Vaibhav Suryavanshi: 14 ವರ್ಷದ ವೈಭವ್ ಸೂರ್ಯವಂಶಿ ಒಟ್ಟು ಆಸ್ತಿ ಎಷ್ಟು? ಇಲ್ಲಿದೆ ಮಾಹಿತಿ

ಜುಲೈ 11, 2025 - 08:47
 0  14
Vaibhav Suryavanshi: 14 ವರ್ಷದ ವೈಭವ್ ಸೂರ್ಯವಂಶಿ ಒಟ್ಟು ಆಸ್ತಿ ಎಷ್ಟು? ಇಲ್ಲಿದೆ ಮಾಹಿತಿ

ಐಪಿಎಲ್ 2025ರಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಗಮನ ಸೆಳೆದಿದ್ದ ಯುವ ಬ್ಯಾಟ್ಸ್ಮನ್ ವೈಭವ್ ಸೂರ್ಯವಂಶಿ, ಇದೀಗ ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ಯು-19 ಏಕದಿನ ಸರಣಿಯಲ್ಲಿ ರನ್ಗಳ ಮಳೆಯನ್ನೇ ಸುರಿಸಿದ್ದಾರೆ.

ರಾಜಸ್ಥಾನ್ ರಾಯಲ್ಸ್ ಪರ ಐಪಿಎಲ್ 2025ರಲ್ಲಿ 35 ಎಸೆತಗಳಲ್ಲಿ ಶತಕ ಸಿಡಿಸಿ ಸುದ್ದಿ ಮಾಡಿಕೊಂಡಿದ್ದ ವೈಭವ್, ಅಂಡರ್-19 ಸರಣಿಯ ನಾಲ್ಕು ಪಂದ್ಯಗಳಲ್ಲಿ 322 ರನ್ ಗಳಿಸಿದ್ದು, ಇವರ ಸರಾಸರಿ 80.50 ಮತ್ತು ಸ್ಟ್ರೈಕ್ ರೇಟ್ 198.76 ಇದೆ. ಶನಿವಾರದ ಪಂದ್ಯದಲ್ಲಿ ಅವರು ಕೇವಲ 52 ಎಸೆತಗಳಲ್ಲಿ ಶತಕ ದಾಖಲಿಸಿದ್ದಾರೆ.

ವೈಭವ್ ಸೂರ್ಯವಂಶಿ ಬಿಹಾರದ ಸಮಷ್ಟಿಪುರ ಜಿಲ್ಲೆಯ ತಾಜ್ಪುರ ಗ್ರಾಮದವರು. ಅವರು 14 ವರ್ಷದವರೆಗೂ ತಮ್ಮ ತಂದೆಯಿಂದಲೇ ಕ್ರಿಕೆಟ್ ತರಬೇತಿ ಪಡೆದರು. ನಂತರ ಸಮಷ್ಟಿಪುರ ಮತ್ತು ಪಾಟ್ನಾದ ಅಕಾಡೆಮಿಗಳಲ್ಲಿ ತರಬೇತಿಗೆ ಸೇರಿದ್ದರು.

ಐಪಿಎಲ್ ಮೆಗಾ ಹರಾಜಿನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಅವರುಗಾಗಿ ₹1.1 ಕೋಟಿ ಮೊತ್ತವನ್ನು ಹೂಡಿತ್ತು. ತಜ್ಞರ ಪ್ರಕಾರ, ವೈಭವ್ ಅವರ ನಿವ್ವಳ ಮೌಲ್ಯ ಈಗ ₹1 ರಿಂದ ₹1.5 ಕೋಟಿ ರೂ.ಗಳ ನಡುವೆ ಇದೆ. ಅವರು ದೇಶೀಯ ಕ್ರಿಕೆಟ್ ಪಂದ್ಯ ಶುಲ್ಕ ಹಾಗೂ ಜಾಹೀರಾತುಗಳಿಂದ ಕೂಡಾ ಆದಾಯ ಸಂಪಾದಿಸುತ್ತಿದ್ದಾರೆ. ವೈಭವ್ ಅವರ ಇತ್ತೀಚಿನ ಫಾರ್ಮ್ ನೋಡಿ, ಮುಂದಿನ ಐಪಿಎಲ್ ಸೀಸನ್ಗೂ ಅವರು ರಾಜಸ್ಥಾನ್ ತಂಡದಲ್ಲೇ ಉಳಿಯುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow