ಸರ್ಕಾರಿ ಕೆಲಸ ಸರ್ಚ್ ಮಾಡ್ತಿದ್ದೀರಾ!? ಹಾಗಿದ್ರೆ ಇಲ್ಲಿ ನೋಡಿ ಕೈತುಂಬಾ ಕೆಲಸ, ಅರ್ಹರು ಅಪ್ಲೈ ಮಾಡಿ!

ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ದೆಹಲಿಯಲ್ಲಿರೋ ಭಾರತ ಸರ್ಕಾರದ ವೈದ್ಯಕೀಯ ಅಧೀಕ್ಷಕರ ಕಚೇರಿ, ವಿಎಂಎಂಸಿ ಸಫ್ದರ್ಜಂಗ್ ಆಸ್ಪತ್ರೆಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಈಗಾಗಲೇ ಹುದ್ದೆಗಳಿಗೆ ಅರ್ಜಿ ಆಹ್ವಾನ ಮಾಡಲಾಗಿದ್ದು, ಸಂಬಳ ಬರೋಬ್ಬರಿ 56100 ರಿಂದ 177500 ರೂ. ಇರಲಿದೆ. ಅರ್ಹ ಮತ್ತು ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಬಹುದು.
ಸಹಾಯಕ ನಿರ್ದೇಶಕರು (ಒಎಲ್) ಕೇವಲ ಒಂದು ಹುದ್ದೆ ಮಾತ್ರ ಖಾಲಿ ಇದ್ದು, ಸಂಬಳ 56100 ರಿಂದ 177500 ರೂ. ಇರಲಿದೆ. ಅಗತ್ಯ ಅರ್ಹತೆ, ವಯೋಮಿತಿ, ಅರ್ಜಿ ನಮೂನೆ ಸೇರಿದಂತೆ ಇತ್ಯಾದಿ ಮಾಹಿತಿಗಾಗಿ ಸಫ್ದರ್ಜಂಗ್ ಆಸ್ಪತ್ರೆಯ ಜಾಲತಾಣ -www.vmmc-sjh.nic.in)/ DGHS -https://dghs.gov.in ಗೆ ಭೇಟಿ ನೀಡಲು ಸೂಚಿಸಲಾಗಿದೆ.
ಇನ್ನು, ವೆಬ್ಸೈಟಿನಲ್ಲಿ ನೀಡಿದ ಸೂಚನೆಯಂತೆ ಎಲ್ಲ ಪೂರಕ ದಾಖಲೆಗಳೊಂದಿಗೆ ನಿಗದಿತ ಅರ್ಜಿ ನಮೂನೆ ಭರ್ತಿ ಮಾಡಿ ಸಲ್ಲಿಸಬೇಕು. ಜಾಹೀರಾತು ನೀಡಿದ 30 ದಿನಗಳ ಒಳಗೆ ಅರ್ಜಿ ಸಲ್ಲಿಸಬೇಕು. ವೆಬ್ಸೈಟಿನಲ್ಲಿ ನೀಡಲಾದ ವಿಳಾಸಕ್ಕೆ ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಯಾವಾಗ ಬೇಕಾದ್ರೂ ಭೇಟಿ ನೀಡಬಹುದು. ಅಷ್ಟೇ ಅಲ್ಲ ಶನಿವಾರ ಮಾತ್ರ ಅರ್ಧ ದಿನ ಇದ್ದು, ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅರ್ಜಿ ಸ್ವೀಕರಿಸಲಾಗುವುದು ಎಂದು ತಿಳಿದು ಬಂದಿದೆ.
ನಿಮ್ಮ ಪ್ರತಿಕ್ರಿಯೆ ಏನು?






