Tim Seifert: ಟಿಮ್ ಸೈಫರ್ಟ್ ಶರವೇಗದ ಶತಕ: ಹೊಸ ಇತಿಹಾಸ ನಿರ್ಮಾಣ

ಸೆಪ್ಟೆಂಬರ್ 2, 2025 - 09:19
 0  14
Tim Seifert: ಟಿಮ್ ಸೈಫರ್ಟ್ ಶರವೇಗದ ಶತಕ: ಹೊಸ ಇತಿಹಾಸ ನಿರ್ಮಾಣ

ರಿಬಿಯನ್ ಪ್ರೀಮಿಯರ್ಲೀಗ್‌ (CPL)ನಲ್ಲಿ ಹೊಸ ದಾಖಲೆ ನಿರ್ಮಾಣವಾಗಿದೆ. ಸೇಂಟ್ ಲೂಸಿಯಾ ಕಿಂಗ್ಸ್ ತಂಡದ ಆರಂಭಿಕ ದಾಂಡಿಗ ಟಿಮ್ ಸೈಫರ್ಟ್ ಕೇವಲ 40 ಎಸೆತಗಳಲ್ಲಿ ಶತಕ ಬಾರಿಸಿ ಶರವೇಗದ ದಾಖಲೆ ಬರೆದಿದ್ದಾರೆ.

ಡಾರೆನ್ ಸ್ಯಾಮಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಅಂಟಿಗುವಾ ಅ್ಯಂಡ್ ಬರ್ಬುಡಾ ಫಾಲ್ಕನ್ಸ್ ತಂಡ ಮೊದಲು ಬ್ಯಾಟ್ ಮಾಡಿ 20 ಓವರ್ಗಳಲ್ಲಿ 4 ವಿಕೆಟ್ಗೆ 204 ರನ್ ಗಳಿಸಿತು. 205 ರನ್ ಗುರಿ ಬೆನ್ನತ್ತಿದ ಸೇಂಟ್ ಲೂಸಿಯಾ ಕಿಂಗ್ಸ್ ಪರ ಸೈಫರ್ಟ್ ಸ್ಫೋಟಕ ಆರಂಭ ಒದಗಿಸಿದರು. ಸಿಕ್ಸ್ಫೋರ್ಗಳ ಮಳೆಗೈದು ಕೇವಲ 40 ಎಸೆತಗಳಲ್ಲಿ ಶತಕ ಪೂರೈಸಿ ದಾಖಲೆ ನಿರ್ಮಿಸಿದರು.

ಇದರೊಂದಿಗೆ, CPL ಇತಿಹಾಸದಲ್ಲಿ ಅತೀ ವೇಗದ ಶತಕ ಬಾರಿಸಿದ ಬ್ಯಾಟರ್ ಆಗಿ ಅಗ್ರಸ್ಥಾನಕ್ಕೇರಿದ್ದಾರೆ. ಇಂದುವರೆಗೂ ಆ್ಯಂಡ್ರೆ ರಸೆಲ್ (40 ಎಸೆತಗಳು) ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟಿದ ಸೈಫರ್ಟ್, ಅಲೆಕ್ಸ್ ಹೇಲ್ಸ್ (47 ಎಸೆತಗಳು) ಹೆಸರಿನಲ್ಲಿದ್ದ ವಿದೇಶಿ ಬ್ಯಾಟರ್ ದಾಖಲೆಯನ್ನೂ ಮುರಿದಿದ್ದಾರೆ.

ಪಂದ್ಯದಲ್ಲಿ ಸೈಫರ್ಟ್ 53 ಎಸೆತಗಳಲ್ಲಿ 9 ಸಿಕ್ಸ್, 10 ಫೋರ್ಗಳೊಂದಿಗೆ ಅಜೇಯ 125 ರನ್ ಸಿಡಿಸಿದರು. ಅವರ ಬಿರುಗಾಳಿ ಬ್ಯಾಟಿಂಗ್ ನೆರವಿನಿಂದ ಸೇಂಟ್ ಲೂಸಿಯಾ ಕಿಂಗ್ಸ್ ಕೇವಲ 17.5 ಓವರ್ಗಳಲ್ಲಿ 206 ರನ್ ಬಾರಿಸಿ 6 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow