Aishwarya Rai: ಐಶ್ವರ್ಯಾ ರೈ ಕಾರು ಅಪಘಾತ ಆಗಿದ್ದು ನಿಜನಾ? ಅಷ್ಟಕ್ಕೂ ಅಲ್ಲಿ ನಡೆದಿದ್ದೇನು..?

ಮಾರ್ಚ್ 27, 2025 - 12:01
 0  12
Aishwarya Rai: ಐಶ್ವರ್ಯಾ ರೈ ಕಾರು ಅಪಘಾತ ಆಗಿದ್ದು ನಿಜನಾ? ಅಷ್ಟಕ್ಕೂ ಅಲ್ಲಿ ನಡೆದಿದ್ದೇನು..?

ಬಾಲಿವುಡ್ ಸ್ಟಾರ್ ಹೀರೋಯಿನ್ ಐಶ್ವರ್ಯ ರಾಯ್ ಪ್ರಯಾಣಿಸುತ್ತಿದ್ದ ಕಾರು ಬಸ್ʼಗೆ ಡಿಕ್ಕಿ ಹೊಡೆದಿದೆ.  ನಟಿಯ ಕಾರ್‌ಗೆಬಸ್‌ ಢಿಕ್ಕಿ ಹೊಡೆದಿದ್ದರಿಂದ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು ಎಂದು ವರದಿಯಾಗಿದೆ. ಈ ವೇಳೆ ಐಶ್ವರ್ಯಾ ರೈ ಅವರ ಬಾಡಿಗಾರ್ಡ್ಸ್ ಸಹ ಕಾರ್‌ನಿಂದ ಹೊರಬಂದಿದ್ದರು ಎಂದು ವರದಿಯಾಗಿದೆ. ಅಪಘಾತದ ಸಮಯದಲ್ಲಿ ನಟಿ ಕಾರಿನಲ್ಲಿ ಇದ್ದಿರಲಿಲ್ಲ ಎಂದು ಮೂಲಗಳು ತಿಳಿಸಿವೆ.

ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ವೀಡಿಯೋದಲ್ಲಿ ನಟಿ ಐಶ್ವರ್ಯ ರೈ ಕಾರಿಗೆ ಕೆಂಪು ಬಣ್ಣದ ಬಸ್ ಹಿಂದಿನಿಂದ ಬಂದು ಗುದ್ದಿದೆ. ಕೂಡಲೇ ಒಂದಷ್ಟು ಜನ ಅಲ್ಲಿ ಜಮಾಯಿಸಿದ್ದಾರೆ. ಆಕೆಯ ಅಂಗರಕ್ಷಕರು ಕೆಳಗೆ ಇಳಿದು ಬಂದು ನೋಡಿದ್ದಾರೆ. ಆದರೆ ಕಾರಿಗೆ ಯಾವುದೇ ಹಾನಿ ಆಗಿಲ್ಲ. ಬಸ್ ಡ್ರೈವರ್ ಜೊತೆ ಆಕೆಯ ಅಂಗರಕ್ಷಕರು ಮಾತುಕತೆ ನಡೆಸಿದ್ದು ಕೆಲ ಸಮಯದ ಬಳಿಕ ಕಾರ್ ಅಲ್ಲಿಂದ ಹೊರಟಿದೆ.

ಐಶ್ವರ್ಯಾ ರೈ ಅವರ ಕಾರಿನ ಸಂಖ್ಯೆ 5050. ಇದು ಅವರ ಅಭಿಮಾನಿಗಳಿಗೆ ತಿಳಿದಿದೆ. ಅಪಘಾತ ಆಗುತ್ತಿದ್ದಂತೆ ಅನೇಕ ಜನರು ಸೇರಿದ್ದಾರೆ. ಇದು ಐಶ್ವರ್ಯಾ ಕಾರು ಎಂದು ಪತ್ತೆ ಹಚ್ಚಿದ್ದಾರೆ. ಅಲ್ಲದೆ ಕಾರಿನಲ್ಲಿ ಇದ್ದ ಬಾಡಿಗಾರ್ಡ್​ಗಳು ಬಸ್​ನ ಸೈಡ್​ಗೆ ಹಾಕುವಂತೆ ಕೇಳಿ ಕೊಳ್ಳುತ್ತಿರುವುದು ವಿಡಿಯೋದಲ್ಲಿ ಇದೆ. ಇನ್ನು ಕಾರಿಗೆ ಯಾವುದೇ ತೊಂದರೆ ಆಗಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸಿದೆ.

ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಅನೇಕ ಅಭಿಮಾನಿಗಳು, ನಟನ ಸುರಕ್ಷತೆಯ ಬಗ್ಗೆ ಮತ್ತು ಸುದ್ದಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. " ನಟಿ ಚೆನ್ನಾಗಿದ್ದಾರೆಂದು ಭಾವಿಸುತ್ತೇನೆ" ಎಂದು ಅಭಿಮಾನಿಯೊಬ್ಬರು ಕಮೆಂಟ್ಮಾಡಿದ್ದಾರೆ. ಮತ್ತೊಬ್ಬರು "ಐಶ್ವರ್ಯಾ ಸುರಕ್ಷಿತವಾಗಿದ್ದಾರೆಂದು ಭಾವಿಸುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ. "ದೇವರಿಗೆ ಧನ್ಯವಾದಗಳು ಕಾರಿಗೆ ಯಾವುದೇ ಹಾನಿಯಾಗಿಲ್ಲ.

ಐಶ್ ಸುರಕ್ಷಿತವಾಗಿದ್ದಾರೆಂದು ಭಾವಿಸುತ್ತೇನೆ" ಎಂದು ಕಮೆಂಟ್ಮಾಡಿದ್ದಾರೆ. ನಟಿ ಕೊನೆಯ ಬಾರಿಗೆ ಮಣಿರತ್ನಂ ಅವರ ಪೊನ್ನಿಯಿನ್ ಸೆಲ್ವನ್: ಭಾಗ 2 ರಲ್ಲಿ ಕಾಣಿಸಿಕೊಂಡರು.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow