Teacher: ಇವನೇನು ಶಿಕ್ಷಕನೋ, ಕಾಮುಕನೋ? ವಿದ್ಯಾರ್ಥಿನಿಯರ ಅಂಗಾಗ ಮುಟ್ಟಿ ಲೈಂಗಿಕ ದೌರ್ಜನ್ಯ!

ಕಲಬುರಗಿ: ಭಾರತೀಯ ಪರಂಪರೆಯಲ್ಲಿ ಅಪ್ಪ-ಅಮ್ಮನ ನಂತರ ಗುರುವಿಗೆ ಬಹಳ ಉನ್ನತವಾದ ಸ್ಥಾನವಿದೆ. ಶಿಕ್ಷಕನನ್ನು ದೇವರು ಎಂದು ಕೂಡ ಪರಿಗಣಿಸಲಾಗುತ್ತದೆ. ಆದರೆ, ಕಲಬುರಗಿ ಜಿಲ್ಲೆಯ ಸರ್ಕಾರಿ ಪ್ರೌಢಶಾಲೆಯೊಂದರಲ್ಲಿ ಆಂಗ್ಲ ಶಿಕ್ಷಕನಾಗಿದ್ದ ಬಸವರಾಜ್ ದ್ಯಾಮ ಎಂಬಾತ ಶಾಲೆಯಲ್ಲಿ ಓದುವ ಹೆಣ್ಮಕ್ಕಳಿಗೆ ಕಿರುಕುಳ ಕೊಡುತ್ತಿದ್ದ ಎನ್ನುವ ಆರೋಪ ಕೇಳಿ ಬಂದಿದೆ.
ಶಾಲೆ ವಿದ್ಯಾರ್ಥಿನಿಯರನ್ನ ಆಗಾಗ ಕಂಪ್ಯೂಟರ್ ಕ್ಲಾಸ್ ರೂಮ್ ಗಳಿಗೆ ಕರೆಸಿ ಅವರ ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನುವ ಆರೋಪ ಇದೆ. ಶಿಕ್ಷಕ ಬಸವರಾಜ್ ವರ್ತನೆಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆಕ್ರೋಶ ಹೊರಹಾಕಿದ್ರು. ಈ ಶಿಕ್ಷಕ ವಿದ್ಯಾರ್ಥಿಗಳ ಮೈ ಮುಟ್ಟಿ ಅಸಹ್ಯವಾಗಿ ಮಾತನಾಡುತ್ತಿದ್ದ ಎಂದು ಕೆಲವರು ಆರೋಪ ಮಾಡಿದ್ದಾರೆ. ಮಾರ್ಕ್ಸ್ ಕೊಡಲ್ಲ, ಹಾಲ್ ಟಿಕೆಟ್ ಕೊಡಲ್ಲ ಅಂತೆಲ್ಲಾ ಹೆಣ್ಮಕ್ಕಳಿಗೆ ಹೆದರಿಸಿದ್ದ ಎನ್ನಲಾಗ್ತಿದೆ.
ಶಾಲೆ ಬಿಟ್ಟು ಹೋಗಿದ್ದ ವಿದ್ಯಾರ್ಥಿನಿಯರು ಹಾಲ್ ಟಿಕೆಟ್ ಪಡೆಯಲು ಶಾಲೆಗೆ ಬಂದಾಗಲೂ ಕಿರುಕುಳ ಕೊಟ್ಟಿದ್ದ ಎನ್ನಲಾಗ್ತಿದೆ. ಶಿಕ್ಷಕನ ಈ ವರ್ತನೆಯನ್ನು ಇತರ ಶಿಕ್ಷಕರು ಕೂಡ ಗಮನಿಸಿದ್ರು. ವಿದ್ಯಾರ್ಥಿನಿಯರು ಕೂಡ ಬೇರೆ ಶಿಕ್ಷಕರಿಗೆ ಈ ಬಗ್ಗೆ ದೂರು ಹೇಳಿದ್ರು. ಆದ್ರೆ ಯಾರೊಬ್ಬರು ಹೆಡ್ ಮಾಸ್ಟರ್ ಗಮನಕ್ಕೆ ತಂದಿಲ್ಲ ಎನ್ನಲಾಗ್ತಿದೆ. ಕೆಲ ಶಿಕ್ಷಕರು ಕೂಡ ಈ ಬಗ್ಗೆ ಚರ್ಚೆ ನಡೆಸಿದ್ದರಂತೆ.
ನಿಮ್ಮ ಪ್ರತಿಕ್ರಿಯೆ ಏನು?






