Vaishnavi Gowda: ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ “ಅಗ್ನಿಸಾಕ್ಷಿ” ಖ್ಯಾತಿಯ ವೈಷ್ಣವಿ ಗೌಡ..! ಹುಡುಗ ಯಾರು? ಇಲ್ಲಿದೆ ಡಿಟೈಲ್ಸ್

ಎಪ್ರಿಲ್ 15, 2025 - 11:59
 0  18
Vaishnavi Gowda: ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ “ಅಗ್ನಿಸಾಕ್ಷಿ” ಖ್ಯಾತಿಯ ವೈಷ್ಣವಿ ಗೌಡ..! ಹುಡುಗ ಯಾರು? ಇಲ್ಲಿದೆ ಡಿಟೈಲ್ಸ್

ಅಗ್ನಿಸಾಕ್ಷಿ ಸೀರಿಯಲ್​ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡ ನಟಿ ಎಂದರೆ ಅದು ವೈಷ್ಣವಿ ಗೌಡ. ಹೊಸ ಹೊಸ ಫೋಟೋಶೂಟ್​ಗಳ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಌಕ್ಟೀವ್ ಆಗಿರುತ್ತಾರೆ. ಜೊತೆಗೆ ಕಿರುತೆರೆ ಅಂಗಳದಲ್ಲೇ ಮೋಸ್ಟ್ ಅವೈಟೆಡ್ ಮೂಮೆಂಟ್ ಅಂದರೆ ಸೀತಾ ರಾಮ ಧಾರಾವಾಹಿ. ಇದೇ ಧಾರಾವಾಹಿಯಲ್ಲಿ ನಟಿಯ ಅಭಿನಯಕ್ಕೆ ಫ್ಯಾನ್ಸ್​ ಫಿದಾ ಆಗಿಬಿಟ್ಟಿದ್ದಾರೆ.

ಇನ್ನೂ ಅವರು ಸದ್ದಿಲ್ಲದೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಸಂದರ್ಭದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ನಟಿ ನಿಶ್ಚಿತಾರ್ಥ ಆಗಿರೋದು ಅಭಿಮಾನಿಗಳಿಗೆ ಶಾಕ್ ಹಾಗೂ ಖುಷಿ ಎರಡನ್ನೂ ನೀಡಿದೆ. ಅವರಿಗೆ ಎಲ್ಲ ಕಡೆಗಳಿಂದ ಅಭಿನಂದನೆಗಳು ಬರುತ್ತಿವೆ. ಹಾಗಾದರೆ ವೈಷ್ಣವಿ ಗೌಡ ಅವರು ಮದುವೆ ಆಗುತ್ತಿರುವ ಹುಡುಗ ಯಾರು? ಅವರ ಹಿನ್ನೆಲೆ ಏನು ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

https://www.instagram.com/p/DIcyU4BibFW/?utm_source=ig_embed&ig_rid=8bad0c77-1350-4c09-b4b3-f59cc749e401&img_index=9

ವೈಷ್ಣವಿ ಗೌಡ ಅವರು ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ತಮಗೆ ಮದುವೆ ಬಗ್ಗೆ ಇರುವ ಕನಸುಗಳ ಬಗ್ಗೆ ಹೇಳಿಕೊಂಡಿದ್ದರು. ಮದುವೆನ ಹೀಗೆ ಆಗ್ತೀನಿ, ಹಾಗೆ ಆಗ್ತೀನಿ ಎಂದೆಲ್ಲ ವಿವರಿಸಿದ್ದರು. ಅವರಿಗೆ ಸಾಕಷ್ಟು ಮದುವೆ ಆಫರ್​ಗಳು ಬಂದರೂ ಅದನ್ನು ಒಪ್ಪಿಲ್ಲ ಎಂದಿದ್ದರು. ಈಗ ವೈಷ್ಣವಿ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಅವರ ಎಂಗೇಜ್​ಮೆಂಟ್ ಫೋಟೋ ಹಾಗೂ ವಿಡಿಯೋಗಳನ್ನು ಫ್ಯಾನ್ಸ್ ಶೇರ್ ಮಾಡಿಕೊಳ್ಳುತ್ತಿದ್ದಾರೆ.

ವೈಷ್ಣವಿ ಅವರು ‘ಸೀತಾ ರಾಮ’ ಧಾರಾವಾಹಿಯಲ್ಲಿ ಸೀತಾ ಹೆಸರಿನ ಪಾತ್ರ ಮಾಡುತ್ತಿದ್ದಾರೆ. ಈ ಪಾತ್ರ ಸಾಕಷ್ಟು ಗಮನ ಸೆಳೆದಿದೆ. ಈ ಧಾರಾವಾಹಿಯ ಕಲಾವಿದೆ ಮೇಘನಾ ಶಂಕರಪ್ಪ ಅವರು ಇತ್ತೀಚೆಗೆ ವಿವಾಹ ಆಗಿದ್ದರು. ಈಗ ಧಾರಾವಾಹಿ ತಂಡದಲ್ಲಿ ಮತ್ತೊಂದು ಮದುವೆ ನೆರವೇರುತ್ತಿದೆ.

ಹುಡುಗ ಯಾರು?

ವೈಷ್ಣವಿ ಗೌಡ ಅವರು ಮದುವೆ ಆಗುತ್ತಿರುವ ಹುಡುಗನ ಹೆಸರು ಅನುಕೂಲ್​ ಎಂದು. ಅವರು ತಮ್ಮದೇ ಆದ ಉದ್ಯಮ ಹೊಂದಿದ್ದಾರೆ ಎನ್ನಲಾಗಿದೆ. ಈ ಮೂಲಕ ವೈಷ್ಣವಿ ಅವರು ಬಣ್ಣದ ಲೋಕದವರನ್ನು ಬಿಟ್ಟು ಹೊರಗಿನವರನ್ನು ಕೈ ಹಿಡಿಯುತ್ತಿದ್ದಾರೆ.

ಅದ್ದೂರಿ ಎಂಗೇಜ್​ಮೆಂಟ್

ವೈಷ್ಣವಿ ಗೌಡ ಅವರು ಅದ್ದೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮದುವೆ ಹಾಗೂ ಎಂಗೇಜ್​ಮೆಂಟ್ ಬಗ್ಗೆ ಅವರು ತಮ್ಮದೇ ಆದ ಕಲ್ಪನೆಗಳನ್ನು ಹೊಂದಿದ್ದಾರೆ. ಅವರು ಅಂದುಕೊಂಡ ರೀತಿಯಲ್ಲೇ ನಿಶ್ಚಿತಾರ್ಥ ನೆರವೇರಿದೆ ಎಂದು ಹೇಳಲಾಗುತ್ತಿದೆ. ಈ ವಿವಾಹಕ್ಕೆ ಆಪ್ತರು ಹಾಗೂ ಕುಟುಂಬದವರು ಮಾತ್ರ ಹಾಜರಿ ಹಾಕಿದ್ದರು. ವಿವಾಹದ ದಿನಾಂಕ ಇನ್ನಷ್ಟೇ ರಿವೀಲ್ ಆಗಬೇಕಿದೆ.

 

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow