PUC ಪಾಸ್ ಆಗಿದ್ಯಾ!? ಇಲ್ಲಿದೆ ಸರ್ಕಾರಿ ಕೆಲಸ, 3 ಸಾವಿರಕ್ಕೂ ಅಧಿಕ ಹುದ್ದೆ ಖಾಲಿ!

ರೈಲ್ವೆ ನೇಮಕಾತಿ ಮಂಡಳಿ ಎನ್ಟಿಪಿಸಿ ಖಾಲಿ ಇರುವಂತ ಹುದ್ದೆಗಳನ್ನ ನೇಮಕಾತಿ ಮಾಡುವ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಆಸಕ್ತರು ಅರ್ಜಿ ಸಲ್ಲಿಸಬಹುದು.
ರೈಲ್ವೆಯ ಎನ್ಟಿಪಿಸಿ ಪದವಿಪೂರ್ವ ಹಂತದ ಮೂರು ಸಾವಿರಕ್ಕೂ ಅಧಿಕ ಖಾಲಿ ಹುದ್ದೆಗಳಿಗಾಗಿ ಅರ್ಜಿಗಳನ್ನು ಆಹ್ವಾನ ಮಾಡಿದೆ. ರೈಲ್ವೆ ಇಲಾಖೆಯಲ್ಲಿ ಉದ್ಯೋಗಬೇಕೆಂದು ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ. ರೈಲ್ವೆ ನೇಮಕಾತಿ ಮಂಡಳಿಯ ತಾಂತ್ರಿಕವಲ್ಲದ ಉದ್ಯೋಗಗಳು ಇವಾಗಿದ್ದು ಈಗಾಗಲೇ ಅರ್ಜಿ ಆರಂಭವಾಗಿವೆ
ಇಡೀ ದೇಶದ್ಯಾಂತ ಈ ಹುದ್ದೆಗಳನ್ನು ಕಾಲ್ಫಾರ್ಮ್ ಮಾಡಿದ್ದು ಇದರಲ್ಲಿ ಬೆಂಗಳೂರಿಗೂ ಹುದ್ದೆಗಳು ಮೀಸಲಿವೆ. ಸಿಲಿಕಾನ್ ಸಿಟಿಗೆ ಒಟ್ಟು 60 ಹುದ್ದೆಗಳಿದ್ದು ಕರ್ನಾಟಕದ ಅಭ್ಯರ್ಥಿಗಳು ಅರ್ಜಿ ಹಾಕಬಹುದು.
ವಯಸ್ಸಿನ ಮಿತಿ
18 ರಿಂದ 33 ವರ್ಷದ ಎಲ್ಲ ಅಭ್ಯರ್ಥಿಗಳಿಗೆ ಅವಕಾಶ
ಆರ್ಆರ್ಬಿ- ಎನ್ಟಿಪಿಸಿ ಹುದ್ದೆ ವಿವರಗಳು:
ಕಮರ್ಷಿಯಲ್ ಕಮ್ ಟಿಕೆಟ್ ಕ್ಲರ್ಕ್- 2022
ಅಕೌಂಟ್ ಕ್ಲರ್ಕ್ ಕಮ್ ಟೈಪಿಸ್ಟ್- 361
ಜೂನಿಯರ್ ಕ್ಲರ್ಕ್ ಕಮ್ ಟೈಪಿಸ್ಟ್- 990
ಟ್ರೈನ್ ಕ್ಲರ್ಕ್- 72
ಒಟ್ಟು ಖಾಲಿ ಹುದ್ದೆಗಳು- 3,445
ಅರ್ಜಿ ಶುಲ್ಕ ಎಷ್ಟು ಇದೆ..?
ಜನರಲ್, ಒಬಿಸಿ, ಇಡಬ್ಲುಎಸ್- 500 ರೂಪಾಯಿಗಳು
ಎಸ್ಸಿ, ಎಸ್ಟಿ, ಪಿಹೆಚ್- 250 ರೂಪಾಯಿಗಳು
ಎಲ್ಲ ವರ್ಗದ ಮಹಿಳೆಯರಿಗೆ- 250 ರೂಪಾಯಿಗಳು
ಅರ್ಜಿ ಶುಲ್ಕವನ್ನು ಆನ್ಲೈನ್ ಮೂಲಕ ಪಾವತಿ ಮಾಡಬೇಕು
ವಿದ್ಯಾರ್ಹತೆ:
12ನೇ ತರಗತಿ ಪೂರ್ಣಗೊಳಿಸಿರಬೇಕು
ಜನರಲ್, ಒಬಿಸಿ, ಇಡಬ್ಲುಎಸ್ ಶೇ.50 ರಷ್ಟು ಅಂಕ ಪಡೆದಿರತಕ್ಕದ್ದು
ಟೈಪಿಸ್ಟ್ಗೆ ಅರ್ಜಿ ಹಾಕುವರು ಇಂಗ್ಲಿಷ್, ಹಿಂದಿ ಟೈಪ್ ಮಾಡಬೇಕು
ಪ್ರಮುಖವಾದ ದಿನಾಂಕಗಳು:
ಸೆಪ್ಟೆಂಬರ್ 21, 2024 -ಅರ್ಜಿ ಆರಂಭದ ದಿನಾಂಕ
ಅಕ್ಟೋಬರ್ 22, 2024 -ಅರ್ಜಿ ಕೊನೆ ದಿನಾಂಕ
ವೆಬ್ ಡೆಸ್ಕ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






