Tharalabalu Matha; ಭಕ್ತರನ್ನು ಕುಡುಕರು ಎಂದ ಸಿರಿಗೆರೆ ಸ್ವಾಮೀಜಿ ವಿರುದ್ಧ ಕೇಸ್‌.!?

ಆಗಸ್ಟ್ 9, 2024 - 16:53
ಆಗಸ್ಟ್ 9, 2024 - 16:53
 0  5
Tharalabalu Matha;  ಭಕ್ತರನ್ನು ಕುಡುಕರು ಎಂದ ಸಿರಿಗೆರೆ ಸ್ವಾಮೀಜಿ ವಿರುದ್ಧ ಕೇಸ್‌.!?

ತರಳಬಾಳು ಬೃಹನ್ಮಠದ ಉಳಿವಿಗಾಗಿ ಸಭೆ ಮಾಡಿದ್ದ ಭಕ್ತರನ್ನು 'ಕುಡುಕರು' ಎಂದು ನಿಂದಿಸಿರುವ ಮಠದ ಪೀಠಾಧಿಕಾರಿ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲು ಭಕ್ತಗಣ ನಿರ್ಧರಿಸಿದೆ.

ಮಠದ ಹಿರಿಯ ಶ್ರೀಗಳಾದ ಶ್ರೀ ಶಿವಕುಮಾರ ಶಿವಚಾರ್ಯ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರೀಮತ್‌ ಸಾಧು ಸದ್ಧರ್ಮ ವೀರಶೈವ ಸಂಘವನ್ನು 1977 ರಲ್ಲಿಕಾನೂನು ಪ್ರಕಾರ ನೋಂದಾಯಿಸಿ, ಬೈಲಾ ಕೂಡ ರಚಿಸಲಾಗಿದೆ. ಇದನ್ನು ಕಡೆಗಣಿಸಿ, ಶಿವಮೂರ್ತಿ ಶ್ರೀಗಳು ಒಬ್ಬರೇ ಏಕಮಾತ್ರ ಟ್ರಸ್ಟಿ (ಸೋಲೋ ಟ್ರಸ್ಟಿ)ಯಾಗಿ ಟ್ರಸ್ಟ್‌ ಡೀಡ್‌ ಮಾಡಿಕೊಂಡಿದ್ದಾರೆ. ಮಠದ ಆಸ್ತಿಯನ್ನು ಇದಕ್ಕೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಈ ಕೂಡಲೇ ಟ್ರಸ್ಟ್‌ ಡೀಡ್‌ ರದ್ದು ಮಾಡಬೇಕು,''ಎಂದು ಭಕ್ತರು ಆಗ್ರಹಿಸಿದರು.


ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಠದ ಭಕ್ತರಾದ ಮಾಜಿ ಸಚಿವ ಬಿ.ಸಿ.ಪಾಟೀಲ್‌, '' 2021 ರಲ್ಲಿ ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಶ್ರದ್ಧಾಂಜಲಿ ಸಭೆಯಲ್ಲಿ ಶ್ರೀ ಅಣತಿಯಂತೆ 70 ವರ್ಷಕ್ಕೆ ಪೀಠಾಧಿಕಾರ ತ್ಯಾಗ ಮಾಡಬೇಕಿತ್ತು. ಆದರೆ, 5 ವರ್ಷ ಹೆಚ್ಚು ಪೀಠದಲ್ಲಿಇದ್ದೇನೆ. ಈಗ ತ್ಯಾಗ ಮಾಡುತ್ತೇನೆ ಎಂದು ಶಿವಮೂರ್ತಿ ಶ್ರೀಗಳು ಹೇಳಿದ್ದರು. ಆದರೆ, ಅದನ್ನು ಮಾಡಲಿಲ್ಲ. ಈಗ ಅವರಿಗೆ 78 ವರ್ಷಗಳಾಗಿವೆ. ಆದರೂ, ಪೀಠ ತ್ಯಾಗ ಮಾಡದೆ, ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದಾರೆ. ಅಲ್ಲದೆ, ಮಠದ ಭಕ್ತರನ್ನು ಒಡೆದು ಎರಡು ಗುಂಪುಗಳನ್ನಾಗಿ ಮಾಡುತ್ತಿದ್ದಾರೆ,'' ಎಂದು ದೂರಿದರು.

ವೆಬ್ ಡೆಸ್ಕ್
ಫೋಕಸ್ ಕರ್ನಾಟಕ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow