Shakti Scheme: 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ಗೆ ಸೇರಿದ ಕರ್ನಾಟಕದ 'ಶಕ್ತಿ ಯೋಜನೆ'!

ಆಗಸ್ಟ್ 18, 2025 - 18:01
ಆಗಸ್ಟ್ 18, 2025 - 17:25
 0  14
Shakti Scheme: 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ಗೆ ಸೇರಿದ ಕರ್ನಾಟಕದ 'ಶಕ್ತಿ ಯೋಜನೆ'!
Shakti Scheme: 'ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ಗೆ ಸೇರಿದ ಕರ್ನಾಟಕದ 'ಶಕ್ತಿ ಯೋಜನೆ'!

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಈಗ ವಿಶ್ವದಾಖಲೆ ನಿರ್ಮಿಸಿದೆ. ಕರ್ನಾಟಕ ಸಾರಿಗೆ ಇಲಾಖೆಯ KSRTC, BMTC, NWKRTC ಹಾಗೂ KKRTC ನಾಲ್ಕು ನಿಗಮಗಳ ಬಸ್‌ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯ ಪಡೆದ ಮಹಿಳೆಯರ ಸಂಖ್ಯೆ ವಿಶ್ವದಾಖಲೆ ತಲುಪಿದೆ. 2023ರ ಜೂನ್ 11ರಿಂದ 2025ರ ಜುಲೈ 25ರವರೆಗೆ ಒಟ್ಟು 5049476416 (ಸುಮಾರು 500 ಕೋಟಿ) ಮಹಿಳಾ ಪ್ರಯಾಣಿಕರು ಉಚಿತ ಟಿಕೆಟ್ ಪಡೆದು ಸಂಚರಿಸಿರುವುದು ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಸ್ನಲ್ಲಿ ದಾಖಲಾಗಿದೆ.

ಈ ಸಾಧನೆ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಪ್ರತಿಕ್ರಿಯಿಸಿ, “Beyond Free Rides” ಹೆಸರಿನಲ್ಲಿ Sustainable Mobility Network ನಡೆಸಿದ ಅಧ್ಯಯನದ ಪ್ರಕಾರ, ಬೆಂಗಳೂರಿನಲ್ಲಿ ಶೇ 23ರಷ್ಟು ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಶೇ 21ರಷ್ಟು ಮಹಿಳಾ ಉದ್ಯೋಗಿಗಳು ಉಚಿತ ಬಸ್ ಸೇವೆಯನ್ನು ಬಳಸಿದ್ದಾರೆ. ಶಕ್ತಿ ಯೋಜನೆಯಿಂದಾಗಿ ಮಹಿಳಾ ಪ್ರಯಾಣಿಕರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ರಾಜ್ಯದ ತಲಾ ಆದಾಯವೂ ಹೆಚ್ಚಿದೆ,” ಎಂದು ತಿಳಿಸಿದರು.

 ಮುಂದುವರಿದು, “ಈ ವಿಶ್ವದಾಖಲೆ ಸಾಧನೆಗೆ ಕಾರಣರಾದ ಕೆಎಸ್‌ಆರ್‌ಟಿ‌ಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿ‌ಸಿ, ಕೆಕೆಆರ್‌ಟಿ‌ಸಿ ಅಧಿಕಾರಿಗಳು ಹಾಗೂ ನೌಕರರಿಗೆ ಧನ್ಯವಾದಗಳು. ದೇಶದ ಹಲವು ರಾಜ್ಯಗಳಲ್ಲಿ ಶಕ್ತಿ ಯೋಜನೆ ಮಾದರಿಯಾಗಿ, ಬೇರೆ ಹೆಸರುಗಳಲ್ಲಿ ಜಾರಿಗೆ ಬರುತ್ತಿರುವುದು ನಮ್ಮ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow