ಖಾದ್ಯ ತೈಲ ವಲಯಕ್ಕೆ ಸ್ಟ್ರಿಕ್ಟ್ ರೂಲ್ಸ್: ಘಟಕ ನೋಂದಣಿ ಕಡ್ಡಾಯ - ಕೇಂದ್ರ ಸರ್ಕಾರ ಆದೇಶ
ನವದೆಹಲಿ: ಖಾದ್ಯ ತೈಲ ವಲಯಕ್ಕೆ ಸ್ಟ್ರಿಕ್ಟ್ ರೂಲ್ಸ್ ಜಾರಿಗೆ ತಂದಿರುವ ಕೇಂದ್ರ, ಘಟಕ ನೋಂದಣಿ ಕಡ್ಡಾಯ ಎಂದು ಆದೇಶ ಹೊರಡಿಸಿದೆ.
ಖಾದ್ಯ ತೈಲ ವಲಯದಲ್ಲಿ ಪಾರದರ್ಶಕತೆ ಮತ್ತು ನಿಯಂತ್ರಣ ಹೆಚ್ಚಿಸಲು ಕೇಂದ್ರ ಸರ್ಕಾರ ಹೊಸ ಕ್ರಮ ಕೈಗೊಂಡಿದೆ. 2011ರ Vegetable Oil Products, Production and Availability Order ಗೆ ತಿದ್ದುಪಡಿ ತರಲಾಗಿದ್ದು, ಖಾದ್ಯ ತೈಲ ಘಟಕಗಳ ನೋಂದಣಿ ಕಡ್ಡಾಯವಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಹೊಸ VOPPA ತಿದ್ದುಪಡಿ ಆದೇಶ–2025 ಪ್ರಕಾರ, ತೈಲ ಉತ್ಪಾದನೆ ಮತ್ತು ಪೂರೈಕೆಯಲ್ಲಿ ತೊಡಗಿರುವ ಎಲ್ಲಾ ತಯಾರಕರು, ಸಂಸ್ಕರಣಾ ಘಟಕಗಳು, ಮಿಶ್ರಣಕಾರರು, ಮರು-ಪ್ಯಾಕರ್‌ಗಳು ಸೇರಿದಂತೆ ಎಲ್ಲಾ ಪಾಲುದಾರರು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ಇದರೊಂದಿಗೆ ಪ್ರತೀ ಘಟಕವು ಮಾಸಿಕ ಉತ್ಪಾದನೆ ಹಾಗೂ ಸ್ಟಾಕ್ ವಿವರಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕಿದೆ. ನೋಂದಣಿಗಾಗಿ ರಾಷ್ಟ್ರೀಯ ಏಕ ವಿಂಡೋ ವ್ಯವಸ್ಥೆಯ www.nsws.gov.in ತಾಣದಲ್ಲಿ ದಾಖಲಾಗಬೇಕು. ಬಳಿಕ ಘಟಕಗಳು ಉತ್ಪಾದನೆ ಮತ್ತು ಸ್ಟಾಕ್ ರಿಟರ್ನ್‌ಗಳನ್ನು www.edibleoilindia.in ಪೋರ್ಟಲ್‌ನಲ್ಲಿ ಸಲ್ಲಿಸಬೇಕಾಗಿದೆ.
“ಖಾದ್ಯ ತೈಲ ವಲಯದಲ್ಲಿ ನಿಖರ ದತ್ತಾಂಶ ಸಂಗ್ರಹಣೆ, ನೈಜ-ಸಮಯದ ಮೇಲ್ವಿಚಾರಣೆ ಮತ್ತು ನೀತಿಗಳ ಸುಧಾರಣೆಗೆ ಇದು ಮಹತ್ವದ ಹೆಜ್ಜೆ. ನಿಯಮ ಉಲ್ಲಂಘಿಸಿದ ಘಟಕಗಳ ವಿರುದ್ಧ ದಂಡ ವಿಧಿಸಲಾಗುವುದು ಹಾಗೂ ಕಾಯ್ದೆ 2008ರ ನಿಯಮಗಳಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ,” ಎಂದರು.
“ಈ ತಿದ್ದುಪಡಿ ಕೇವಲ ನಿಯಂತ್ರಕ ಕ್ರಮವಲ್ಲ. ಇದು ಭಾರತದ ಆಹಾರ ಭದ್ರತೆ ಮತ್ತು ಖಾದ್ಯ ತೈಲ ವಲಯದ ಪಾರದರ್ಶಕತೆಯನ್ನು ಬಲಪಡಿಸುವ ನಿರ್ಣಾಯಕ ಹೆಜ್ಜೆ,” ಎಂದು ಹೇಳಿದರು.
ನಿಮ್ಮ ಪ್ರತಿಕ್ರಿಯೆ ಏನು?