UI Movie: ಯುಐ ಸಿನಿಮಾಗೆ ಭರ್ಜರಿ ಓಪನಿಂಗ್: UI ಸಿನಿಮಾ ಹೇಗಿದೆ..? ಜನರ ರಿಯಾಕ್ಷನ್ ಏನೂ..?

ಬೆಂಗಳೂರು: ಇಂದು ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ವಿಶ್ವದಾದ್ಯಂತ ಯುಐ ಬಿಡುಗಡೆ ಆಗಿದ್ದು, ನಿರೀಕ್ಷೆಗೂ ಮೀರಿದ ಬೇಡಿಕೆ ಸೃಷ್ಟಿಯಾಗಿದೆ. ಸುಮಾರು 2000ಕ್ಕೂ ಅಧಿಕ ಸ್ಕ್ರೀನ್ಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದ್ದು, ಇನ್ನೂ ಹೆಚ್ಚು ಸ್ಕ್ರೀನ್ ಸೇರ್ಪಡೆ ಆಗೋ ಸಾಧ್ಯತೆಯಿದೆ. ಉಪೇಂದ್ರ ಅವರ ಆಲೋಚನೆಗಳೇ ಭಿನ್ನ. ಅವುಗಳನ್ನು ಸಿನಿಮಾಗಳಲ್ಲೂ ತರುವ ಪ್ರಯತ್ನವನ್ನು ಉಪೇಂದ್ರ ಮಾಡುತ್ತಾರೆ. ಈಗ ‘ಯುಐ’ ಚಿತ್ರದ ರಿಲೀಸ್ ಸಂದರ್ಭದಲ್ಲಿ ಅವರು ಟ್ವೀಟ್ ಒಂದನ್ನು ಮಾಡಿ ಸವಾಲು ಹಾಕಿದ್ದಾರೆ.
ಉಪೇಂದ್ರ ಅವರ ನಿರ್ದೇಶನ ಎಂಬ ಒಂದೇ ಕಾರಣದಿಂದ ಚಿತ್ರಕ್ಕೆ ಹೆಚ್ಚು ಹೈಪ್ ಸಿಕ್ಕಿದೆ. ಮುಂಜಾನೆಯೇ ಅನೇಕ ಶೋಗಳು ಹೌಸ್ಫುಲ್ ಆಗಿವೆ. ಆ ಮೂಲಕ ‘ಯುಐ’ ಸಿನಿಮಾಗೆ ಒಳ್ಳೆಯ ಓಪನಿಂಗ್ ಸಿಕ್ಕಿದೆ. ಆರಂಭದಲ್ಲೇ ಉಪೇಂದ್ರ ಶಾಕ್ ನೀಡಿದ್ದಾರೆ. ‘ನೀವು ಬುದ್ಧಿವಂತರಾಗಿದ್ರೆ ಈಗಲೇ ಚಿತ್ರಮಂದಿರದಿಂದ ಎದ್ದೋಗಿ’ ಎಂದು ಹೇಳುವ ಮೂಲಕ ಜನರನ್ನು ಕನ್ಫ್ಯೂಸ್ ಮಾಡಿಸುತ್ತಾರೆ.
ಟಿಕೆಟ್ಗೆ ದುಡ್ಡು ಕೊಟ್ಟು ಬಂದ ಪ್ರೇಕ್ಷಕರನ್ನು ಎದ್ದು ಹೋಗಿ ಅಂತ ಹೇಳಿದ್ದಕ್ಕೆ ಪ್ರೇಕ್ಷಕರಿಗೆ ಶಾಕ್ ಆಗಿದೆ. ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಉಪೇಂದ್ರ ಅವರ ಅಪ್ಪಟ ಅಭಿಮಾನಿಗಳು ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದಾರೆ. ಮೊದಲ ಬಾರಿಗೆ ಅರ್ಥ ಆಗದೇ ಇದ್ದರೂ ಪರವಾಗಿಲ್ಲ. ಎರಡನೇ ಸಲ ಸಿನಿಮಾ ನೋಡುವುದಾಗಿ ಅನೇಕರು ಹೇಳಿದ್ದಾರೆ. ‘ವಿಮರ್ಶೆ ಹೇಳೋಕೆ ಆಗ್ದೇ ಇರುವಂತಹ ಮೂವೀ ಅಂದ್ರೆ ವಿಮರ್ಶೆಗಿಂತ ರಿಯಾಲಿಟಿ ಮುಖ್ಯ.
ಅದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಸಲಿ ಮೂವೀ ನೋಡಿ ನಿಮಗೆ ಗೊತ್ತಾಗುತ್ತೆ. ಈ ಮೂವೀ ಸೋಲೋಕೆ ಸಾಧ್ಯನೇ ಇಲ್ಲ. ಸೋಲ್ತು ಅಂದ್ರೆ ಸೋತಿದ್ದು ಮೂವೀ ಅಲ್ಲ, ನಾವು’ ಎಂದು ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ಈ ಸಿನಿಮಾದಲ್ಲಿ ರೀಷ್ಮಾ ನಾಣಯ್ಯ, ರವಿಶಂಕರ್, ಅಚ್ಯುತ್ ಕುಮಾರ್, ಸಾಧು ಕೋಕಿಲ ಮುಂತಾದವರು ನಟಿಸಿದ್ದಾರೆ.
ಅಜನೀಶ್ ಬಿ. ಲೋಕನಾಥ್ ಸಂಗೀತ ನೀಡಿದ್ದಾರೆ. ಕನ್ನಡದ ಜತೆಗೆ ತಮಿಳು, ತೆಲುಗು, ಹಿಂದಿ, ಮಲಯಾಳಂ ಭಾಷೆಯಲ್ಲೂ ಸಿನಿಮಾ ಬಿಡುಗಡೆ ಆಗಿದೆ. ಯುಐ ಸಿನಿಮಾ ಪೂರ್ತಿಯಾಗಿ ಅರ್ಥ ಆಗದೇ ಇದ್ದರೂ ಪರವಾಗಿಲ್ಲ, ಕೊನೇ ಪಕ್ಷ ಡಿಫರೆಂಟ್ ಆಗಿದೆ ಎಂದು ಕೂಡ ಕೆಲವು ಪ್ರೇಕ್ಷಕರು ಖುಷಿಪಟ್ಟಿದ್ದಾರೆ. ಇಡೀ ಸಿನಿಮಾ ಉಪೇಂದ್ರ ಅವರ ಒನ್ ಮ್ಯಾನ್ ಶೋ ರೀತಿ ಇದೆ. ದ್ವಿಪಾತ್ರದಲ್ಲಿ ಉಪ್ಪಿ ಕಾಣಿಸಿಕೊಂಡಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?






