Samantha Ruth Prabhu: ಅಭಿಮಾನಿಗಳಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ನಟಿ ಸಮಂತಾ..! ಫ್ಯಾನ್ಸ್ ಫುಲ್ ಖುಷ್

ತೆಲುಗು ಚಿತ್ರರಂಗದ ಖ್ಯಾತ ನಟಿ ಸಂಮತಾ ರುತ್ ಪ್ರಭು. ಯೇ ಮಾಯಾ ಚೇಸಾವೆ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸಮಂತಾ ತಮ್ಮ ಸಹನಟ ನಾಗ ಚೈತನ್ಯ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಆದರೆ, ಇಬ್ಬರ ನಡುವೆ ಏನೋ ಸರಿಹೋಗದ ಕಾರಣ ವಿಚ್ಛೇದನ ಪಡೆದಿದ್ದರು.
ಇದೀಗ ಸಮಂತಾ ಅವರು ‘ಟ್ರಲಾಲಾ ಮೂವಿಂಗ್ ಪಿಕ್ಚರ್ಸ್’ ಹೆಸರಿನ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಈ ಬ್ಯಾನರ್ ಅಡಿಯಲ್ಲಿ ‘ಮಾ ಉಂಟಿ ಬಂಗಾರಮ್’ ಹೆಸರಿನ ಸಿನಿಮಾ ಘೋಷಣೆ ಮಾಡಿದ್ದರು. ಈ ಚಿತ್ರದಲ್ಲಿ ಸಮಂತಾ ಅವರೇ ನಟಿಸಲಿದ್ದಾರೆ ಎನ್ನಲಾಗಿದೆ. ಈ ಚಿತ್ರದ ನಿರ್ದೇಶಕರು ಹಾಗೂ ಇತರ ಪಾತ್ರವರ್ಗದ ಬಗ್ಗೆ ಯಾವುದೇ ಮಾಹಿತಿ ರಿವೀಲ್ ಆಗಿಲ್ಲ. ಈ ಚಿತ್ರದ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಈಗ ಇದೇ ನಿರ್ಮಾಣ ಸಂಸ್ಥೆ ಅಡಿ ಮೂಡಿ ಬಂದ ಮತ್ತೊಂದು ಸಿನಿಮಾ ಬಿಡುಗಡೆ ಕಾಣುತ್ತಿದೆ.
ಹೌದು, ವಸಂತ್ ಮರಿನ್ಕಂಡಿ ಮತ್ತು ಪ್ರವೀಣ್ ಒಟ್ಟಾಗಿ ನಿರ್ದೇಶಿಸಿದ ‘ಶುಭಂ’ ಸಿನಿಮಾ ರೆಡಿ ಆಗಿದೆ. ಈ ಮೊದಲು ಇಬ್ಬರೂ ‘ಸಿನಿಮಾ ಬಂಡಿ’ ಹೆಸರಿನ ಚಿತ್ರ ಮಾಡಿದ್ದರು. ಈಗ ಹೊಸ ತಂಡದೊಂದಿಗೆ ಮಾಡಿದ ‘ಶುಭಂ’ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿಕೊಂಡಿದೆ.
ಸಮಂತಾ ಅವರು ಈ ಚಿತ್ರದ ನಿರ್ಮಾಪಕರಲ್ಲಿ ಒಬ್ಬರು. ಈ ಸಿನಿಮಾ ಮೇ ವೇಳೆಗೆ ರಿಲೀಸ್ ಆಗುವ ಸಾಧ್ಯತೆ ಇದೆ. ಸಿನಿಮಾದ ಟ್ರೇಲರ್ ರಿಲೀಸ್ ಆದ ಬಳಿಕವೇ ಈ ಚಿತ್ರ ಯಾವ ರೀತಿಯಲ್ಲಿ ಮೂಡಿ ಬಂದಿದೆ ಎಂಬ ಮಾಹಿತಿ ಲಭ್ಯವಾಗಲಿದೆ.
ನಿಮ್ಮ ಪ್ರತಿಕ್ರಿಯೆ ಏನು?






