Ranya Roa Gold Smuggling Case: ಪ್ರಕರಣದ 3ನೇ ಅರೋಪಿ ಬಂಧಿಸಿದ DRI! ಯಾರು ಸಾಹಿಲ್ ಜೈನ್..!?

ಅಕ್ರಮ ಚಿನ್ನ ಸಾಗಾಣಿಕೆ ಕೇಸ್‌ನಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಇದರ ಬೆನ್ನಲ್ಲೇ ಜ್ಯುವೆಲ್ಲರಿ ಅಂಗಡಿ ಮಾಲೀಕ, ಬಳ್ಳಾರಿ ಮೂಲದ ಸಾಹಿಲ್ ಜೈನ್ ಎಂಬವರನ್ನು ಬಂಧಿಸಿದ್ದಾರೆ. ಈಗಾಗಲೇ ರನ್ಯಾ ರಾವ್ ಮತ್ತು ಆಕೆಯ ಮಾಜಿ ಬಾಯ್‌ಫ್ರೆಂಡ್ ತರುಣ್‌ನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದಾಗ ಸಾಹಿಲ್‌ನ ಸಂಪರ್ಕ ಇದ್ದುದು ಬಯಲಾಗಿದೆ. ಹೀಗಾಗಿ ಸಾಹಿಲ್ ಅನ್ನು 4 ದಿನಗಳ ಮಟ್ಟಿಗೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಜ್ಯುವೆಲ್ಲರಿ ಅಂಗಡಿ ಮಾಲೀಕನಾಗಿರುವ ಬಂಧಿತ ಸಾಹಿಲ್, ಬೆಂಗಳೂರಿನಲ್ಲೂ ಬ್ರ್ಯಾಂಚ್ ಹೊಂದಿದ್ದಾರೆ. ರನ್ಯಾರಾವ್ ಮತ್ತು ತರುಣ್ ರಾಜ್ ಜೊತೆ ನಿರಂತರ ಸಂಪರ್ಕದಲ್ಲಿದ್ದ ಸಾಹಿಲ್, ಅಕ್ರಮವಾಗಿ ತರುತ್ತಿದ್ದ ಚಿನ್ನ ಮತ್ತು ಚಿನ್ನದ ಪೀಸ್‌ಗಳನ್ನ ಖರೀದಸುತ್ತಿದ್ದರು. ಚಿನ್ನ ಕರಗಿಸಿ ಬಂದ ಹಣವನ್ನು ಕೊಡುತ್ತಿದ್ದರು. ಇದಕ್ಕಾಗಿ 10ರಿಂದ 15 ಪರ್ಸೆಂಟ್ ಕಮಿಷನ್ ಪಡೆಯುತ್ತಿದ್ದರು. ಈ ಬಗ್ಗೆ ಡಿಆರ್‌ಐ ಅಧಿಕಾರಿಗಳಿಗೆ ಮಾಹಿತಿ ಸಿಕ್ಕಿದೆ.
ಯಾರು ಈ ಸಾಹಿಲ್ ಜೈನ್?
ಬಂಧಿತ ಸಾಹಿಲ್ ಜೈನ್ ಮೂಲತಃ ಬಳ್ಳಾರಿಯವರು. ಸಾಹಿಲ್ ತಂದೆ ಮಹೇಂದ್ರ ಜೈನ್ ಬಟ್ಟೆವ್ಯಾಪಾರಿಯಾಗಿದ್ದು, ಬಳ್ಳಾರಿಯಲ್ಲೇ ಬಟ್ಟೆ ಅಂಗಡಿ ನಡೆಸುತ್ತಾ ವಾಸವಿದ್ದರು. ಹಲವು ವರ್ಷಗಳ ಹಿಂದೆ ಅವರ ಕುಟುಂಬ ಬೆಂಗಳೂರಿಗೆ ಸ್ಥಳಾಂತರವಾಗಿತ್ತು. ಸಾಹಿಲ್ ಮಾತ್ರ ತನ್ನ ಸೋದರ ಮಾವನ ಜೊತೆ ಮುಂಬೈನಲ್ಲಿ ವಾಸವಿದ್ದರು.
ಈ ಹಿಂದೆ ಸ್ಮಗ್ಲಿಂಗ್ ಕೇಸ್‌ನಲ್ಲಿ ಸಾಹಿಲ್‌ನನ್ನು ಮುಂಬೈ ಏರ್‌ಪೋರ್ಟ್‌ನಲ್ಲಿ ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಚಿನ್ನದ ವ್ಯಾಪಾರಿಗಳ ಜೊತೆ ನಂಟು ಹಿನ್ನೆಲೆ ಸಾಹಿಲ್ ಮಾರಾಟದ ಜವಾಬ್ದಾರಿ ಹೊತ್ತಿದ್ದರು ಎಂಬುದು ಗೊತ್ತಾಗಿದೆ. ಇದೇ ಕಸುಬನ್ನು ಈಗಲೂ ಮುಂದುವರೆಸಿದ್ದ ಸಾಹಿಲ್, ರನ್ಯಾ, ತರುಣ್‌ಗೂ ಚಿನ್ನ ಮಾರಾಟದಲ್ಲಿ ಸಹಾಯ ಮಾಡಿದ್ದರು ಎಂಬ ಶಂಕೆ ವ್ಯಕ್ತವಾಗಿದೆ.
ನಿಮ್ಮ ಪ್ರತಿಕ್ರಿಯೆ ಏನು?






