ಮತ್ತೆ ಕಾಮಾಂಧರ ಅಟ್ಟಹಾಸ: ಇನ್ಸ್ಟಾಗ್ರಾಮ್ ಗೆಳೆಯರ ನಂಬಿ ಹೋದ ಯುವತಿಯರ ಮೇಲೆ ಗ್ಯಾಂಗ್ ರೇಪ್!

ಅತ್ಯಾಚಾರ ಪ್ರಕರಣಗಳು ಬೆಚ್ಚಿಬೀಳಿಸುವಂತಿರುತ್ತವೆ. ತಂದೆ ಮಗಳನ್ನು ರೇಪ್ ಮಾಡುವುದು, ಅಪ್ಪ ಮಗ ಸೇರಿ ಸಹೋದರಿಯನ್ನೇ ಅತ್ಯಾಚಾರ ಮಾಡುವುದು, ಹೆಣ್ಣುಮಗು, ವಿದ್ಯಾರ್ಥಿನಿ ಹೀಗೆ ಕ್ರೂರವಾಗಿ ಹೆಣ್ಣೆಂದರೆ ಸಾಕು ಅತ್ಯಾಚಾರ ಮಾಡುವ ಕ್ರೂರ ಘಟನೆಗಳು ನಿಜಕ್ಕೂ ಆಘಾತಕಾರಿಯಾಗಿರುತ್ತವೆ. ಇದೀಗ . ಇಬ್ಬರು ಯುವತಿಯರ ಮೇಲೆ, ಮೂರು ಯುವಕರು ಅತ್ಯಾಚಾರ ನಡೆಸಿದ್ದಾರೆ. ಹಾರಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು. ಜನವರಿ 3ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಘಟನೆ ಬಗ್ಗೆ ಬೆಳಗಾವಿ ಎಸ್‌ಪಿ ಡಾ.ಭೀಮಾಶಂಕರ್ ಗುಳೇದ್ ಮಾಹಿತಿ ನೀಡಿದ್ದು. ಮೂವರು ಯುವಕರಿಂದ ಈ ಪೈಶಾಚಿಕ ಕೃತ್ಯ ನಡೆದಿದೆ. ಜನವರಿ 3ರಂದು ಘಟನೆ ನಡೆದಿದ್ದು. ಜನವರಿ 13ರಂದು ನೊಂದ ಬಾಲಕಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡು ಆರೋಪಿಗಳನ್ನು ಬಂದಿಸಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಮಾಹಿತಿ ದೊರೆತಿದೆ.
ಏನಿದು ಘಟನೆ ?
ನೊಂದ ಬಾಲಕಿಯೊಂದಿಗೆ ಆರೋಪಿ ಅಭಿಷೇಕ್ ಎಂಬಾತ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದನು. ಪರಿಚಯದ ನಂತರ ಆಕೆಯೊಂದಿಗೆ ಸಲುಗೆಯಿಂದ ಮಾತನಾಡುತ್ತಿದ್ದ ಆರೋಪಿ. ಸವದತ್ತಿಗೆ ಹೋಗುತ್ತಿದ್ದೇನೆ, ನೀನು ಬಾ ಎಂದು ನೊಂದ ಬಾಲಕಿಗೆ ಕರೆದಿದ್ದನು. ಇದಕ್ಕೆ ಒಪ್ಪಿದ ಬಾಲಕಿ ತನ್ನ ಸ್ನೇಹಿತೆಯನ್ನು ಕರೆದುಕೊಂಡು ಹಾರೋಗೇರಿ ಬಸ್ ನಿಲ್ದಾಣಕ್ಕೆ ಬಂದಿದ್ದಳು.
ಬಾಲಕಿಯರಿದ್ದ ಸ್ಥಳಕ್ಕೆ ಬಂದಿದ್ದ ಆರೋಪಿಗಳಾದ ಅಭಿಷೇಕ್, ಆದಿಲ್ ಜಮಾದಾರ್ ಮತ್ತು ಡ್ರೈವರ್ ಕೌತುಕ್ ಬಡಿಗೇರ ಬಾಲಕಿಯರನ್ನು ತಮ್ಮ ಎರ್ಟಿಗಾ ಕಾರಿನಲ್ಲಿ ಪಿಕ್ ಮಾಡಿದ್ದರು. ಅಲ್ಲಿಂದ ರಾಯಬಾಗ ತಾಲೂಕಿನ ಸವಸುದ್ದಿ ಗ್ರಾಮದ ಬಳಿಯ ಗುಡ್ಡಗಾಡು ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದ ಆರೋಪಿಗಳು. ಜನವರಿ 3ರ ಮಧ್ಯಾಹ್ನಾದ ವೇಳೆ ಗ್ಯಾಂಗ್ ರೇಪ್ ಮಾಡಿದ್ದಾರೆ.
ಈ ವೇಳೆ ಅತ್ಯಾಚಾರದ ವಿಡಿಯೋಗಳನ್ನು ಆರೋಪಿಗಳು ಚಿತ್ರಿಕರಿಸಿದ್ದು. ಈ ವಿಚಾರವನ್ನು ತಿಳಿಸಿದರೆ ವಿಡಿಯೋಗಳನ್ನು ಹರಿಬಿಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾರೆ. ಅಷ್ಟೆ ಅಲ್ಲದೆ ಬಾಲಕಿಗೆ ಗೋವಾಕ್ಕೆ ಬರಬೇಕು ಎಂದು ಬ್ಲಾಕ್ಮೇಲ್ ಮಾಡಿದ್ದ ಆರೋಪಿಗಳು, ಬರದೆ ಇದ್ದರೆ ವಿಡಿಯೋ ವೈರಲ್ ಮಾಡಿ, ಕೊಲೆ ಮಾಡುತ್ತೇವೆ ಎಂದು ಬೆದರಿಕೆ ಹಾಕಿದ್ದರು.
“ಸಂತ್ರಸ್ತ ಬಾಲಕಿಯರು ಮನೆಯಲ್ಲಿ ಈ ವಿಚಾರ ತಿಳಿಸಿದ್ದಾರೆ. ಬಳಿಕ, ಸಂತ್ರಸ್ತ ಬಾಲಕಿ ತಮ್ಮ ಸೋದರ ಸಂಬಂಧಿ ಜೊತೆಗೆ ಬಂದು ಜನವರಿ 13ರಂದು ಹಾರೂಗೇರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ಕೊಟ್ಟ 24 ಗಂಟೆಯೊಳಗೆ ಇಬ್ಬರು ಆರೋಪಿಯನ್ನ ಬಂಧಿಸಲಾಗಿದೆ. ನಂತರ, ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ” ಎಂದರು.
“ಆರೋಪಿಗಳ ಹಿನ್ನಲೆಯನ್ನು ಪರಿಶೀಲನೆ ಮಾಡುತ್ತೇವೆ. ಇನ್‌ಸ್ಟಾಗ್ರಾಂನಲ್ಲಿ ಹುಡಗಿ ಹಾಕಿದ್ದ ರೀಲ್ಸ್ ಪಾಲೋ ಮಾಡುತ್ತಿದ್ದ. ಅವರ ಮೊಬೈಲ್ಗಳನ್ನು ಜಪ್ತಿ ಮಾಡಿದ್ದು ಅದರಲ್ಲಿ ವಿಡಿಯೋಗಳು ಸಿಕ್ಕಿವೆ. ಗ್ಯಾಂಗ್ ರೇಪ್ ಪ್ರಕರಣ ಅಂತ ಕೇಸ್ ದಾಖಲಿಸಿದ್ದೇವೆ” ಎಂದು ಮಾಹಿತಿ ನೀಡಿದರು.
ನಿಮ್ಮ ಪ್ರತಿಕ್ರಿಯೆ ಏನು?






