UPSC Recruitment: ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ ಹುದ್ದೆಗಳು: ಪದವೀಧರರಿಗೂ ಸಿಗಲಿದೆ ಅವಕಾಶ
ಕೇಂದ್ರ ಲೋಕಸೇವಾ ಆಯೋಗ (UPSC) ಹೊಸದಾಗಿ 213 ಹುದ್ದೆಗಳ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ವೈದ್ಯಕೀಯ, ಕಾನೂನು ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಉದ್ಯೋಗ ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ಇದು ಉತ್ತಮ ಅವಕಾಶವಾಗಿದೆ. ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದ್ದು, ಅಕ್ಟೋಬರ್ 2ರವರೆಗೆ ಮುಂದುವರಿಯಲಿದೆ. ಆಸಕ್ತ ಅಭ್ಯರ್ಥಿಗಳು UPSC ಅಧಿಕೃತ ವೆಬ್ಸೈಟ್ upsc.gov.in ಮೂಲಕ ಅರ್ಜಿ ಸಲ್ಲಿಸಬಹುದು.
ಹುದ್ದೆಗಳ ವಿವರ:
-
ವೈದ್ಯಕೀಯ ಅಧಿಕಾರಿ – 125 ಹುದ್ದೆಗಳು
-
ಉಪನ್ಯಾಸಕ (ಉರ್ದು) – 15 ಹುದ್ದೆಗಳು
-
ಹೆಚ್ಚುವರಿ ಸರ್ಕಾರಿ ವಕೀಲ – 5 ಹುದ್ದೆಗಳು
-
ಸಹಾಯಕ ಕಾನೂನು ಸಲಹೆಗಾರ – 16 ಹುದ್ದೆಗಳು
-
ಲೆಕ್ಕಪತ್ರ ಅಧಿಕಾರಿ – 32 ಹುದ್ದೆಗಳು
-
ಸಹಾಯಕ ನಿರ್ದೇಶಕ ಸೇರಿ ಇತರ ಹುದ್ದೆಗಳು
ಅರ್ಹತೆ:
-
ವೈದ್ಯಕೀಯ ಅಧಿಕಾರಿ: ಎಂಬಿಬಿಎಸ್ ಪದವಿ ಕಡ್ಡಾಯ
-
ಉಪನ್ಯಾಸಕ (ಉರ್ದು): ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್
-
ಕಾನೂನು ಹುದ್ದೆಗಳು: ಎಲ್ಎಲ್ಬಿ ಪದವಿ ಕಡ್ಡಾಯ
-
ಇತರ ಹುದ್ದೆಗಳು: ಪದವಿ ಅಥವಾ ಸ್ನಾತಕೋತ್ತರ ಪದವಿ ಅಗತ್ಯ
ವಯಸ್ಸಿನ ಮಿತಿ:
-
ಸಾಮಾನ್ಯ ವರ್ಗ (UR): ಗರಿಷ್ಠ 50 ವರ್ಷ
-
OBC: 53 ವರ್ಷ
-
SC/ST: 55 ವರ್ಷ
-
PwBD: 56 ವರ್ಷ
ಅರ್ಜಿ ಶುಲ್ಕ:
-
ಸಾಮಾನ್ಯ ವರ್ಗ: ₹25
-
ಮಹಿಳೆಯರು, SC, ST ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕವಿಲ್ಲ
ಆಯ್ಕೆ ಪ್ರಕ್ರಿಯೆ:
ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು.
ನಿಮ್ಮ ಪ್ರತಿಕ್ರಿಯೆ ಏನು?