OTTಗೆ ಬರುತ್ತಿದೆ ‘ಕಾಂತಾರ: ಚಾಪ್ಟರ್ 1’: ರಿಷಬ್ ಶೆಟ್ಟಿ ಸಿನಿಮಾ ಒಂದೇ ತಿಂಗಳಿಗೆ ಒಟಿಟಿಗೆ ಬರುತ್ತಿರುವುದೇಕೆ..?
ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿದ ‘ಕಾಂತಾರ: ಚಾಪ್ಟರ್ 1’ ಚಿತ್ರವು ಭಾರತದಲ್ಲಿಯೇ ಅಕ್ಟೋಬರ್-2 ರಂದು ಸುಮಾರು 7 ಸಾವಿರ ಸ್ಕ್ರೀನ್ ಅಲ್ಲಿ ಇದು ಪ್ರದರ್ಶನ ಕಂಡಿದೆ. ಬಾಕ್ಸ್ ಆಫೀಸ್ ಅಲ್ಲಿ ವಿಶ್ವದಾದ್ಯಂತ 818 ಕೋಟಿ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಇದೀಗ ಅಕ್ಟೋಬರ್ 31ಕ್ಕೆ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಒಟಿಟಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಇದು ಕೆಲವು ಮಂದಿ ಅಭಿಮಾನಿಗಳಿಗೆ ಅಚ್ಚರಿಯ ವಿಷಯವಾಗಿದೆ, ಏಕೆಂದರೆ ಚಿತ್ರವು ಇನ್ನೂ ಥಿಯೇಟರ್‌ನಲ್ಲಿ ಉತ್ತಮ ಪ್ರದರ್ಶನ ಮಾಡುತ್ತಲೇ ಇದೆ. ಚಿತ್ರವು ಭಾರತದಲ್ಲಿ 592 ಕೋಟಿ ರೂಪಾಯಿ ಗಳಿಸಿದ್ದು, ಅಕ್ಟೋಬರ್ 27ರಂದು ಮಾತ್ರವೇ 3.25 ಕೋಟಿ ರೂಪಾಯಿ ಗಳಿಸಿದ್ದಾಗಿದೆ.
ಒಟಿಟಿ ಬಿಡುಗಡೆ ಶೀಘ್ರಗೊಳಿಸಲು ಕಾರಣ ಅಮೇಜಾನ್ ಪ್ರೈಮ್ ವಿಡಿಯೋ ಜೊತೆ ನಡೆದ ಹಕ್ಕು ಖರೀದಿ ಒಪ್ಪಂದ. ವರದಿಯಂತೆ, ಒಪ್ಪಂದದಲ್ಲಿ 125 ಕೋಟಿ ರೂಪಾಯಿ ನೀಡಿದ್ದು, ಚಿತ್ರವು ಥಿಯೇಟರ್‌ನಲ್ಲಿ ಬಿಡುಗಡೆಯಾದ ಮೇಲೆ ಒಂದು ತಿಂಗಳಲ್ಲಿ ಓಟಿಟಿಗೆ ಬರಬೇಕು ಎಂಬ ಷರತ್ತು ಇರಲಿದ್ದು, ಚಿತ್ರ ತಂಡವು ಅದಕ್ಕೆ ಒಪ್ಪಿಕೊಂಡಿದೆ.ಹೀಗಾಗಿಯೇ ಒಂದೇ ತಿಂಗಳಿಗೆ ಸಿನಿಮಾ ಒಟಿಟಿಗೆ ಬರುತ್ತಿದೆ. ಈಗಾಗಲೇ ಚಿತ್ರ ಥಿಯೇಟರ್‌ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದೆ. ಅಂದುಕೊಂಡತೆ ಸಿನಿಮಾ ಒಟಿಟಿಯಲ್ಲಿ ಬಂದಿದ್ದಕ್ಕೆ ಅವರ ಕಡೆಯಿಂದಲೂ ದೊಡ್ಡ ಮೊತ್ತದ ಹಣ ಸಿಗಲಿದೆ.
ಈ ಚಿತ್ರವನ್ನ ಬಹುತೇಕ ಎಲ್ಲರೂ ನೋಡಿದ್ದಾರೆ. ಕೆಲವೇ ಕೆಲವು ಜನ ಉಳಿದಿರಬಹುದು. ಅಂತಹವರು ಥಿಯೇಟರ್‌ಗೂ ಹೋಗಿ ಸಿನಿಮಾ ನೋಡಬಹುದು. ಇದು ಇನ್ನೂ ಥಿಯೇಟರ್ ಅಲ್ಲಿ ಇದೆ. ಹಾಗೇನೇ ಅಕ್ಟೋಬರ್ 31 ರಂದು ಈ ಚಿತ್ರ ಒಟಿಟಿ ಅಲ್ಲಿ ಪ್ರೀಮಿಯರ್ ಕೂಡ ಆಗುತ್ತಿದೆ. ಹಾಗಾಗಿಯೇ ಚಿತ್ರ ನೋಡದೇ ಇರೋರು ಮನೆಯಲ್ಲಿಯೇ ಕುಳಿತು ಈ ಸಿನಿಮಾ ವೀಕ್ಷಿಸಬಹುದು.
ನಿಮ್ಮ ಪ್ರತಿಕ್ರಿಯೆ ಏನು?