Gold-Silver Price Today: ಚಿನ್ನ-ಬೆಳ್ಳಿ ಪ್ರಿಯರಿಗೆ ಶಾಕ್ ಕೊಟ್ಟ ದರ: ಹೀಗಿದೆ ನೋಡಿ ಇಂದಿನ ರೇಟ್

ಅಕ್ಟೋಬರ್ 13, 2025 - 12:04
 0  15
Gold-Silver Price Today: ಚಿನ್ನ-ಬೆಳ್ಳಿ ಪ್ರಿಯರಿಗೆ ಶಾಕ್ ಕೊಟ್ಟ ದರ: ಹೀಗಿದೆ ನೋಡಿ ಇಂದಿನ ರೇಟ್

ಮತ್ತೆ ಚಿನ್ನ ತನ್ನ ಬೆಲೆ ಏರಿಕೆಯ ನಾಗಾಓಟವನ್ನು ಮುಂದುವರೆಸಿದಂತಿದೆ. ಕಳೆದ ಸತತ ಮೂರು ದಿನಗಳಿಂದ ಮಾರುಕಟ್ಟೆಯಲ್ಲಿ ಚಿನ್ನದ ದರ ನೆಗೆಯುತ್ತಲೇ ಇದ್ದು ಚಿನ್ನಾಭರಣಕೊಳ್ಳಬಯಸುವವರು ತಬ್ಬಿಬ್ಬಾಗುವಂತೆ ಮಾಡಿದೆ. ನಿನ್ನೆಯೆ ಸಾಕಷ್ಟು ಏರಿಕೆ ಕಂಡಿದ್ದ ಚಿನ್ನದ ದರ ಇಂದು ಮತ್ತೆ ಏರಿಕೆಯಾಗಿದೆ.
ಚಿನ್ನ.. ಪ್ರಪಂಚದಾದ್ಯಂತ ವಿಶೇಷ ಸ್ಥಾನ ಹೊಂದಿದೆ. ಹಳದಿ ಬಣ್ಣದ ಚಿನ್ನ ಮಹಿಳೆಯರಿಗೆ ಅಚ್ಚು ಮೆಚ್ಚು.

ಯಾವುದೇ ಋತುವಿನಲ್ಲಿ ಚಿನ್ನದ ಖರೀದಿ ಎಂಬುದು ಇದ್ದೆ ಇರುತ್ತದೆ. ಅಂಥದ್ದರಲ್ಲಿ ಈಗ ಹಬ್ಬಗಳ ಋತು ಆರಂಭವಾಗಿದ್ದು ಚಿನ್ನಕ್ಕೆ ಬೇಡಿಕೆಯೂ ಹೆಚ್ಚಾಗುವ ಸಾಧ್ಯತೆಯಿದೆ. ಅಮೆರಿಕ ಚೀನಾದ ಮೇಲೆ 100% ಪ್ರತಿಸುಂಕ ವಿಧಿಸುವ ಬಗ್ಗೆ ಬೆದರಿಕೆ ಹಾಕಿರುವುದು ಇದಕ್ಕೆ ಕಾರಣ. ಅಲ್ಲದೆ ಬೆಳ್ಳಿ ಬೆಲೆಯೂ ಇತ್ತೀಚೆಗೆ ಭಾರಿ ಹೆಚ್ಚಳ ಖಾಣುತ್ತಿದ್ದು, ದಾಖಲೆ ಬೆಲೆ 1,85,000 ಕ್ಕೆ ತಲುಪಿದೆ.ದೇಶೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 13 ಸೋಮವಾರದಂದು 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 12,540 ರೂಪಾಯಿಗೆ ತಲುಪಿದೆ.

ಇಂದು ಗ್ರಾಂ ಒಂದಕ್ಕೆ ಬೆಲೆ ಬರೋಬ್ಬರಿ 32 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 30 ರೂಪಾಯಿ ಏರಿಕೆ ಆಗಿದ್ದು, 11,495 ರುಪಾಯಿ ಆಗಿದೆ.ದೇಶೀಯ ಮಾರುಕಟ್ಟೆಯಲ್ಲಿ ಅಕ್ಟೋಬರ್ 13 ಸೋಮವಾರದಂದು 24 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 12,540 ರೂಪಾಯಿಗೆ ತಲುಪಿದೆ. ಇಂದು ಗ್ರಾಂ ಒಂದಕ್ಕೆ ಬೆಲೆ ಬರೋಬ್ಬರಿ 32 ರೂಪಾಯಿ ಹೆಚ್ಚಳ ಆಗಿದೆ. 22 ಕ್ಯಾರೆಟ್ ಬೆಲೆಯಲ್ಲಿ 30 ರೂಪಾಯಿ ಏರಿಕೆ ಆಗಿದ್ದು,

11,495 ರುಪಾಯಿ ಆಗಿದೆ. 24 ಕ್ಯಾರೆಟ್ ನ 10 ಗ್ರಾಂ ಚಿನ್ನದ ಇಂದಿನ ಬೆಲೆಯು 320 ರೂಪಾಯಿ ಹೆಚ್ಚಳ ಆಗಿ, 1,25,400 ರುಪಾಯಿ ಆಗಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ 300 ರೂ ಏರಿಕೆ ಆಗಿ, 1,14,950 ರೂಪಾಯಿಗೆ ಏರಿಕೆ ಕಂಡಿದೆ.ಬೆಂಗಳೂರಲ್ಲಿ 1 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 12,540 ರೂ ಇದೆ. ಬೆಳ್ಳಿಯೂ ಚಿನ್ನದಷ್ಟೇ ವೇಗವಾಗಿ ಬೆಲೆ ಹೆಚ್ಚಳ ಕಾಣುತ್ತಿದೆ. ಗ್ರಾಂ ಒಂದಕ್ಕೆ ಚಿನ್ನದ ಬೆಲೆ 185 ರೂಪಾಯಿಗೆ ತಲುಪಿದೆ.

ಕೆಜಿ ಬೆಲೆ 1,85,000 ರೂ ಆಗಿದೆ. ಇಂದು ಬರೋಬ್ಬರಿ 2 ರೂಪಾಯಿ 7 ಪೈಸೆ ಹೆಚ್ಚಳ ಕಂಡಿದೆ. ಅಕ್ಟೋಬರ್ ತಿಂಗಳ 13 ದಿನದಲ್ಲಿ, 1 ಕೆಜಿ ಬೆಳ್ಳಿಗೆ 34 ಸಾವಿರ ರೂ ಹೆಚ್ಚಳ. ಲಂಡನ್‌ನಲ್ಲಿ ಬೆಳ್ಳಿ ಕೊರತೆ ಮತ್ತು ಅಮೆರಿಕ-ಚೀನಾ ನಡುವಿನ ವ್ಯಾಪಾರ ಯುದ್ಧದ ಕಾರಣದಿಂದಾಗಿ ಬೆಳ್ಳಿ ಬೆಲೆ ದಾಖಲೆಯ ಮಟ್ಟಕ್ಕೆ ಏರಿದೆ. ಇದರ ಜೊತೆಗೆ ಚಿನ್ನದ ಬೆಲೆ ಕೂಡ ಹೊಸ ಗರಿಷ್ಠ ಮಟ್ಟವನ್ನು ತಲುಪಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow