Yash: ಪತ್ನಿ ಮಕ್ಕಳ ಜೊತೆ ನ್ಯೂ ಇಯರ್ ಆಚರಿಸಿದ ರಾಕಿಂಗ್ ಸ್ಟಾರ್ ಯಶ್!

ಜನವರಿ 1, 2025 - 18:00
 0  10
Yash: ಪತ್ನಿ ಮಕ್ಕಳ ಜೊತೆ ನ್ಯೂ ಇಯರ್ ಆಚರಿಸಿದ ರಾಕಿಂಗ್ ಸ್ಟಾರ್ ಯಶ್!

ಬೆಂಗಳೂರು: 2024 ವರ್ಷ ಮುಗಿದಿದೆ, 2025ನೇ ವರ್ಷಕ್ಕೆ ಕಾಲಿಟ್ಟಿದ್ದು, ವಿಶ್ವದಾದ್ಯಂತ ಗ್ರ್ಯಾಂಡ್ವೆಲ್ಕಮ್ಮಾಡಿಯೂ ಆಯ್ತು. ಹೊಸ ವರ್ಷವನ್ನು ಎಲ್ಲೆಡೆ ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಜನರು ಕುಡಿದು, ಕುಣಿದು ಹೊಸ ವರ್ಷದ ಹರುಷವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಿದ್ರು. ಇನ್ನು ಬಾರಿಯ ಹೊಸ ವರ್ಷದ ಸಂಭ್ರಮಾಚರಣೆಯನ್ನೂ ರಾಕಿಂಗ್ ಸ್ಟಾರ್ ಯಶ್ ಫ್ಯಾಮೀಲಿ ಜೊತೆ ಆಚರಿಸಿದ್ದಾರೆ.

ಹೌದು ನಮ್ಮ ಪುಟ್ಟ ಕುಟುಂಬದ ಕಡೆಯಿಂದ ಹೊಸ ವರ್ಷಕ್ಕೆ ಶುಭಾಶಯಗಳು. ನಿಮ್ಮೆಲ್ಲರಿಗೂ ಸಂತೋಷ, ಪ್ರೀತಿ ಮತ್ತು ನಗು ತುಂಬಿರಲಿ ಎಂದು ಹಾರೈಸುತ್ತೇನೆ. ನಮ್ಮ ಕಡೆಯಿಂದ ನಿಮಗೆ ಹೊಸ ವರ್ಷದ ಶುಭಾಶಯಗಳು ಎಂದು ಯಶ್ ದಂಪತಿ ಫ್ಯಾನ್ಸ್‌ಗೆ ವಿಶ್ ಮಾಡಿದ್ದಾರೆ.

ಯಶ್ ಕುಟುಂಬದ ಹ್ಯಾಪಿ ಮೂಮೆಂಟ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಇನ್ನೂ ಯಶ್ ಕಂದು ಬಣ್ಣದ ಧಿರಿಸಿನಲ್ಲಿದ್ರೆ, ರಾಧಿಕಾ ಬಿಳಿ ಬಣ್ಣದ ಉಡುಗೆ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ನಟಿಯ ಬ್ಯೂಟಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಸದ್ಯ ಯಶ್‌ ಅವರು ಟಾಕ್ಸಿಕ್‌ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow