Online Betting: ಆನ್‌ ಲೈನ್ ಬೆಟ್ಟಿಂಗ್‌ʼಗೆ ಬಲಿಯಾದ ಒಂದೇ ಕುಟುಂಬದ ಮೂವರು..!

ಫೆಬ್ರವರಿ 18, 2025 - 14:00
 0  19
Online Betting: ಆನ್‌ ಲೈನ್ ಬೆಟ್ಟಿಂಗ್‌ʼಗೆ ಬಲಿಯಾದ ಒಂದೇ ಕುಟುಂಬದ ಮೂವರು..!

ಮೈಸೂರು: ಪ್ರಸ್ತುತ ದಿನಗಳಲ್ಲಿ ಎಲ್ಲಾ ವಯೋಮಾನದವರು ಮೊಬೈಲ್ ಉಪಯೋಗಿಸುತ್ತಿದ್ದಾರೆ. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಮೊಬೈಲ್ ಬಳಸುತ್ತಿದ್ದಾರೆ. ಯುವ ಪೀಳಿಗೆಯಂತೂ ಸಾಮಾಜಿಕ ಜಾಲತಾಣ ಮತ್ತು ಆನ್‌ಲೈನ್ ಗೇಮ್ ವ್ಯಸನಿಗಳಾಗುತ್ತಿದ್ದಾರೆ. ಐಪಿಎಲ್ ಸಂದರ್ಭದಲ್ಲಂತೂ ಆನ್​ ಲೈನ್ ಗೇಮ್ ಮೂಲಕ ಲಕ್ಷಗಟ್ಟಲೆ ಹಣ ಕಳೆದುಕೊಳ್ಳುತ್ತಿದ್ದಾರೆ. ಒಂದು ಕಾಲದಲ್ಲಿ ಕೆಲವೇ ಜನರಿಗೆ ಸೀಮಿತವಾಗಿದ್ದ ಬೆಟ್ಟಿಂಗ್ ಈಗ ಯೂಟ್ಯೂಬ್ ಚಾನೆಲ್‌ಗಳು, ವೆಬ್‌ಸೈಟ್‌ಗಳು ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ರೂಪದಲ್ಲಿ ಎಲ್ಲರಿಗೂ ಲಭ್ಯವಿದೆ. ಇದರಿಂದ ಕೆಲವರು ಇದರ ಲಾಭವನ್ನು ಪಡೆದುಕೊಂಡಿದ್ದು, ಈ ಕುತಂತ್ರಗಳಿಗೆ ಬಲಿಯಾಗಿರುವ ಘಟನೆಗಳು ನಡೆದಿವೆ.

ಇದೀಗ ಆನ್ ಲೈನ್ ಬೆಟ್ಟಿಂಗ್ ಗೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಅಣ್ಣ ಜೋಶಿ ಆಂಟೋನಿ, ಸಹೋದರ ಜೋಬಿ ಆಂಟೋನಿ, ಈತನ ಪತ್ನಿ ಸ್ವಾತಿ ಅಲಿಯಾಸ್ ಶರ್ಮಿಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಾಗೂ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೆನ್ನೆ ಅಣ್ಣ ಬಲಿಯಾದರೇ ಇಂದು ತಮ್ಮ ಹಾಗೂ ತಮ್ಮನ ಹೆಂಡತಿ ಆತ್ಮಹತ್ಯೆಗೆ ಶರಣಾಗಿದ್ದು ಆನ್ ಲೈನ್ ಗೇಮ್, ಹಣ ಡಬಲ್ ಆಗುವ ಆಸೆಗೆ ಇಡೀ ಕುಟುಂಬವೇ ಸರ್ವನಾಶವಾಗಿದೆ.

ಸೋಮವಾರ ಅಣ್ಣ ಜೋಶಿ ಆಂಟೋನಿ, ತಮ್ಮ ಹಾಗೂ ತಮ್ಮನ ಹೆಂಡತಿ ಮೇಲೆ ಆರೋಪಿಸಿ ವಿಡಿಯೋ ಮಾಡಿ ಮೈಸೂರು ತಾಲೂಕು ಹಂಚ್ಯಾ ಗ್ರಾಮದ ಬಳಿ ನೇಣು ಬಿಗಿದುಕೊಂಡಿದ್ದ. ತಮ್ಮ ಜೋಬಿ ಆಂಟೋನಿ ಹಾಗೂ ಆತನ ಹೆಂಡತಿ ಶರ್ಮಿಳಾ ಮೋಸದಿಂದ ತಂಗಿ ಮೂಲಕ ಸಾಲ ಮಾಡಿಸಿದ್ದಾರೆ. ಊರು ತುಂಬ ಸಾಲ ಮಾಡಿ, ನನ್ನ ತಂಗಿಗೆ ಮೋಸ ಮಾಡಿದ್ದಾರೆ. ನನ್ನ ತಂಗಿಗೆ ಗಂಡ ಇಲ್ಲ, ಒಬ್ಬಂಟಿಗೆ ಮೋಸ ಮಾಡಿದ್ದಾರೆ. ನನ್ನ ಸಾವಿಗೆ ತಮ್ಮ ಹಾಗೂ ಆತನ ಹೆಂಡತಿ ಕಾರಣ. ಅವರಿಗೆ ಶಿಕ್ಷೆ ಕೊಡಿಸಿ ಎಂದು ಹೇಳಿ ವೀಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಫೆ.17 ರಂದು ಒಬ್ಬ ಅಣ್ಣ ಸೆಲ್ಫೀ ವಿಡಿಯೋ ಮಾಡಿ ತನ್ನ ತಮ್ಮ ಹಾಗೂ ಆತನ ಪತ್ನಿ ವಿರುದ್ದ ಆರೋಪ ಮಾಡಿ ರಮ್ಮನಹಳ್ಳಿ ಸ್ಮಶಾನದ ಬಳಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡರೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪ ಹೊತ್ತ ಮತ್ತೊಬ್ಬ ಅಣ್ಣ ಹಾಗೂ ಪತ್ನಿ ವಾಟರ್ ಟ್ಯಾಂಕ್ ಗೆ ಅಳವಡಿಸಿದ ಮೆಟ್ಟಿಲುಗಳಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಜೋಬಿ ಹಾಗೂ ಶರ್ಮಿಳಾ ಐಪಿಎಲ್ ಹಾಗೂ ಆನ್ ಲೈನ್ ಗೇಮ್ ನಲ್ಲಿ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದರು. ಸಾಲಗಾರರು ಪ್ರತಿ ನಿತ್ಯ ಮನೆಯ ಬಳಿಗೆ ಬಂದು ದುಡ್ಡು ಕೇಳುತ್ತಿದ್ದರು. ಇದರಿಂದ ಮನನೊಂದ ಜೋಷಿ ಆಂಥೋಣಿ ವೀಡಿಯೋ ಮಾಡಿ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಇಂದು ಜೋಬಿ ಹಾಗೂ ಶರ್ಮಿಳಾ ಮೈಸೂರಿನ ವಿಜಯನಗರದ ಕ್ರೀಡಾ ಮೈದಾನದ ಬಳಿ ನೇಣಿಗೆ ಶರಣಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow