Pulao leaf: ಅಡುಗೆಗೆ ಮಾತ್ರವಲ್ಲ ಆರೋಗ್ಯ ಸಮಸ್ಯೆಗೂ ಪರಿಣಾಮಕಾರಿ ಪಲಾವ್ ಎಲೆ !

ನಮ್ಮ ಲೋಕಲ್ ಭಾಷೆಯಲ್ಲಿ ಪಲಾವ್ ಎಲೆಗಳು ಎಂದು ಕರೆಯಲ್ಪಡುವ ' ಬೇ ಲೀಫ್ ' ಹೆಚ್ಚಾಗಿ ಪಲಾವ್, ಟೊಮೆಟೊ ಬಾತ್ ಮತ್ತು ಇತರ ರೈಸ್ ಬಾತ್ ಗಳಲ್ಲಿ ಬಳಕೆಯಾಗುತ್ತದೆ. ತಯಾರು ಮಾಡುವ ತಿಂಡಿಯ ರುಚಿಯನ್ನು ಹೆಚ್ಚಿಸಲು ಬಳಕೆ ಮಾಡುವ ಈ ಎಲೆಗಳು ಪರೋಕ್ಷವಾಗಿ ನಮ್ಮ ಆರೋಗ್ಯಕ್ಕೆ ಸಾಕಷ್ಟು ಪ್ರಮಾಣದ ಪೌಷ್ಟಿಕ ಸತ್ವಗಳನ್ನು ಒದಗಿಸುತ್ತವೆ.
ಪಲಾವ್ ಎಲೆಯ ಅದ್ಭುತ ಆರೋಗ್ಯ ಪ್ರಯೋಜನಗಳು
- ಈ ಎಲೆಗಳು ಪಾರ್ಥೆನೊಲೈಡ್ ಎಂಬ ವಿಶಿಷ್ಟ ಫೈಟೊನ್ಯೂಟ್ರಿಯೆಂಟ್ನ್ನು ಹೊಂದಿರುತ್ತವೆ. ಇದು ಉರಿಯೂತವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ.
- ಪಲಾವ್ ಎಲೆಯಲ್ಲಿನ ಲಿನೂಲ್ ಅಂಶವು ನಮ್ಮ ದೇಹದಲ್ಲಿನ ಒತ್ತಡದ ಹಾರ್ಮೋನುಗಳ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಬೇ ಎಲೆಗಳು ವಿಟಮಿನ್ ಎ ಯ ಅತ್ಯುತ್ತಮ ಮೂಲವಾಗಿದೆ, ಇದು ಕಣ್ಣಿನ ಆರೋಗ್ಯಕ್ಕೆ ಮತ್ತು ಚರ್ಮದ ಆರೋಗ್ಯಕ್ಕೆ ಮುಖ್ಯವಾಗಿದೆ.
- ಕೆಫೀನ್ ಆಮ್ಲ ಮತ್ತು ರುಟಿನ್ ಎರಡೂ ಪ್ರಮುಖ ಸಾವಯವ ಸಂಯುಕ್ತಗಳಾಗಿವೆ, ಇದು ಪಲಾವ್ ಎಲೆಗಳಲ್ಲಿ ಕಂಡುಬರುತ್ತವೆ. ಇದು ನಿಮ್ಮ ಹೃದಯದ ಆರೋಗ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಪಲಾವ್ ಎಲೆಗಳು ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಅದನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
- ಪಲಾವ್ ಎಲೆಗಳು ಮಾತ್ರವಲ್ಲದೆ ಹಸಿ ಅರಶಿನ ಕೂಡಾ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು, ವಿಶೇಷವಾಗಿ ಚಳಿಗಾಲದಲ್ಲಿ ಎಂದು ಲೋವ್ನಿತ್ ಬಾತ್ರಾ ಅವರು ಹೇಳುತ್ತಾರೆ.
ನಿಮ್ಮ ಪ್ರತಿಕ್ರಿಯೆ ಏನು?






