UI ಕಮಾಲ್: ಕರ್ನಾಟಕದಲ್ಲಿ ಮೊದಲ ದಿನ ಕಲೆಕ್ಷನ್ ಆಗಿದ್ದೆಷ್ಟು?
ಉಪ್ಪಿ ನಟಿಸಿ ನಿರ್ದೇಶಿಸಿರುವ UI ಸಿನಿಮಾ ಕರ್ನಾಟಕದಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಕರ್ನಾಟಕದಲ್ಲಿ ಯುಐ ಸಿನಿಮಾ 10 ಕೋಟಿ ರೂ. ಕಲೆಕ್ಷನ್ ಮಾಡಿ ದಾಖಲೆ ಬರೆದಿದೆ.
ಭಾರೀ ನಿರೀಕ್ಷೆಯಲ್ಲಿದ್ದ ಉಪ್ಪಿ ನಿರ್ದೇಶನದ ಯುಐ ಸಿನಿಮಾ ರಿಲೀಸ್ ಆಗಿದೆ. ರಿಯಲ್ ಸ್ಟಾರ್ ಪಕ್ಕಾ ಏನೋ ಒಂದು ಸ್ಪೆಷಲ್ ಆಗಿ ತೋರಿಸ್ತಾರೆ ಅಂತ ಕಾಯ್ತಿದ್ದ ಜನ ಸಿನಿಮಾ ನೋಡ್ತಿದ್ದಾರೆ. ಹೇಗಿದೆ ಉಪೇಂದ್ರ ಅವರ ಸಿನಿಮಾ? ಕಥೆ ಏನು? ಕಾನ್ಸೆಪ್ಟ್ ಏನು? ಲವ್ ಸ್ಟೋರಿ ಇದ್ಯಾ? ಉಪ್ಪಿಯ ಯುಐ ಪ್ರಪಂಚದ ಒಳಗೆ ಹೇಗಿದೆ? ಸಿನಿಮಾದ ಫಸ್ಟ್ ರಿವ್ಯೂ ಇಲ್ಲಿದೆ.
UI ಬಹುಭಾಷೆಗಳಲ್ಲಿ ರಿಲೀಸ್ ಆಗಿ ಉತ್ತಮ ರೆಸ್ಪಾನ್ಸ್ ಪಡೆದಿದೆ. ಮೊದಲ ದಿನವೇ ಕರ್ನಾಟಕದಲ್ಲಿ 10 ಕೋಟಿ ರೂ. ಕಲೆಕ್ಷನ್ ಮಾಡಿದೆ. ಆಂಧ್ರ ಪ್ರದೇಶ, ತೆಲಂಗಾಣದಲ್ಲೂ ಹೌಸ್‌ಫುಲ್ ಪ್ರದರ್ಶನ ಕಂಡಿದೆ. ಸಿನಿಮಾ ನೋಡಿ ಪ್ರೇಕ್ಷಕ ಪ್ರಭುಗಳು ಕೊಂಡಾಡಿದ್ದಾರೆ.
UI ಸಿನಿಮಾದ ಮೂಲಕ ಮತ್ತೆ ಪ್ರೇಕ್ಷಕರ ತಲೆಗೆ ಉಪೇಂದ್ರ ಹುಳ ಬಿಟ್ಟಿದ್ದಾರೆ. ಚಿತ್ರದ ಕಥೆಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇಂದು ಬೆಳಗ್ಗೆ 6:30ರಿಂದಲೇ ಚಿತ್ರದ ಪ್ರದರ್ಶನ ಶುರುವಾಗಿದೆ. ‘ಯುಐ’ ಚಿತ್ರ ನೋಡಿ ಫ್ಯೂಚರ್ ಫಿಲ್ಮ್, ಮತ್ತೊಮ್ಮೆ ಸಿನಿಮಾ ನೋಡಿದ್ರೆನೇ ಅರ್ಥವಾಗೋದು ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ನಿಮ್ಮ ಪ್ರತಿಕ್ರಿಯೆ ಏನು?