ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕಮಲಾ ಹ್ಯಾರಿಸ್‌ಗೆ ಕೈ ಕೊಡ್ತಾರಾ ಮುಸ್ಲಿಮರು? ಕಾರಣ ಏನು?

ಅಮೆರಿಕ ಅಧ್ಯಕ್ಷೀಯ ಚುನಾವಣೆ: ಕಮಲಾ ಹ್ಯಾರಿಸ್‌ಗೆ ಕೈ ಕೊಡ್ತಾರಾ ಮುಸ್ಲಿಮರು? ಕಾರಣ ಏನು?
ಡೆಮಾಕ್ರೆಟಿಕ್ ಪಕ್ಷದ ವಿರುದ್ಧ ಮುಸ್ಲಿಮರು ಸಿಟ್ಟಾಗಿದ್ದಾರೆ. ಹೀಗಾಗಿ, ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಮುಸ್ಲಿಂ ಮತದಾರರ ಮನ ಗೆಲ್ಲಲು ಆಡಳಿತಾರೂಢ ಡೆಮಾಕ್ರೆಟಿಕ್ ಪಕ್ಷದ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರು ಹರಸಾಹಸಪಡುವಂತಾಗಿದೆ. ಇದಕ್ಕೆ ಕಾರಣ ಡೆಮಾಕ್ರೆಟಿಕ್ ಪಕ್ಷದವರೇ ಆದ ಹಾಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರ ನಿಲುವು!
ಪ್ಯಾಲಸ್ತೀನ್ ದೇಶದ ಭಾಗವಾದ ಗಾಜಾ ಪಟ್ಟಿಯಲ್ಲಿ ಯುದ್ಧ ಮುಂದುವರೆದಿದೆ. ಇಸ್ರೇಲ್ ಸೇನೆ ಕಳೆದ 10 ತಿಂಗಳಿಂದ ಬಾಂಬ್‌ಗಳ ಮಳೆಯನ್ನೇ ಸುರಿಸಿದೆ. ಗಾಜಾ ಪಟ್ಟಿಯಲ್ಲಿ ಹಮಾಸ್ ಉಗ್ರರು, ಜನ ಸಾಮಾನ್ಯರು, ಮಹಿಳೆಯರು ಹಾಗೂ ಮಕ್ಕಳೂ ಸೇರಿದಂತೆ 40 ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಯುದ್ಧ ನಿಲ್ಲಿಸಿ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರು ಪದೇ ಪದೇ ತಾಕೀತು ಮಾಡುತ್ತಲೇ ಇದ್ದಾರೆ.
ರಾಜ್ಯದಲ್ಲಿ ಅರಬ್ ಹಾಗೂ ಮಧ್ಯ ಪ್ರಾಚ್ಯ ಪ್ರಾಂತ್ಯದ ಮೂಲದ ಮುಸ್ಲಿಮರು ನೆಲೆಸಿದ್ದಾರೆ. ಅದರಲ್ಲೂ ಮಿಚಿಗನ್ ರಾಜ್ಯದ ಡಿಯರ್‌ಬಾರ್ನ್ ನಗರವು ಮುಸ್ಲಿಮರಿಂದಲೇ ತುಂಬಿದೆ. ಈ ನಗರದಲ್ಲಿ ಬರೋಬ್ಬರಿ 1 ಲಕ್ಷದ 10 ಸಾವಿರ ಮುಸ್ಲಿಮರ ಮನೆಗಳಿವೆ. ಜೊತೆಯಲ್ಲೇ ಅರಬ್ ಅಮೆರಿಕನ್ನರ ಸಾಂಸ್ಕೃತಿಕ ಕೇಂದ್ರವಾಗಿಯೂ ಈ ನಗರ ಹೆಸರು ಗಳಿಸಿದೆ. ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಇಲ್ಲಿನ ಜನ ಕಮಲಾ ಹ್ಯಾರಿಸ್ ಅವರಿಗೆ ಕೈ ಕೊಡುವ ಸಾಧ್ಯತೆ ಇದೆ.
ಬ್ಯುರೊ ರಿಪೋರ್ಟ್
ಫೋಕಸ್ ಕರ್ನಾಟಕ
ನಿಮ್ಮ ಪ್ರತಿಕ್ರಿಯೆ ಏನು?






