Nandini Milk: ನಂದಿನಿ ಹಾಲಿನ ದರ ಏರಿಕೆ..! ಯಾವ ಪ್ಯಾಕೆಟ್ʼಗೆ ಎಷ್ಟು ದರ..? ಇಲ್ಲಿದೆ ವಿವರ

ಮಾರ್ಚ್ 27, 2025 - 15:31
 0  12
Nandini Milk: ನಂದಿನಿ ಹಾಲಿನ ದರ ಏರಿಕೆ..! ಯಾವ ಪ್ಯಾಕೆಟ್ʼಗೆ ಎಷ್ಟು ದರ..? ಇಲ್ಲಿದೆ ವಿವರ

ಬೆಂಗಳೂರು: ಕರ್ನಾಟಕ ಸರ್ಕಾರ ಇದೀಗ ರಾಜ್ಯದ ಜನತೆಗೆ ಶಾಕ್ ನೀಡಿದೆ. ಅತ್ತ ಮಾರುಕಟ್ಟೆಯಲ್ಲಿ ತರಕಾತಿ, ಎಣ್ಣೆಗಳ ಬೆಲೆಯಲ್ಲಿ ಏರಿಕೆ ಕಾಣುತ್ತಿದ್ದಂತೆ, ಇದೀಗ ಹಾಲಿನ ದರವನ್ನೂ ಹೆಚ್ಚಿಸಿದೆ. ಪ್ರತಿ ಲೀಟರ್‌ ನಂದಿನಿ ಹಾಲಿನ ದರ 4 ರೂ. ಹೆಚ್ಚಳ ಮಾಡಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ಸೂಚಿಸಿದೆ. ನಾಳೆಯಿಂದಲೇ ಪರಿಷ್ಕೃತ ದರ ಜಾರಿಯಾಗಲಿದೆ.

ಹಾಲು ಒಕ್ಕೂಟ ಹಾಗೂ ರೈತರಿಂದ ಹಾಲು ದರ ಹೆಚ್ಚಳಕ್ಕೆ ಬೇಡಿಕೆ ನಿರಂತವಾಗಿ ಹೆಚ್ಚಿದ ಹಿನ್ನೆಲೆ ಪ್ರತಿ ಲೀಟರ್ ಹಾಲಿನ ದರ 5ರೂ. ಹೆಚ್ಚಳ ಮಾಡಬೇಕೆಂದು ಒಕ್ಕೂಟಗಳು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದರು. ಆದ್ರೆ ಇದೀಗ ಸಚಿವ ಸಂಪುಟ ನಾಲ್ಕು ರೂ ಏರಿಕೆಗೆ ಒಪ್ಪಿಗೆ ನೀಡಿದೆ.

ದರ ಏರಿಕೆ ವಿವರ ಇಲ್ಲಿದೆ

  • ಹೋಮೋಜಿನೆಸ್ಟ್ ಟೋನ್ಡ್ ಹಾಲು :ರಾಜ್ಯದಲ್ಲಿ ಸದ್ಯ ಹೋಮೋಜಿನೆಸ್ಟ್ ಟೋನ್ಡ್ ಹಾಲು ಅರ್ಧ ಲೀಟರ್ 24 ರೂಪಾಯಿ ಇದ್ರೆ, ಇದೇ ಹಾಲು ಒಂದು ಲೀಟರ್ 45 ರೂಪಾಯಿ ಇದೆ. ಈಗ ಹೊಸ ದರ ಜಾರಿಗೆ ಬಂದ್ರೆ ಅರ್ಧ ಲೀಟರ್ 26 ಮತ್ತು ಒಂದು ಲೀಟರ್ ಹಾಲು 49 ರೂಪಾಯಿ ಆಗಲಿದೆ.
  • ನೀಲಿ‌ ಪ್ಯಾಕೆಟ್ ಹಾಲು – 44 ರೂ.ದಿಂದ 48 ರೂ. ಏರಿಕೆ(ಪ್ರತಿ ಲೀಟರ್​ಗೆ).
  •  ಆರೆಂಜ್ ಪ್ಯಾಕೆಟ್ ಹಾಲು – 54 ರೂ‌. ನಿಂದ 58 ರೂ.
  •  ಸಮೃದ್ಧಿ ಹಾಲಿನ‌ ಪ್ಯಾಕೆಟ್: 56 ರೂ. ನಿಂದ 60 ರೂ.
  •  ಗ್ರೀನ್ ಸ್ಪೇಷಲ್ ಹಾಲು:  54 ರೂ. ನಿಂದ 58 ರೂ.
  •  ನಾರ್ಮಲ್ ಗ್ರೀನ್ ಹಾಲು:  52 ರೂ. ನಿಂದ 56 ರೂ.

 

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow