಟದಲ್ಲಿ ಕಡಿಮೆ ಆಗುತ್ತಲೇ ಇದೆ ಎಂದು ಮದ್ಯ ಮಾರಾಟಗಾರರು ತಿಳಿಸಿದ್ದಾರೆ. ಈ ಬಗ್ಗೆ ಮಾತಾನಾಡಿದ ಬಿಯರ್ ಪ್ರಿಯರು, ಬಿಯರ್ ಮೇಲೆ ದರ ಏರಿಕೆ ಮಾಡಿರುವುದರಿಂದ ಮೂರು ಬಿಯರ್ ಕುಡಿಯುತ್ತಿದ ನಾವು, ನಮ್ಮ ಸ್ನೇಹಿತರು ಇದೀಗ ಒಂದು ಬಿಯರ್ ಕುಡಿಯುವಂತೆ ಆಗಿದೆ ಎಂದಿದ್ದಾರೆ. ಅಲ್ಲದೆ, ಈಗ 100 ರುಪಾಯಿಗೆ ಒಂದು ಬಿಯರ್ ನೀಡಬೇಕು ಎಂದು ಮದ್ಯಪ್ರಿಯ ಉಪೇಂದ್ರ ಎಂಬವರು ಆಗ್ರಹಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?