Union Bank Jobs: ಕರ್ನಾಟಕದಲ್ಲಿದೆ ಬ್ಯಾಂಕಿಂಗ್‌ ಉದ್ಯೋಗಾವಕಾಶ! ಇಂದೇ ಅರ್ಜಿ ಸಲ್ಲಿಸಿ

ನವೆಂಬರ್ 30, 2024 - 08:02
 0  15
Union Bank Jobs: ಕರ್ನಾಟಕದಲ್ಲಿದೆ ಬ್ಯಾಂಕಿಂಗ್‌ ಉದ್ಯೋಗಾವಕಾಶ! ಇಂದೇ ಅರ್ಜಿ ಸಲ್ಲಿಸಿ

ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ದೇಶದ ವಿವಿಧ ಭಾಗಗಳಲ್ಲಿರುವ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಸ್ಥಳೀಯ ಬ್ಯಾಂಕ್ ಅಧಿಕಾರಿ ಹುದ್ದೆಗಳಿಗೆ ಆನ್​​ಲೈನ್ ಮೂಲಕ​ ಅಪ್ಲಿಕೇಶನ್ ಅನ್ನು ಆಹ್ವಾನ ಮಾಡಲಾಗಿದೆ. ಕರ್ನಾಟಕದಲ್ಲೂ ಈ ಬ್ಯಾಂಕ್​ನ ಬ್ರ್ಯಾಂಚ್​ಗಳಿದ್ದು ಇಲ್ಲಿಯು ಉದ್ಯೋಗಗಳು ಖಾಲಿ ಇವೆ. ಹೀಗಾಗಿ ಕರ್ನಾಟಕದವರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಬಹುದು.

ವಿವಿಧ ಪ್ರದೇಶ ಬಿಟ್ಟು ಕರ್ನಾಕದಲ್ಲಿ ಮಾತ್ರ 300 ಉದ್ಯೋಗಗಳು ಖಾಲಿ ಇವೆ. ಎಸ್​ಸಿ 45, ಎಸ್​ಟಿ 22, ಒಬಿಸಿ 81, ಎಡಬ್ಲುಎಸ್​ 30, ಯುಆರ್ 122 ಉದ್ಯೋಗಗಳು ಮೀಸಲು ಇವೆ. ಅ.23 ರಂದು ಬ್ಯಾಂಕ್ ನೋಟಿಫಿಕೇಶನ್ ಬಿಡುಗಡೆ ಮಾಡಲಾಗಿತ್ತು. ಈಗಾಗಲೇ ಅಭ್ಯರ್ಥಿಗಳು ಉದ್ಯೋಗಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಆನ್‌ಲೈನ್ ನೋಂದಣಿ, ಕೊನೆ ದಿನಾಂಕ, ಅರ್ಹತಾ ಮಾನದಂಡಗಳು, ಆಯ್ಕೆ ಪ್ರಕ್ರಿಯೆ ಹೇಗೆಲ್ಲಾ ಇರಲಿದೆ ಎಂಬುದು ಇಲ್ಲಿದೆ.

ಉದ್ಯೋಗದ ಹೆಸರು ಹಾಗೂ ಎಷ್ಟು ಇವೆ?

ಲೋಕಲ್ ಬ್ಯಾಂಕ್ ಆಫೀಸರ್ (ಎಲ್​ಬಿಒ)
ಒಟ್ಟು ಹುದ್ದೆಗಳು- 1,500

ಅರ್ಜಿಗೆ ಪಾವತಿಸಬೇಕಾದ ಶುಲ್ಕ?

ಜನರಲ್​, ಇಡಬ್ಲುಎಸ್, ಒಬಿಸಿ- 850 ರೂ.ಗಳು
ಎಸ್​ಸಿ, ಎಸ್​​​ಟಿ, ಅಂಗ ವಿಕಲರು- 175 ರೂ.ಗಳು

ವಯೋಮಿತಿ- 20- 30 ವರ್ಷ

ಶೈಕ್ಷಣಿಕ ಅರ್ಹತೆ ಏನು ಕೇಳಿದ್ದಾರೆ?

ಯಾವುದೇ ವಿಷಯದಲ್ಲಿ ಪದವಿ

ಹೇಗೆ ಆಯ್ಕೆ ಮಾಡಲಾಗುತ್ತದೆ?

ಲಿಖಿತ ಪರೀಕ್ಷೆ (ಆನ್​ಲೈನ್)
ಗುಂಪು ಚರ್ಚೆ
ಇಂಟರ್​ವ್ಯೂವ್
ಭಾಷಾ ಪ್ರಾವೀಣ್ಯತೆ ಪರೀಕ್ಷೆ (ಎಲ್​​​ಪಿಟಿ)
ದಾಖಲಾತಿ ಪರಿಶೀಲನೆ

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow