Virat Kohli: RCB ಫ್ಯಾನ್ಸ್ʼಗೆ ಬಿಗ್ ಶಾಕ್: ಬೆಂಗಳೂರು ತಂಡಕ್ಕೆ ವಿರಾಟ್ ಕೊಹ್ಲಿ ವಿದಾಯ?!
ಟೀಮ್ ಇಂಡಿಯಾದ ಸ್ಟಾರ್ ಬ್ಯಾಟ್ಸ್‌ಮನ್ ಮತ್ತು ಕಿಂಗ್ ವಿರಾಟ್ ಕೊಹ್ಲಿರನ್ನು ಮತ್ತೆ ಮೈದಾನದಲ್ಲಿ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಕ್ಟೋಬರ್ 19 ರಿಂದ ಆರಂಭವಾಗುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಏಕದಿನ ಸರಣಿಯಲ್ಲಿ ಕೊಹ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಲಿದ್ದಾರೆ. ಇದರ ನಡುವೆ ಇದು ಕೊಹ್ಲಿ ಅವರ ಕೊನೆಯ ಸರಣಿಯಾಗುತ್ತದೆಯೇ ಎಂಬ ಚರ್ಚೆ ನಡೆಯುತ್ತಿದೆ.
ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಲ್ಲದಿದ್ದರೂ, ಕನಿಷ್ಠ ಐಪಿಎಲ್‌ನಲ್ಲಿ. ಆದರೆ, ಕೊಹ್ಲಿ ಇತ್ತೀಚೆಗೆ ತೆಗೆದುಕೊಂಡ ನಿರ್ಧಾರವು ಅವರ ಅಭಿಮಾನಿಗಳಿಗೆ ಶಾಕ್ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಗುಡ್ ಬೈ ಹೇಳುವ ಮೂಲಕ ಕಿಂಗ್ ಕೊಹ್ಲಿ ಐಪಿಎಲ್ ಕೆರಿಯರ್ ಅಂತ್ಯಗೊಳಿಸಲು ನಿರ್ಧರಿಸಿದ್ದಾರೆ ಎನ್ನಲಾಗುತ್ತಿದೆ.
ಐಪಿಎಲ್ ಸೀಸನ್-19 ಗೂ ಮುಂಚಿತವಾಗಿ ವಿರಾಟ್ ಕೊಹ್ಲಿ ಪ್ರಮುಖ ಕಂಪನಿಯೊಂದಿಗೆ ತಮ್ಮ ಒಪ್ಪಂದವನ್ನು ನವೀಕರಿಸಲು ನಿರಾಕರಿಸಿದ್ದಾರೆ. ಈ ಒಪ್ಪಂದವನ್ನು ಐಪಿಎಲ್ 2026 ರ ಮೊದಲು ನವೀಕರಿಸಬೇಕಿತ್ತು. ಆದರೆ ಆರ್ಸಿಬಿ ಸ್ಟಾರ್ ಆಟಗಾರ ಹಾಗೆ ಮಾಡದಿರುವುದು ಇದೀಗ ಅನುಮಾನಕ್ಕೆ ಕಾರಣವಾಗಿದೆ.
ಆರ್ಸಿಬಿ ಜೊತೆ ಸಂಪರ್ಕ ಹೊಂದಿರುವ ಕಂಪೆನಿಯೊಂದರ ಜೊತೆ ವಿರಾಟ್ ಕೊಹ್ಲಿ ಹೊಸ ಒಪ್ಪಂದವನ್ನು ನವೀಕರಿಸಿಲ್ಲ. ಕೊಹ್ಲಿಯ ಈ ನಡೆಗೆ ಕಾರಣವೇನು ಎಂಬುದು ಇನ್ನೂ ಸಹ ಬಹಿರಂಗವಾಗಿಲ್ಲ. ಆದರೆ ಇಂತಹದೊಂದು ನಿರ್ಧಾರವು ಇದೀಗ ಎಲ್ಲರನ್ನು ಆಶ್ಚರ್ಯಗೊಳಿಸಿದೆ.
ಐಪಿಎಲ್‌ನ ಮುಂದಿನ ಸೀಸನ್ ಮಾರ್ಚ್ 2026 ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಈ ಸೀಸನ್‌ಗಾಗಿ ಆಟಗಾರರನ್ನು ಉಳಿಸಿಕೊಳ್ಳುವ-ಬಿಡುಗಡೆ ಮಾಡುವ ಗಡುವು ನವೆಂಬರ್ 15 ಆಗಿದ್ದು, ಡಿಸೆಂಬರ್ ಎರಡನೇ ಅಥವಾ ಮೂರನೇ ವಾರದಲ್ಲಿ ಮಿನಿ ಹರಾಜು ನಡೆಯುವ ಸಾಧ್ಯತೆಯಿದೆ. ಮುಂಬರುವ ಐಪಿಎಲ್ ಸೀಸನ್ ಪ್ರಾರಂಭವಾಗುವವರೆಗೆ ಅಭಿಮಾನಿಗಳು ವಿರಾಟ್ ಕೊಹ್ಲಿಯ ಪ್ರತಿಯೊಂದು ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಾರೆ. ಇದೀಗ, ಮುಂಬರುವ ಏಕದಿನ ಸರಣಿಯಲ್ಲಿ ಕೊಹ್ಲಿ ಆಡುವ ಮೂಲಕ ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನ ನೀಡುವ ಸಾಧ್ಯತೆಯಿದೆ.
ನಿಮ್ಮ ಪ್ರತಿಕ್ರಿಯೆ ಏನು?