Ruchi Gujjar: ಚಿತ್ರಮಂದಿರದಲ್ಲಿಯೇ ನಿರ್ಮಾಪಕನಿಗೆ ಚಪ್ಪಲಿಯಲ್ಲಿ ಹೊಡೆದ ನಟಿ..!

ಮುಂಬೈ: ಬಾಲಿವುಡ್ ನಿರ್ಮಾಪಕ ಕರಣ್ ಸಿಂಗ್ ವಿರುದ್ಧ ರೂಪಾಯಿ 23 ಲಕ್ಷ ವಂಚನೆಯ ಆರೋಪ ಮಾಡಿರುವ ಮಾಡೆಲ್ ಮತ್ತು ನಟಿ ರುಚಿ ಗುಜ್ಜರ್ ಅವರು, ಮುಂಬೈನ 'So Long Valley' ಚಿತ್ರದ ಪ್ರೀಮಿಯರ್ ಶೋನಲ್ಲಿ, ಕರಣ್ ಸಿಂಗ್ ಮೇಲೆ ಚಪ್ಪಲಿಯಿಂದ ಹೊಡೆದಿರುವ ಘಟನೆ ನಡೆದಿದೆ. ಈ ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ರುಚಿ ಗುಜ್ಜರ್ ಅವರ ದೂರಿನ ಆಧಾರದ ಮೇಲೆ ಓಶಿವಾರಾ ಠಾಣೆ ಪೊಲೀಸರು ಕರಣ್ ಸಿಂಗ್ ವಿರುದ್ಧ ಎಫ್ಐಆರ್ ದಾಖಲಿಸಿದ್ದು, ಅವರು ಸಿನಿಮಾ ಪ್ರಾಜೆಕ್ಟ್ ಆರಂಭಿಸುವ ನೆಪದಲ್ಲಿ ಹಣ ಪಡೆದು, ಭರವಸೆ ನೀಡಿದ ಲಾಭ ಮತ್ತು ಕ್ರೆಡಿಟ್ನ್ನು ನೀಡದೆ ವಂಚಿಸಿದ್ದಾರೆ ಎಂದು ನಟಿ ದೂರಿನಲ್ಲಿ ತಿಳಿಸಿದ್ದಾರೆ.
ಹಾಗೂ ಈ ಘಟನೆಯ ಭಾಗವಾಗಿ ಕರಣ್ ಸಿಂಗ್ ವಿರುದ್ಧ ಅಂಬೋಲಿ ಠಾಣೆಯಲ್ಲಿಯೂ ಮತ್ತೊಂದು ಎಫ್ಐಆರ್ ದಾಖಲಿಸುವ ಪ್ರಕ್ರಿಯೆ ನಡೆದಿದೆ ಎಂದು ಗುಜ್ಜರ್ ಪರ ವಕೀಲರು ತಿಳಿಸಿದ್ದಾರೆ.‘ಸೋ ಲಾಂಗ್ ವ್ಯಾಲಿ’ ಚಿತ್ರವು ಕ್ರೈಮ್ ಥ್ರಿಲ್ಲರ್ ಆಗಿದ್ದು, ತ್ರಿಧಾ ಚೌಧರಿ ಮತ್ತು ವಿಕ್ರಮ್ ಕೊಚ್ಚರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






