Prajwal Revanna: ದೋಷಿಯಾಗಿರುವ ಪ್ರಜ್ವಲ್ ವಿರುದ್ಧ ಇನ್ನೆಷ್ಟು ಅತ್ಯಾಚಾರ ಕೇಸ್​ ಇವೆ..?

ಆಗಸ್ಟ್ 1, 2025 - 21:16
 0  19
Prajwal Revanna: ದೋಷಿಯಾಗಿರುವ ಪ್ರಜ್ವಲ್ ವಿರುದ್ಧ ಇನ್ನೆಷ್ಟು ಅತ್ಯಾಚಾರ ಕೇಸ್​ ಇವೆ..?

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಪ್ರಕರಣಗಳಲ್ಲಿ ಮೊದಲ ತೀರ್ಪು ಇಂದು ಪ್ರಕಟವಾಗಿದೆ. ಕೆ.ಆರ್ ನಗರದ ಮಹಿಳೆಯೊಬ್ಬರು ನೀಡಿದ್ದ ದೂರು ಹಿನ್ನೆಲೆಯಲ್ಲಿ ಪ್ರಕರಣವನ್ನು ವಿಚಾರಿಸಿದ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ತೀರ್ಪು ನೀಡಿದೆ.

ದೋಷಿಗಳಾಗಿ ಘೋಷಿತನಾದ ಪ್ರಜ್ವಲ್ ರೇವಣ್ಣ ಅವರಿಗೆ ಎಷ್ಟು ವರ್ಷಗಳ ಶಿಕ್ಷೆ ವಿಧಿಸಲಾಗುತ್ತದೆ ಎಂಬುದನ್ನು ನಾಳೆ (ಆಗಸ್ಟ್ 2) ಕೋರ್ಟ್ ಪ್ರಕಟಿಸಲಿದೆ.

ಪ್ರಜ್ವಲ್ ವಿರುದ್ಧ ಒಟ್ಟು ನಾಲ್ಕು ಪ್ರತ್ಯೇಕ ಅತ್ಯಾಚಾರ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಈ ಪ್ರಕರಣದ ತೀರ್ಪು ಮೊದಲದು. ಉಳಿದಂತೆ ಹೊಳೆನರಸೀಪುರ, ಹಾಸನ ಹಾಗೂ ಐಟಿ ಆ್ಯಕ್ಟ್ ಪ್ರಕರಣಗಳು ಈಗಲೂ ವಿಚಾರಣಾ ಹಂತದಲ್ಲಿವೆ. ಈ ಎಲ್ಲಾ ಪ್ರಕರಣಗಳಲ್ಲಿ ಕೂಡ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಆರೋಪಗಳು ಹೊರಸಾಗಿವೆ.

2024ರ ಮೇ 31ರಂದು ಅವರನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದ್ದು, ಕಳೆದ 14 ತಿಂಗಳಿನಿಂದ ಅವರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗುತ್ತಿದೆ.

ಈ ನಡುವೆ ಅವರು ಕೆಲ ಮಹಿಳೆಯರೊಂದಿಗೆ ಶಾರೀರಿಕ ಸಂಬಂಧ ಹೊಂದಿ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿರುವ ಆರೋಪಗಳು ಕೂಡ ಸಾಬೀತಾಗಿವೆ. ಈ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಗಂಭೀರ ರೂಪ ಪಡೆದಿತ್ತು.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow