ಆತುರಾತುರದಲ್ಲಿ HSRP ನಂಬರ್​ ಪ್ಲೇಟ್​ ಅಪ್ಲೈ ಮಾಡೋ ಮುನ್ನ ಎಚ್ಚರ! ಮೋಸ ಹೋಗ್ತೀರಾ ಜನರೇ!

ಫೆಬ್ರವರಿ 13, 2025 - 08:11
 0  14
ಆತುರಾತುರದಲ್ಲಿ HSRP ನಂಬರ್​ ಪ್ಲೇಟ್​ ಅಪ್ಲೈ ಮಾಡೋ ಮುನ್ನ ಎಚ್ಚರ! ಮೋಸ ಹೋಗ್ತೀರಾ ಜನರೇ!

ಹೆಚ್​​ಎಸ್​​ಆರ್​​ಪಿ ನಂಬರ್​ ಪ್ಲೇಟ್  ಅಳವಡಿಕೆ ಗಡುವು ಮತ್ತೆ ವಿಸ್ತರಣೆಯಾಗಿದೆ. ರಾಜ್ಯ ಸಾರಿಗೆ ಇಲಾಖೆ ಈವರೆಗೆ 6 ಬಾರಿ ಗಡುವು ವಿಸ್ತರಣೆ ಮಾಡಿದೆ. ಹೆಚ್​​ಎಸ್​​ಆರ್​​ಪಿ ನಂಬರ್​ ಪ್ಲೇಟ್​ ಅಳವಡಿಕೆಗೆ 6 ಬಾರಿ ಸಮಯ ವಿಸ್ತರಿಸಿದರೂ ಸಹ ವಾಹನ ಮಾಲೀಕರು ತಮ್ಮ ವಾಹನಕ್ಕೆ ಹೆಚ್​ಎಸ್​ಆರ್​ಪಿ ನಂಬರ್​ ಪ್ಲೇಟ್​ ಅಳವಡಿಸಿಕೊಂಡಿಲ್ಲ. ಹೀಗಾಗಿ, ರಾಜ್ಯ ಸಾರಿಗೆ ಇಲಾಖೆ ಮತ್ತೊಂದು ಅವಕಾಶ ನೀಡಿದೆ. 

HSRP ನಂಬರ್​ ಪ್ಲೇಟ್​ ಅಳವಡಿಕೆಗೆ 6 ಬಾರಿ ಸಮಯ ವಿಸ್ತರಿಸಿದ್ರೂ ವಾಹನ ಮಾಲೀಕರು ಇನ್ನೂ ಮಾಡಿಸುತ್ತಲೇ ಇದ್ದಾರೆ. ಇದರ ಮಧ್ಯೆ ಸ್ಕ್ಯಾಮ್​ ಒಂದು ಹೊರಬಿದ್ದಿದೆ.

ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ಕಡ್ಡಾಯ ಎಂಬ ಕಾನೂನು ಬಂದು ಹಲವು ದಿನಗಳಾಯ್ತು. ಹೀಗಾಗಿ ವಾಹನ ಸವಾರರು ಅದರ ನೋಂದಣಿ ಮಾಡಲು ಮುಂದಾಗಿದ್ದಾರೆ. ಹೀಗಾಗಿ ರಿಜಿಸ್ಟರ್​ಗೆ ಆನ್​ಲೈನ್ ಮೊರೆ ಹೋಗುತ್ತಿದ್ದಾರೆ. ​ಆದರೆ ಆನ್​ಲೈನ್​ನಲ್ಲಿ ಹೆಚ್ಎಸ್ಆರ್​ಪಿ ನಂಬರ್​ ಪ್ಲೇಟ್​ ವಿಚಾರವಾಗಿ ದೊಡ್ಡ ಮೋಸದ ಜಾಲವೊಂದು ಬೆಳಕಿಗೆ ಬಂದಿದೆ. ಕೊಂಚ ಯಾಮಾರಿದರೂ ಹಣ ಗುಳುಂ ಆಗುವ ಸಾಧ್ಯತೆ ಇದೆ.

ಬಹುತೇಕರು ಆನ್‌ಲೈನ್ ನಲ್ಲಿ ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್​​ಗೆ ಅಪ್ಲೈ ಮಾಡುತ್ತಿದ್ದಾರೆ. ಆದರೆ ಆನ್‌ಲೈನ್​ನಲ್ಲಿ ನಕಲಿ ಕ್ಯೂ ಆರ್ ಕೋಡ್ ಲಿಂಕ್​ಗಳು ಹರಿದಾಡುತ್ತಿವೆ. ಅಪ್ಪಿತಪ್ಪಿ ನಕಲಿ ಕ್ಯೂ ಆರ್ ಕೋಡ್ ಕ್ಲಿಕ್ ಮಾಡಿದ್ರೆ ಹಣ ಮಂಗ ಮಾಯವಾಗುವ ಸಾಧ್ಯತೆ ಇದೆ.

ಹೆಚ್ಎಸ್ಆರ್​ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ದೋಖಾ ಶುರುವಾಗಿದೆ. ಖದೀಮರು ನಕಲಿ ಲಿಂಕ್ ಹರಿಬಿಟ್ಟು ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ನೋಂದಣಿ ಬಳಿಕ ಕ್ಯೂ ಆರ್ ಕೋಡ್ ನೀಡುತ್ತಾರೆ. ಆದರೆ ಕ್ಯೂ ಆರ್ ಕೋಡ್ ಟಚ್ ಮಾಡಿದ್ರೆ ಅಪರಿಚಿತರಿಗೆ ಲಿಂಕ್ ರವಾನೆಯಾಗುತ್ತೆ. ಸ್ವಲ್ಪ ಯಾಮಾರಿದ್ರೂ ನಿಮ್ಮ ಹಣ ಖದೀಮರ ಪಾಲಾಗುವ ಸಾಧ್ಯತೆ ಇದೆ.

ಹೀಗೆ ಹಲವರು ಮೋಸದ ಜಾಲದ ಸಿಲುಕಿದ್ದಾರೆ. ನಕಲಿ ಕ್ಯೂ ಆರ್ ಕೋಡ್ ಸ್ಕ್ಯಾಮ್​​ಗೆ ಬಲಿಯಾಗಬೇಡಿ.

ನಿಮ್ಮ ಪ್ರತಿಕ್ರಿಯೆ ಏನು?

like

dislike

love

funny

angry

sad

wow