ಸಿಲಿಕಾನ್ ಸಿಟಿ ಮಂದಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಅಮೆರಿಕಾ ಕಾನ್ಸುಲೇಟ್..! ಏನದು ಅಂತೀರಾ ಈ ಸ್ಟೋರಿ ನೋಡಿ

ಬೆಂಗಳೂರು: ಪದೇಪದೇ ಪ್ರಯಾಣ ಮಾಡುವಂಥ ಪ್ರಯಾಣಿಕರಿಗಾಗಿ ಗುಡ್ ನ್ಯೂಸ್ ಸಿಕ್ಕಿದೆ. ಅಮೆರಿಕ ಕಾನ್ಸುಲೇಟ್ ಕಚೇರಿಯು ಬೆಂಗಳೂರಿನಲ್ಲಿ ಜನವರಿ ತಿಂಗಳಿನಲ್ಲಿ ಆರಂಭವಾಗಲಿದೆ. ಕಚೇರಿ ಆರಂಭಿಸುವ ನಿಟ್ಟಿನಲ್ಲಿ ಅಮೆರಿಕ ಕಾರ್ಯನಿರತವಾಗಿದೆ ಎಂದು ಭಾರತದಲ್ಲಿರುವ ಅಮೆರಿಕದ ರಾಯಭಾರಿ ಎರಿಕ್ ಗಾರ್ಸೇಟ್ಟಿ ತಿಳಿಸಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೆಂಗಳೂರುನಲ್ಲಿ ದೂತವಾಸ ಕಚೇರಿಯನ್ನು ಹೊಂದಿರದ ಏಕೈಕ ದೇಶ ಅಮೆರಕವಾಗಿತ್ತು.
ಆದರೆ, ಈಗ ಕಚೇರಿ ಸ್ಥಾಪನೆಗೆ ನಾವು ಶ್ರಮಿಸಿದ್ದೇವೆ ಎಂದು ಹೇಳಿದರು. ಬೆಂಗಳೂರಿನಲ್ಲಿ ದೂತವಾಸ ಕಚೇರಿ ಆರಂಭವಾಗುತ್ತಿರುವ ವಿಚಾರವಾಗಿ ಬಿಜೆಪಿ ಸಂಸದ ತೇಜೆಸ್ವಿ ಸೂರ್ಯ ಸಂತಸ ವ್ಯಕ್ತಪಡಿಸಿದ್ದು, “ಬೆಂಗಳೂರಿನ ಜನರಿಗೆ ಇದು ಅತಿ ದೊಡ್ಡ ಸುದ್ದಿ, ಜನವರಿಯಲ್ಲಿ ಅಮೆರಿಕ ಕಾನ್ಸುಲೇಟ್ ಕಚೇರಿ ಆರಂಭವಾಗಲಿದೆ” ಎಂದು ಟ್ವೀಟ್ ಮಾಡಿದ್ದಾರೆ. ಮುಂದುವರೆದು “ಐಟಿ ರಾಜಧಾನಿ ಬೆಂಗಳೂರು ದೇಶದ ಐಟಿಗೆ ಶೇ40 ರಷ್ಟು ಆದಾಯ ನೀಡುತ್ತದೆ.
ಬೆಂಗಳೂರಿನ ಅನೇಕ ಜನರು ಮತ್ತು ಟೆಕ್ಕಿಗಳು ನಗರದಲ್ಲಿ ಅಮೆರಿಕ ವೀಸಾ ಪಡೆಯಲು ಚೆನ್ನೈ ಮತ್ತು ಹೈದರಾಬಾದ್ ಹೋಗುತ್ತಿದ್ದರು. ಅಮೆರಿಕ ವೀಸಾ ಪಡೆಯಲು ಚೆನ್ನೈ ಮತ್ತು ಹೈದರಾಬಾದ್ ಹೋಗುವುದನ್ನು ತಪ್ಪಿಸಿ, ಬೆಂಗಳೂರಿನಲ್ಲೇ ದೂತವಾಸ ಕಚೇರಿ ಆರಂಭಿಸುವುದು ಸಂಸದನಾಗಿ ನನ್ನ ಗುರಿಯಾಗಿತ್ತು. ಅದರಂತೆ, ಬೆಂಗಳೂರಿನಲ್ಲಿ ದೂತವಾಸ ಆರಂಭಿಸುವಲ್ಲಿ ಯಶಸ್ವಿಯಾಗಿದ್ದೇನೆ” ಎಂದು ಹೇಳಿದರು.
“ಬೆಂಗಳೂರಿನಲ್ಲಿ ದೂತವಾಸ ತೆರೆಯುವಂತೆ ಕೇಂದ್ರ ಸಚಿವ ಎಸ್ ಜೈಶಂಕರ್ ಅವರಿಗೆ 2019 ನವೆಂಬರ್ನಲ್ಲಿ ಮನವಿ ಮಾಡಿದ್ದೆ. 2023ರಲ್ಲಿ ಬೆಂಗಳೂರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ದೂತವಾಸ ತೆರೆಯುವ ಬಗ್ಗೆ ಭರವಸೆ ನೀಡಿದರು.
ನಿಮ್ಮ ಪ್ರತಿಕ್ರಿಯೆ ಏನು?






